‘ಕೆ.ಜಿ.ಎಫ್’ ರೆಕಾರ್ಡ್ ಮುರಿದ ‘ಯುವರತ್ನ’

ಓಟಿಟಿ ಸೇಲ್ನಲ್ಲಿ ಪವರ್ ಸ್ಟಾರ್ ಹೊಸ ದಾಖಲೆ

ಯುವರತ್ನ. ಸದ್ಯ ಸ್ಯಾಂಡಲ್ವುಡ್ನಲ್ಲಿ ಟ್ರೆಂಡಿಂಗ್ನಲ್ಲಿ ಟಾಕ್ ಕ್ರಿಯೇಟ್ ಮಾಡಿರೋ ಸಿನಿಮಾ. ಸಿನಿಮಾ ನೋಡಿದೋರೆಲ್ಲಾ ಸೂಪರ್, ಒಳ್ಳೆ ಮೆಸೇಜ್ ಇದೆ ಅಂತಾ ಹೇಳ್ತಿದ್ದಾರೆ. ಫ್ಯಾಮಿಲಿ ಸಮೇತ ಯುವರತ್ನನನ್ನ ನೋಡೋಕೆ ಜನ ಥಿಯೇಟರ್ಗೆ ಬರ್ತಿದ್ದಾರೆ. ಆದ್ರೆ ಕೊರೊನಾ ಏಟಿನಿಂದ ಯುವರತ್ನ ಸಿನಿಮಾಗೆ ಎಫೆಕ್ಟ್ ತಾಕಿದೆ. ನಿನ್ನೆಯವರೆಗೆ ರಾಜ್ಯಸರ್ಕಾರ 100% ಥಿಯೇಟರ್ ಭರ್ತಿಗೆ ಅವಕಾಶ ನೀಡಿತ್ತು. ಇಂದಿನಿಂದ ರಾಜ್ಯದಲ್ಲಿ 50ರಷ್ಟು ಜನರಿಗೆ ಮಾತ್ರ ಥಿಯೇಟರ್ಗೆ ಬರೋಕೆ ಅವಕಾಶ ನೀಡಲಾಗಿದೆ. ಈ ಹಿನ್ನೆಲೆ ಇಂದಿನಿಂದ ಯುವರತ್ನ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗ್ತಿದೆ.

ಅಮೆಜಾನ್ ಪ್ರೈಮ್ನಲ್ಲಿ ಇಂದಿನಿಂದ ಪ್ರೀಮಿಯರ್ ಆಗ್ತಿರೋ ಯುವರತ್ನ ಕೆ.ಜಿ.ಎಫ್ ಸಿನಿಮಾದ ರೆಕಾರ್ಡ್ ಬ್ರೇಕ್ ಮಾಡಿದೆ ಅಂತಾ ಚಿತ್ರತಂಡ ಮಾಹಿತಿ ನೀಡಿದೆ. ಈ ಮುಂಚೆ ಕೆ.ಜಿ.ಎಫ್ ಸಿನಿಮಾ ಬರೋಬ್ಬರಿ 18 ಕೋಟಿಗೆ ಸೇಲ್ ಆಗಿತ್ತು. ಕೆ.ಜಿ.ಎಫ್ ಸಿನಿಮಾಗಿಂತ ಹೆಚ್ಚಿನ ಮೊತ್ತಕ್ಕೆ ಯುವರತ್ನ ಸಿನಿಮಾವನ್ನ ಅಮೆಜಾನ್ ಖರೀದಿಸಿದೆ ಅನ್ನೋ ಮಾಹಿತಿ ಹೊರ ಬಿದ್ದಿದೆ. ಆದ್ರೆ ಎಷ್ಟು ರೇಟ್ಗೆ ಸೇಲಾಗಿದೆ ಅನ್ನೋದ್ರ ಬಗ್ಗೆ ಚಿತ್ರತಂಡ ಮಾಹಿತಿ ನೀಡಿಲ್ಲ.

ಸಿನಿಮಾ ಇನ್ನೂ ಥಿಯೇಟರ್ನಲ್ಲಿ ಇರೋವಾಗ್ಲೇ ಡಿಜಿಟಲ್ಗೆ ಬಂದಿರೋದು ಅಭಿಮಾನಿಗಳಲ್ಲಿ ತೀವ್ರ ಬೇಸರ ತಂದಿದೆ. ಸಿನಿಮಾ ರಿಲೀಸ್ ಆಗಿ ಒಂದು ವಾರದ ನಂತರವೇ ಯುವರತ್ನ ಮೊಬೈಲ್ನಲ್ಲಿಯೇ ಸಿಗ್ತಿರೋದಕ್ಕೆ ಪವರ್ ಸ್ಟಾರ್ ಫ್ಯಾನ್ಸ್ಗಳು ಚಿತ್ರತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಒಳ್ಳೆ ಸಿನಿಮಾವಿದೆ, ಒಳ್ಳೆ ಕಂಟೆಂಟ್ ಇದೆ. ಮೆಸೇಜ್ ಇದೆ ಇನ್ನೂ ಸ್ವಲ್ಪ ದಿನ ಥಿಯೇಟರ್ನಲ್ಲಿರಲಿ ಅಂತಾ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಒತ್ತಾಯಿಸ್ತಿದ್ದಾರೆ. ಆದ್ರೆ ಕೊರೊನಾ ಕಾರಣದಿಂದ ಯುವರತ್ನ ಸಿನಿಮಾ ಅಮೆಜಾನ್ನಲ್ಲಿ ಪ್ರೀಮಿಯರ್ ಆಗ್ತಿದೆ. ಒಳ್ಳೆ ರೇಟ್ ಬಂದಿರೋದ್ರಿಂದ ಒಟಿಟಿಗೆ ಸಿನಿಮಾವನ್ನ ಬಿಟ್ಟುಕೊಡಲಾಗಿದೆ ಅಂತಾ ಚಿತ್ರತಂಡ ಹೇಳಿದೆ.