ಡಾಲಿ ಧನಂಜಯ್ ಅವರು ಯೆಲ್ಲೋ ಗ್ಯಾಂಗ್ಸ್ ನ ಮೊದಲ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ

↓ ನಾಯಕ ನಟರಾದ ಧನಂಜಯ ಅವರು  ಚಿತ್ರದ  ಪಾತ್ರಗಳನ್ನು ಪರಿಚಯಿಸುವ ಮೊದಲ ಪೋಸ್ಟರ್ ಅನ್ನು ಬಿಡುಗಡೆ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ.

ಕ್ರೈಂ-ಥ್ರಿಲ್ಲರ್ ಕಥಾಶೈಲಿಯ ‘ಯೆಲ್ಲೋ ಗ್ಯಾಂಗ್ಸ್’ ಕನ್ನಡ ಚಲನಚಿತ್ರವು ವಿಭಿನ್ನ ಸ್ಟುಡಿಯೊಸ್, ಕೀ ಲೈಟ್ಸ್ ಮತ್ತು ವಾಟ್ ನೆಕ್ಸ್ಟ್ ಮೂವೀಸ್ ಸಂಸ್ಥೆಗಳ ಸಹಯೋಗದಲ್ಲಿ ನಿರ್ಮಾಣವಾಗಿದ್ದು ಇದಕ್ಕೆ ರವೀಂದ್ರ ಪರಮೇಶ್ವರಪ್ಪ ಅವರ ರಚನೆ ಮತ್ತು ನಿರ್ದೇಶನವಿದೆ. ಎರಡು ಹಂತಗಳಲ್ಲಿ ಒಟ್ಟು 25 ದಿನಗಳ ಕಾಲ ನಡೆದ ಚಿತ್ರೀಕರಣವು ಸಂಪೂರ್ಣವಾಗಿ ಬೆಂಗಳೂರಿನಲ್ಲಿ ನಡೆದಿದೆ. ಛಾಯಾಗ್ರಹಣವನ್ನು ಸುಜ್ಞಾನ್ ಅವರು ನಿರ್ವಹಿಸಿದ್ದಾರೆ. ಚಿತ್ರಕ್ಕೆ ರೋಹಿತ್ ಸೋವರ್ ಅವರ ಸಂಗೀತ, ಸುರೇಶ್ ಆರ್ಮುಗಂ ಅವರ ಸಂಕಲನವಿದೆ. ಚಿತ್ರದ ಸಂಭಾಷಣೆಯನ್ನು ರವೀಂದ್ರ ಪರಮೇಶ್ವರಪ್ಪ ಹಾಗೂ ಪ್ರವೀಣ್ ಕುಮಾರ್ ಜಿ ಅವರುಗಳು ಬರೆದಿದ್ದಾರೆ. ಮನೋಜ್ ಪಿ, ಜಿ.ಎಂ.ಆರ್ ಕುಮಾರ್ (ಕೆವಿಜಿ), ಡಿ.ಎಸ್ ಪ್ರವೀಣ್
ಹಾಗೂ ಜೆ.ಎನ್.ವಿ, ಶಿವಮೊಗ್ಗ ಶಾಲೆಯ ಮಾಜಿ ವಿದ್ಯಾರ್ಥಿಗಳು ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ. ಲೋಕೇಶ್ ಹಿತ್ತಲಕೊಪ್ಪ ಅವರು ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಷಣ್ಮುಖ ಹಿರೇಮಧುರೆ ಮತ್ತು ಸುಪ್ರೀತ್ ಅವರು ಚಿತ್ರದ ಕಲಾ ನಿರ್ದೇಶಕರು. ಚಿತ್ರಕ್ಕೆ ಚೇತನ್ ಡಿಸೋಜಾ ಅವರ ಸಾಹಸ ಸಂಯೋಜನೆ ಮತ್ತು ದಿಲೀಪ್ ಶಿವಾನಂದ ಅವರ ವಸ್ತ್ರವಿನ್ಯಾಸವಿದೆ

ತಾರಾಗಣದಲ್ಲಿ ಬಲರಾಜ್ವಾಡಿ, ನಾಟ್ಯ ರಂಗ, ದೇವ್ ದೇವಯ್ಯ, ಅರ್ಚನಾ ಕೊಟ್ಟಿಗೆ, ಸತ್ಯ ಉಮ್ಮತ್ತಾಲ್, ಪ್ರದೀಪ್ ಪೂಜಾರಿ, ವಿನೀತ್ ಕಟ್ಟಿ, ಮಲ್ಲಿಕಾರ್ಜುನ ದೇವರಮನೆ, ನಂದಗೋಪಾಲ್, ರವಿ ಗಜ ಜಿಗಣಿ, ನೀನಾಸಂ ದಯಾನಂದ್, ಸತ್ಯ ಬಿ.ಜಿ, ವಿಠ್ಠಲ್ ಪರೀಟ, ಅರುಣ್ ಕುಮಾರ್, ಶ್ರೀಹರ್ಷ, ಸಂಚಾರಿ ಮಧು, ಪ್ರವೀಣ್ ಕೆ.ಬಿ, ಪವನ್ ಕುಮಾರ್ ಕೆ ಮತ್ತು ಮುಂತಾದವರಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ನಿರ್ದೇಶಕರಾದ ಯೋಗರಾಜ್ ಭಟ್ ಅವರು ಚಿತ್ರದ ಶೀರ್ಷಿಕೆಯನ್ನು ಬಿಡುಗಡೆ ಮಾಡಿ ತಂಡವನ್ನು ಹಾರೈಸಿದ್ದರು. ಇದೀಗ ನಾಯಕ ನಟರಾದ ಧನಂಜಯ ಅವರು ಚಿತ್ರದ ಪಾತ್ರಗಳನ್ನು ಪರಿಚಯಿಸುವ ಮೊದಲ ಪೋಸ್ಟರ್ ಅನ್ನು ಬಿಡುಗಡೆ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ. ಪ್ರವೀಣ್ ಮೇಗಳಮನಿ ಅವರ ಪ್ರಚಾರ ವಿನ್ಯಾಸದ ಪೋಸ್ಟರ್ರುಗಳಿಗೆ ಅದ್ಭುತವಾದ ಪ್ರತಿಕ್ರಿಯೆ ದೊರಕುತ್ತಿದೆ.