“ಯರ್ರಾಬಿರ್ರಿ” ಯಾಗಿ ಸೌಂಡ್ ಮಾಡುತ್ತಿರುವ ಟೀಸರ್

ಧಾರವಾಡ ಜಿಲ್ಲೆಯಿಂದ ಸ್ಯಾಂಡಲವುಡ್‌ಗೆ ಯರ್ರಾಬಿರ್ರಿ ಯಾಗಿ ಎಂಟ್ರಿ ಕೊಟ್ಟಿದ್ದಾರೆ. ಹೌದು! ‘ಯರ್ರಾಬಿರ್ರಿ’ ಎನ್ನುವ ಚಿತ್ರದಲ್ಲಿ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗೌಡಗೇರಿಗ್ರಾಮದ ರೈತನಮಗ ಅಂಜನ್ ಎನ್ನುವವರೆ. ಇದೀಗ  ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟು ಹೊಸ ಸಂಚಲನ ಸೃಷ್ಟಿಸಿದ್ದಾರೆ. ಯರ್ರಾಬಿರ್ರಿ ಚಿತ್ರದ ಡೈಲಾಗ್ ಟೀಸರನ್ನು ಮಾಜಿಸಚಿವ ವಿನಯ ಕುಲಕರ್ಣಿ ಶನಿವಾರ ಬಿಡುಗಡೆ ಮಾಡಿದ್ದಾರೆ.

ಈ ಡೈಲಾಗ್ ಟೀಸರ್ ಸಖತ್ ಸದ್ದು ಮಾಡುತ್ತಿದ್ದು, ಉತ್ತರ ಕರ್ನಾಟಕದ ಹುಲಿಯ ಅಬ್ಬರಕ್ಕೆ ಯುವ ಜನರು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ದಾಸ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ನಿರ್ಮಾಣ ಮಾಡಿರುವ ಈ ಯರ್ರಾಬಿರ್ರಿ ಚಿತ್ರವನ್ನು ಗೋವಿಂದ ದಾಸರ್ ನಿರ್ದೇಶಿಸಿ, ಚಿತ್ರಕಥೆ ಕೂಡ ಬರೆದಿದ್ದಾರೆ. ಶಿವು ಬೆರಗಿ ಸಂಗೀತ ನೀಡಿದ್ದು, ಡೈಲಾಗ್ ರಾಘವ ಮಹರ್ಷಿ, ಸೋನು ಪಾಟೀಲ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಸೆನ್ಸಾರ್ ಕೂಡ ಆಗಿದ್ದು, ಬಿಡುಗಡೆಗೆ ಸಿದ್ಧತೆ ನಡೆಸಿದೆ. ಬೆಂಗಳೂರು, ಧಾರವಾಡ, ಬಾಗಲಕೋಟೆ, ದಾಂಡೇಲಿ, ರಾಯಚೂರ, ಸೇರಿದಂತೆ ಅನೇಕ ಕಡೆಗಳಲ್ಲಿ ಚಿತ್ರೀಕರಣವಾಗಿದೆ.

ಮೂಲತಃ ಕೃಷಿ ಕುಟುಂಬದಿಂದ ಬಂದ ನಟ ಅಂಜನ್ ಒಬ್ಬ ಒಳ್ಳೆಯ ಡ್ಯಾನ್ಸರ್. ಅಲ್ಲಿಂದ ಸಿನಿಮಾ ಮೇಲೆ ಒಲವು ತೋರಿ ಸಾಕಷ್ಟು ಸಮಸ್ಯೆಗಳ ಮಧ್ಯೆ ಬೆಳೆದು ಬಂದು ಇದೀಗ ಒಂದು ಚಿತ್ರದಲ್ಲಿ ನಾಯಕ ನಟನಾಗಿ ಕೂಡ ಅಭಿನಯಿಸಿದ್ದಾರೆ. ಅಲ್ಲದೇ ‘ಯರ್ರಾಬಿರ್ರಿ’ ಚಿತ್ರದ ಡೈಲಾಗ್ ಟೀಸರ್ ನೋಡಿ ಅನೇಕ ಅವರ ಅಭಿಮಾನಿಗಳು ಮೈಮೇಲೆ ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಾರಂತೆ. ಉತ್ತರ ಕರ್ನಾಟಕ ಭಾಗದ ಅದರಲ್ಲೂ ಧಾರವಾಡದ ಒಂದು ಪ್ರತಿಭೆ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದು, ಅವರಿಗೆ ಸಾಲು ಸಾಲು ಅವಕಾಶಗಳು ಸಿಗಲಿ ಎಂಬುದೇ ನಮ್ಮ ಆಶಯ.ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ತಿಳಿಸಿ. 

ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.