‘ಕ್ಯಾನ್ಸರ್’ಗೆ ಕಷಾಯ ಮದ್ದು ಹೇಗೆ…..?

ಶ್ವಾಸಕೋಶ (ಲಂಗ್) ಕ್ಯಾನ್ಸರ್‌ನೊಂದಿಗೆ ಬಳಲುತ್ತಿರುವವರಿಗೆ ನವಣೆ ಮತ್ತು ಸಾಮೆ ಅಕ್ಕಿ ಸೂಕ್ತ. ಈ ಆಹಾರದ ಜತೆಗೆ, ಪ್ರತಿ ಮದ್ಯಾಹ್ನ ಶುಂಠಿ ಮತ್ತು ಅರಿಶಿಣದಿಂದ ತಯಾರಿಸಿದ ಕಷಾಯ ಸೇವನೆ ಅಗತ್ಯ.

ಕಷಾಯ ಅಂದ್ರೆ ಆರೋಗ್ಯಕರ ಪಾನೀಯ. ಇದರಲ್ಲಿ ಬಳಸುವ ಪದಾರ್ಥಗಳು, ನಾನು ಮೊದಲೇ ಹೇಳಿದಂತೆ ಪ್ರಾಕೃತಿಕ ಗಿಡ ಮೂಲಿಕೆಗಳು ಅಂದರೆ ಹೂವಿನ ದಳಗಳು, ಎಳಸು ಎಲೆಗಳು, ಸೊಪ್ಪು-ಸದೆ, ಸಾಂಬಾರ ಪದಾರ್ಥ ಹಾಗೂ ಬೇರುಗೆಡ್ಡೆಗಳೇ ಆಗಿರುತ್ತವೆ. ಕಷಾಯ ಮಾಡುವುದು ಬಹಳ ಸುಲಭ. ಸೂಚಿತ ಕಷಾಯಕ್ಕೆ ಬೇಕಾದ ಐದಾರು ಸಂಖ್ಯೆಯ ಎಲೆ / ಹೂವಿನ ದಳ / ಸೊಪ್ಪನ್ನು 150 ರಿಂದ 200 ಎಂ.ಎಲ್ ನೀರಿನಲ್ಲಿ ಸೇರಿಸಿ, 4 ನಿಮಿಷ ಚೆನ್ನಾಗಿ ಕುದಿಸಬೇಕು. ಎರಡು ನಿಮಿಷದ ಬಳಿಕ ಅದನ್ನು ಸೋಸಿ, ಬಿಸಿಯಾಗಿದ್ದಾಗ ಇಲ್ಲವೇ ತಂಪು ಮಾಡಿಕೊಂಡು, ನಿತ್ಯವೂ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ತಾಮ್ರದ ಪಾತ್ರೆಯಲ್ಲಿ ಶೇಖರಣೆ ಮಾಡಿಟ್ಟ ನೀರನ್ನೇ ಕಷಾಯ ಮಾಡಲು ಬಳಸಿದರೆ ಇನ್ನೂ ಉತ್ತಮ.
ದೇಹಕ್ಕೆ ದಾಳಿಯಿಡುವ ಯಾವುದೇ ರೀತಿಯ ಕ್ಯಾನ್ಸರ್ ಇರಲಿ, ಅದಕ್ಕೆ ಪಾರಿಜಾತ, ಅರಳಿ ಹಾಗೂ ಸೀಬೆ ಎಲೆಯಿಂದ ತಯಾರಿಸಿದ ಕಷಾಯಗಳು ಒಳ್ಳೆಯದು. ಮೊದಲ ವಾರ ಪಾರಿಜಾತ, ಎರಡನೇ ವಾರ ಅರಳಿ ಹಾಗೂ ಮೂರನೇ ವಾರ ಸೀಬೆ ಎಲೆಯಿಂದ ತಯಾರಿಸಿದ ಕಷಾಯಗಳನ್ನು ನಿಯಮಿತವಾಗಿ 3-4 ತಿಂಗಳು ಸೇವನೆ ಮಾಡುತ್ತಲೇ ಇರಬೇಕು.
ಶ್ವಾಸಕೋಶ, ಮೂಳೆ, ಮೆದುಳು, ರಕ್ತದ ಕ್ಯಾನ್ಸರ್‌ ಸೇರಿದಂತೆ ಎಲ್ಲ ರೀತಿಯ ಅರ್ಬುದ ಪೀಡಿತರೂ ಈ ಮೂರು ಕಷಾಯಗಳನ್ನು ನಿತ್ಯ ಬೆಳಿಗ್ಗೆ ಮತ್ತು ಸಂಜೆ ಕುಡಿಯಬೇಕು. ಇದರ ಜೊತೆಗೆ ಬೇರೆ ಬೇರೆ ಕ್ಯಾನ್ಸರ್‌ಗೆ ನಾನು ಕೆಳಗೆ
ಸೂಚಿಸಿರುವ ಕಷಾಯಗಳನ್ನು ತೆಗೆದುಕೊಳ್ಳುವುದು ಸೂಕ್ತ.

ಶ್ವಾಸಕೋಶ (ಲಂಗ್) ಕ್ಯಾನ್ಸರ್‌ನೊಂದಿಗೆ ಬಳಲುತ್ತಿರುವವರಿಗೆ ನವಣೆ ಮತ್ತು ಸಾಮೆ ಅಕ್ಕಿ ಸೂಕ್ತ. ಈ ಆಹಾರದ ಜತೆಗೆ, ಪ್ರತಿ ಮದ್ಯಾಹ್ನ ಶುಂಠಿ ಮತ್ತು ಅರಿಶಿಣದಿಂದ ತಯಾರಿಸಿದ ಕಷಾಯ ಸೇವನೆ ಅಗತ್ಯ. ಒಂದು ವಾರ ಶುಂಠಿ, ಇನ್ನೊಂದು ವಾರ ಅರಿಶಿಣ ಎಂಬ ಮಾಲಿಕೆಯಲ್ಲಿ ಊಟಕ್ಕೆ ಮುನ್ನ ಈ ಎರಡು ರೀತಿಯ ಕಷಾಯಗಳನ್ನು ಸೇವಿಸುವ ಶಿಸ್ತನ್ನು ರೂಢಿಸಿಕೊಳ್ಳಬೇಕು.

ಮೂಳೆ (ಬೋನ್) ಕ್ಯಾನ್ಸರ್‌ನೊಂದಿಗೆ ಬದುಕು ಸಾಗಿಸುತ್ತಿರುವವರಿಗೆ ಕೊರ್ಲೆ, ಸಾಮೆ ಮತ್ತು ಆರ್ಕ ಅಕ್ಕಿ ಹೇಳಿ ಮಾಡಿಸಿದ ಸಿರಿಧಾನ್ಯಗಳು. ಈ ಧಾನ್ಯಗಳಿಂದ ತಯಾರಿಸಿದ ರುಚಿಕಟ್ಟಾದ ಆಹಾರವನ್ನೇ ಅವರು ಸೇವಿಸಬಹುದು. ಅನ್ನ ತಿನ್ನಲು ಸಾಧ್ಯವಿಲ್ಲ ಎಂದಾದರೆ, ಗಂಜಿ ಮಾಡಿಸಿಕೊಂಡು ಕುಡಿಯಲಿ, ಮೆಂತ್ಯ ಸೊಪ್ಪು ಹಾಗೂ ಪುದಿನದಿಂದ ಮಾಡಿದ ಕಷಾಯಗಳು ಮೂಳೆ ಕ್ಯಾನ್ಸರ್‌ಗೆ ಸೂಕ್ತ. ಒಂದು ವಾರ ಮತ್ತೊಂದು ವಾರ ಮತ್ತೊಂದು ಎಂಬಂತೆ ಸೇವಿಸಲಿ.

ಮೆದುಳಿಗೆ (ಬ್ರೇನ್) ತಗಲುವ ಕ್ಯಾನ್ಸರ್‌ಗೆ ನಾಗದಾಳಿ ಸೊಪ್ಪಿನ (ರೂಟ ಗ್ರಾವಿಯಲೆನ್ಸ್) ಕಷಾಯ ಹಾಗೂ ದಾಲ್ವಿನ್ನಿ ಚಕ್ಕೆಯ ಕಷಾಯ ಒಳ್ಳೆಯದು. ಈ ಕಾಯಿಲೆಗೆ ತುತ್ತಾದವರು ಕೊಗ್ಗೆ, ಆರ್ಕ ಮತ್ತು ಸಾಮೆ ಅಕ್ಕಿಯನ್ನು ಹೆಚ್ಚೆಚ್ಚು ಉಪಯೋಗಿಸಬೇಕು. ರಕ್ತದ ಕ್ಯಾನ್ಸರ್‌ಗೆ ತುತ್ತಾಗಿರುವವರು ಆರ್ಕ, ಸಾಮೆ ಧಾನ್ಯದಿಂದ ಮಾಡಿದ ಆಹಾರದ ಜತೆಗೆ, ಕರಿಬೇವು ಹಾಗೂ ವೀಳ್ಯದೆಲೆ ಕಷಾಯ ಕುಡಿದರೆ, ಅವರ ಆರೋಗ್ಯ ಸುಧಾರಿಸುತ್ತದೆ. ಮೂತ್ರಪಿಂಡ ಹಾಗೂ ಪ್ರೋಸ್ಟೇಟ್ ಕ್ಯಾನ್ಸರ್‌ ತೊಂದರೆಗೆ ಗುರಿಯಾಗಿರುವವರು ಊದಲು, ಆರ್ಕ ಮತ್ತು ಸಾಮೆ ಧಾನ್ಯದ ಜತೆಗೆ, ಪುನರ್ನವ ಮತ್ತು ಕೊತ್ತಂಬರಿ ಕಷಾಯ ಆಶ್ರಯಿಸಬೇಕು. ಸ್ತನ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿರುವವರು ಹೊಂಗೆ ಸೊಪ್ಪು ಹಾಗೂ ಬೇವಿನ ಸೊಪ್ಪಿನ ಕಷಾಯವನ್ನು ಅಭ್ಯಾಸ ಮಾಡಬೇಕು. ಕೊಗ್ಗೆ ಹಾಗೂ ಆರ್ಕ ಅಕ್ಕಿ ಇವರಿಗೆ ಅಗತ್ಯವಾಗಿ ಬೇಕು. ನಾನು ನಿರ್ದಿಷ್ಟವಾಗಿ ಸೂಚಿಸಿರುವ ಸಿರಿಧಾನ್ಯಗಳನ್ನು ಕೂಡ ಅದೊಂದು ವಾರ, ಇದೊಂದು ವಾರ ಎಂಬಂತೆ ಹೆಚ್ಚೆಚ್ಚು ಸೇವಿಸುವುದರ ಜೊತೆಗೆ, ಇತರೆ ಸಿರಿಧಾನ್ಯಗಳನ್ನು ಕೂಡ ಬಳಸಲಿ. ನವಣೆ, ಊದಲು, ಆರ್ಕ, ಸಾಮೆ ಮತ್ತು ಕೊರ್ಲೆ ಎಂಬ ಐದು ಸಿರಿಧಾನ್ಯಗಳು, ಯಾವತ್ತೂ ಸುಸ್ಥಿರ ಬದುಕಿಗೆ ಐಸಿರಿಗಳೇ ಎಂಬುದನ್ನು ಮರೆಯಬಾರದು.

ವಾರಕ್ಕೊಮ್ಮೆ ಎಳ್ಳುಂಡೆ:
ಎಲ್ಲ ರೀತಿಯ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿರುವವರು ವಾರಕ್ಕೊಮ್ಮೆ ತಿನ್ನಲೇಬೇಕಾದ ಇನ್ನೊಂದು ಪದಾರ್ಥ ಎಳ್ಳುಂಡೆ. ಇದನ್ನು ತಿನ್ನಲು ಸಾಧ್ಯವಿಲ್ಲದವರು, ಕನಿಷ್ಠ ಪಕ್ಷ ಹುರಿದ ಎಳ್ಳನ್ನಾದರೂ ತಿನ್ನಬೇಕು. ಪ್ರತಿ ವಾರ ಒಂದು ಚಮಚ ಇಲ್ಲವೇ ಅರ್ಧ ಚಮಚ ಎಳ್ಳನ್ನು ಕಬ್ಬಿಣದ ಬಾಣಲಿಯಲ್ಲಿ ಹುರಿದು ತಿನ್ನಬಹುದು. ಇದು ವಾರಕ್ಕೊಮ್ಮೆ ಮಾತ್ರ ನಾನು ಸೂಚಿಸಿರುವ ಈ ಕಷಾಯ-ಸಿರಿಧಾನ್ಯದಿಂದ ಕ್ಯಾನ್ಸರ್ ಸಂಪೂರ್ಣ ವಾಸಿಯಾಗುತ್ತೆ ಎಂದು ಹೇಳಲಾರೆ. ಆದರೆ ನನ್ನ ಅನುಭವದಲ್ಲಿ ಇದನ್ನು ಸೇವಿಸಿದ ಎಲ್ಲರೂ ಕ್ಯಾನ್ಸರ್ ನೋವಿನಿಂದ ಮುಕ್ತಿ ಪಡೆದಿದ್ದಾರೆ ಎಂದಷ್ಟೇ ಹೇಳಬಲ್ಲೆ!

→ಡಾ ಖಾದರ್

ಸೂಚನೆ : ಇದನ್ನು ಒಮ್ಮೆ ವೈದ್ಯರೊಡನೆ ಚರ್ಚಿಸಿ ತೆಗೆದುಕೊಳ್ಳುವುದು ಒಳ್ಳೆಯದು