ವೈರಲ್ ಆಯ್ತು IPL ಹಾಡು

ಕ್ರಿಟಿಕಲ್ ಕೀರ್ತನೆಗಳು ಚಿತ್ರಕ್ಕೆ ನವೀನ್ ಸಜ್ಜು ಹಾಡಿದ ಹಾಡು ಬಿಡುಗಡೆ

ಕೇಸರಿ ಫಿಲಂ ಕ್ಯಾಪ್ಚರ್, ಲಾಂಛನದಲ್ಲಿ ಕುಮಾರ್ ಮತ್ತು ಸ್ನೇಹಿತರು ಸೇರಿ ನಿರ್ಮಿಸಿರುವ ’ಕ್ರಿಟಿಕಲ್ ಕೀರ್ತನೆಗಳು’ ಚಿತ್ರಕ್ಕೆ ’ಐಪಿಎಲ್ಲ್ಲು ಎತ್ಕೊಂಡೆ ಕಾಲು ಮುಂದೇನ್ ಮಾಡ್ಲಿ ಊರ್ ಬಿಡ್ಲ ಹೇಳು ಐಪಿಎಲ್ ನಮ್ಮೆಲ್ಲರ ಬಾಳು ಜೂಜಲ್ಲಿ ಬಿದ್ರೆ ಬಾಳೆಲ್ಲ ಗೋಳು ಎಂಬ ಹಾಡು ಆನಂದ್ ಆಡಿಯೋ ಯೂಟ್ಯೂಬ್‌ನಲ್ಲಿ ಬಿಡುಗಡೆಗೊಂಡು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಗೀತೆಯನ್ನು ನವೀನ್ ಸಜ್ಜು ಹಾಡಿದ್ದಾರೆ. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ – ಕುಮಾರ್.ಎಲ್, ಇವರು ಈ ಹಿಂದೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಛಾಯಾಗ್ರಹಣ – ಶಿವಸೇನ ಮತ್ತು ಶಿವಶಂಕರ್, ಸಂಗೀತ-ವೀರ್ ಸಮರ್ಥ್, ಬೆಂಗಳೂರು , ಕುಂದಾಪುರ, ಮಂಡ್ಯ, ಬೆಳಗಾಂನಲ್ಲಿ ಚಿತ್ರೀಕರಣ ನಡೆದಿರುವ ಈ ಚಿತ್ರದಲ್ಲಿ ಮೂರು ಹಾಡುಗಳಿವೆ, ನೈಜ ಘಟನೆ ಆಧಾರಿತ ಐಪಿಎಲ್ ಬೆಟ್ಟಿಂಗ್‌ನ ವಿಷಯವನ್ನು ಸಂಪೂರ್ಣ ಹಾಸ್ಯಮಯ ಚಿತ್ರ. ತಾರಾಗಣದಲ್ಲಿ – ತಬಲಾ ನಾಣಿ, ಸುಚೀಂದ್ರ ಪ್ರಸಾದ್, ರಾಜೇಶ್ ನಟರಂಗ, ತರಂಗ ವಿಶ್ವ, ಅಪೂರ್ವ, ಅಪೂರ್ವ ಭಾರದ್ವಾಜ್, ಅರುಣ ಬಾಲ್ ರಾಜ್, ಧರ್ಮ ದಿನೇಶ್ ಮಂಗಳೂರು, ರಘು ಪಾಂಡೇಶ್ವರ, ಯಶಸ್ ಅಭಿ, ದೀಪ, ಗುರುರಾಜ ಹೊಸಕೋಟೆ, ಮಾಸ್ಟರ್ ಮಹೇಂದ್ರ, ಮಾಸ್ಟರ್ ಪುಟ್ಟರಾಜು, ಯಶ್ವಂತ್ ಶೆಟ್ಟಿ – ಮುಂತಾದವರಿದ್ದಾರೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.