ತ್ರಿಮೂರ್ತಿ ಸನ್ನಿಧಿಯಲ್ಲಿ ‘ವಿಧಿಬರಹ’ ಆರಂಭ.

ನಾಡಹಬ್ಬ ದಸರಾ ಮೊದಲ ದಿನ‌ ‘ವಿಧಿಬರಹ’ ಚಿತ್ರದ ಮುಹೂರ್ತ ಸಮಾರಂಭ ಕನಕಪುರ ರಸ್ತೆಯಲ್ಲಿರುವ ತ್ರಿಮೂರ್ತಿ ದೇವಸ್ಥಾನದಲ್ಲಿ ನೆರವೇರಿತು. ‌ಮೊದಲ‌ ಸನ್ನಿವೇಶಕ್ಕೆ ನಿರ್ಮಾಪಕ ಮಂಜುನಾಥ್.ಈ ಅರಂಭ ಫಲಕ ತೋರಿದರು.

ಎಲ್ಲರ ಜೀವನದದಲ್ಲೂ ವಿಧಿ ಒಂದಲ್ಲ ಒಂದು ರೀತಿ ಆಟವಾಡುತ್ತದೆ ಎಂಬ ಕಥಾಹಂದರ ‘ವಿಧಿಬರಹ’ ಚಿತ್ರದಲ್ಲಿದೆ.
ರಘುವರ್ಮ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಎರಡು ಚಿತ್ರಗಳ ನಿರ್ದೇಶಿಸಿ ಅನುಭವವಿರುವ ರಘುವರ್ಮ‌ ನಿರ್ದೇಶನದ ಮೂರನೇ ಚಿತ್ರವಿದು.

ದೀಪ ಕ್ರಿಯೇಷನ್ಸ್ ಲಾಂಛನದಲ್ಲಿ ಮಂಜುನಾಥ್ ಈ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅಕ್ಟೋಬರ್ ೩೦ರಿಂದ ಬೆಂಗಳೂರು, ಶಿವಮೊಗ್ಗ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.‌ ಆರು ಹಾಡುಗಳಿದ್ದು, ಲಯ ಕೋಕಿಲ ಸಂಗೀತ ನೀಡುತ್ತಿದ್ದಾರೆ.

ಎಸ್.ಎಲ್.ವಿ‌ ರವಿ ಛಾಯಾಗ್ರಹಣ ಹಾಗೂ ಕೌರವ ವೆಂಕಟೇಶ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಶೋಭ್ ರಾಜ್, ಲಯಕೋಕಿಲ, ರಾಜೇಶ್ ನಟರಂಗ, ಟೆನ್ನಿಸ್ ಕೃಷ್ಣ, ಮೋಹನ್ ಜುನೇಜ, ಪದ್ಮಜ, ರಾಜೇಶ್ ಗಟ್ಟಿಮೇಳ ಮುಂತಾದವರು ‘ವಿಧಿಬರಹ’ ಚಿತ್ರದ ತಾರಾಬಳಗದಲ್ಲಿದ್ದಾರೆ.