ಟೀಸರ್ ನಿಂದಲೇ ಭರ್ಜರಿ ಸೌಂಡ್ ಮಾಡುತ್ತಿರುವ “ತ್ರಿವಿಕ್ರಮ”

ಕನ್ನಡ ಬೆಳ್ಳಿತೆರೆ ಮೇಲೆ ಮಿನುಗಬೇಕು, ರಾರಾಜಿಸಬೇಕು ಅಂತ ಕನಸು ಹೊತ್ತು ಸಜ್ಜಾಗಿರೋ ಕ್ರೇಜಿ ಸ್ಟಾರ್ ರವಿಚಂದ್ರನ್ ಎರಡನೇ‌ ಪುತ್ರ‌ ವಿಕ್ರಂ ರವಿಚಂದ್ರನ್ ಈಗ ‘ತ್ರಿವಿಕ್ರಮ’ ಸಿನಿಮಾ ಮಾಡುತ್ತಿದ್ದಾರೆ. ವಿಕ್ರಂ ಹೆಸರಿಗೆ, ನಟನಾ ಟ್ಯಾಲೆಂಟ್ ಗೆ, ಲುಕ್, ಮ್ಯಾನರಿಸಂ ಗೆ ತಕ್ಕಂಥ ಕಥೆಯನ್ನು ರೊಜ್ ಹಾಗು ಲೀಡರ್ ಚಿತ್ರದ ನಿರ್ದೇಶಕ ಸಹನಾ ಮೂರ್ತಿ ಕಥೆ ಸಿದ್ಧಪಡಿಸಿ ಶೂಟಿಂಗ್ ಕೂಡ ಮಾಡಿದ್ದಾರೆ. ಸಹನಾ ಮೂರ್ತಿ ರವಿಚಂದ್ರನ್ ಎರಡನೇ ಪುತ್ರನ ಮೊದಲ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ ಅಂದ ಮೇಲೆ ಆ ಸಿನಿಮಾದ ಮೇಲಿನ ನಿರೀಕ್ಷೆ ಒಂದು ಹಿಡಿ ಹೆಚ್ಚೇ ಇರುತ್ತೆ. ಅದನ್ನ ಸಹನಾ ಮೂರ್ತಿ ಫುಲ್ ಫಿಲ್ ಮಾಡಿದ್ದಾರೆ ಅನ್ನೋದು ಈಗಾಗ್ಲೆ ಬಂದಿರೋ ತ್ರಿವಿಕ್ರಮ ಸಿನಿಮಾ ಫಸ್ಟ್ ಲುಕ್ ಟೀಸರ್ ಸಾರಿ ಸಾರಿ ಹೇಳ್ತಿವೆ.

ನಿರ್ಮಾಪಕ ಸೋಮಣ್ಣ ಜ್ಯೂನಿಯರ್ ಕ್ರೇಜಿಸ್ಟಾರ್ ಅನ್ನ ಸಕ್ಕತ್ತಾಗಿ ತೋರಿಸಬೇಕು, ಅದೆಷ್ಟೇ ಕರ್ಚಾದ್ರು ಪರವಾಗಿಲ್ಲ ಅಂತ ‘ತ್ರಿವಿಕ್ರಮ’ನಿಗಾಗಿ ಕೋಟಿ ಕೋಟಿ ಬಂಡವಾಳ ಸುರಿದಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್, ತ್ರಿವಿಕ್ರಮನ ಎರಡು ಹಾಡುಗಳ ಚಿತ್ರೀಕರಣವನ್ನ ಭಾರತ ಚೀನಾ, ಭಾರತ, ಪಾಕಿಸ್ತಾನ ಗಡಿಗಳಲ್ಲಿ ಚಿತ್ರೀಕರಿಸೋಕೆ ಪ್ಲಾನ್ ಮಾಡಿರೋದು.. ನಿರ್ಮಾಪಕ ಸೋಮಣ್ಣರ ಈ ಎಫರ್ಟ್ ಗೆ ಈಗ ಚಿನ್ನದಂತಾ ಬೆಲೆ ಬಂದಿದೆ. ಯಾಕಂದ್ರೆ ತ್ರಿವಿಕ್ರಮ ಸಿನಿಮಾದ ಹಾಡುಗಳು ಮಾರಾಟವಾಗಿದ್ದು ವಿಕ್ರಂ ಮೊದಲ ಸಿನಿಮಾದಲ್ಲೇ ದಾಖಲೆ ಬರೆದಿದ್ದಾರೆ.

ಇದರ ಮೊದಲ ಹೆಜ್ಜೆಯಂತೆ ತ್ರಿವಿಕ್ರಮ ಸಿನಿಮಾದ ಆಡಿಯೋ ಹಕ್ಕು 50 ಲಕ್ಷಕ್ಕೆ ಮಾರಾಟವಾಗಿದೆ. ಎ2 ಮ್ಯೂಸಿಕ್ ಆಡಿಯೋ ಸಂಸ್ಥೆ ತ್ರಿವಿಕ್ರಮನ ಹಾಡುಗಳ್ಳ ಕೇಳಿ ಖುಷಿ ಯಿಂದ ಡಿಮ್ಯಾಂಡ್ ಮಾಡಿ ಹಾಡುಗಳನ್ನ ಖರೀದಿಸಿದೆ. ವಿಕ್ರಂ ರವಿಚಂದ್ರನ್ ಮೊದಲ‌ ಸಿನಿಮಾದ ಹಾಡುಗಳು ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿರೋದು, ತ್ರಿವಿಕ್ರಮ ಸಿನಿಮಾದ ಕ್ರೆಡಿಬಲಿಟಿಯನ್ನ ತೋರಿಸುತ್ತೆ. ತ್ರಿವಿಕ್ರಮ‌ ಸಿನಿಮಾದಲ್ಲಿ ಒಟ್ಟು 6 ಹಾಡುಗಳಿದ್ದು, ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್, ಹಾಗು ಯೋಗರಾಜ್ ಭಟ್ ಹಾಡುಗಳನ್ನ ಬರೆದಿದ್ದಾರೆ. ಅರ್ಜುನ್ ಜನ್ಯ ಭರ್ಜರಿ‌ ಮ್ಯೂಸಿಕ್ ಟ್ಯೂನ್ ಕೊಟ್ಟಿದ್ದು, ವಿಜಯ್ ಪ್ರಕಾಶ್, ಹಾಗು ಸಂಚಿತ್ ಹೆಗಡೆ‌ ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಈ ಸಿನಿಮಾದಲ್ಲಿ ಇನ್ನೊಂದು ವಿಶೇಷವೇನೆಂದರೆ ಒಂಟೆ ಮೇಲಿನ ಫೈಟ್ ಹಾಗೂ ಒಂಟೆಗಳ ಮೂಲಕ ನಡೆಯೋ ಚೇಸಿಂಗ್ ಸೀನ್ ಕೂಡ ಇದೆ. ವಿಜಿ ಮಾಸ್ಟರ್ ಈ ದೃಶ್ಯಕ್ಕೆ ಸಾಹಸ ಮಾಡಿದ್ದಾರೆ. ವಿಕ್ರಮ್‌ಗೆ ಜೊತೆಯಾಗಿ ನಟಿ ಆಕಾಂಕ್ಷಾ ಶರ್ಮಾ ನಟಿಸಿದ್ದಾರೆ. ಹಾಸ್ಯ ನಟ ಸಾಧು ಕೋಕಿಲ, ಬಾಲಿವುಡ್ ಖ್ಯಾತ ನಟ ರೋಹಿತ್ ರಾಯ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ರಾಜು ಸುಂದರಂ, ಪ್ರಭುದೇವ, ಕಲೈ ನೃತ್ಯ ನಿರ್ದೇಶನ ಹಾಗೂ ನಾಗು ಅವರ ಕಲಾ ನಿರ್ದೇಶನ ಈ ಸಿನಿಮಾಕ್ಕಿದೆ. ಸಹನಾ ಮೂರ್ತಿಯವರ ‘ತ್ರಿವಿಕ್ರಮ’ ಸಿನಿಮಾ ಭರ್ಜರಿ  ತ್ರಿವಿಕ್ರಮ ಸಾದಿಸಲಿ ಎಂದು “ಕನ್ನಡ ಗೋಲ್ಡ್ ಪ್ರೇಮ್ಸ್”  ಹಾರೈಸುತ್ತದೆ.