ಮೈಸೂರಿನಿಂದ ಕೇರಳಕ್ಕೆ ತೋತಾಪುರಿ 

ಡಾಲಿ ಧನಂಜಯ್ ಹಾಗೂ ಸುಮನ್ ರಂಗನಾಥ್ ಇಬ್ಬರೂ ಭಾಗವಹಿಸಿದ ದೃಶ್ಯಗಳನ್ನು ಅಲಪೆಯಲ್ಲಿ ಚಿತ್ರೀಕರಿಸಲಾಗುತ್ತಿದೆ.

ನವರಸ ನಾಯಕ ಜಗ್ಗೇಶ್, ನಿರ್ದೇಶಕ ವಿಜಯಪ್ರಸಾದ್ ನೀರ್‌ದೋಸೆ ಚಿತ್ರದ ನಂತರ ಮತ್ತೊಮ್ಮೆ ತೋತಾಪುರಿಯ ಮೂಲಕ ಒಂದಾಗಿದ್ದಾರೆ. ನೂರು ದಿನಗಳ ಚಿತ್ರೀಕರಣದ ಮೂಲಕ ಸುದ್ದಿಯಾಗಿದ್ದ ಈ ಚಿತ್ರತಂಡ ಮೈಸೂರಿನಿಂದ ಕೇರಳಕ್ಕೆ ಷಿಫ್ಟ್  ಆಗಿದೆ. ಕಳೆದವಾರ ಮೈಸೂರಿನಲ್ಲಿ ಶೂಟ್ ಮಾಡುವಾಗಲೂ ಕೂಡ ತೋತಾಪುರಿ ದೊಡ್ಡ ಸೌಂಡ್ ಮಾಡಿತ್ತು. ರಿಸರ್ವ ಪೋಲೀಸ್ ಇಟ್ಟುಕೊಂಡೇ ಅಲ್ಲಿ ಚಿತ್ರೀಕರಣ ಮಾಡಬೇಕಾಯಿತು. ಈಗ ಚಿತ್ರತಂಡ ಕೇರಳಕ್ಕೆ ಹೋಗಿದ್ದು ಅಲ್ಲಿಯೂ ಸಹ ಕರೋನಾ ಹಾವಳಿ ತುಂಬಾನೇ ಇದ್ದರೂ ಲೆಕ್ಕಿಸದೆ ‘ಅಲಪೆ’ ಎಂಬಲ್ಲಿ ಚಿತ್ರೀಕರಣ  ಮಾಡುತ್ತಿದ್ದಾರೆ.

ಡಾಲಿ ಧನಂಜಯ್ ಹಾಗೂ ಸುಮನ್ ರಂಗನಾಥ್ ಇಬ್ಬರೂ ಭಾಗವಹಿಸಿದ ದೃಶ್ಯಗಳನ್ನು ಅಲಪೆಯಲ್ಲಿ ಚಿತ್ರೀಕರಿಸಲಾಗುತ್ತಿದೆ. ಈ ಚಿತ್ರದಲ್ಲಿ ಓರ್ವ ಉದ್ಯಮಿಯಾಗಿ ಡಾಲಿ ಧನಂಜಯ, ಮುಸ್ಲಿಂ ಯುವತಿಯಾಗಿ ಅದಿತಿ ಪ್ರಭುದೇವ ಹಾಗೂ ಸುಮನ್ ರಂಗನಾಥ್ ಓರ್ವ ಕ್ರಿಶ್ಚಿಯನ್ ಯುವತಿಯಾಗಿ ನಟಿಸುತ್ತಿದ್ದಾರೆ. ನಿರ್ಮಾಪಕ ಕೆ.ಎ. ಸುರೇಶ್ ಅವರು ರಾಜು ಕನ್ನಡ ಮೀಡಿಯಂ ಚಿತ್ರದ ಯಶಸ್ಸಿನ ನಂತರ ಭರವಸೆ ಮೂಡಿಸುವ ಮತ್ತೊಂದು ತಂಡದ ಜೊತೆ ಕೈಜೋಡಿಸಿದ್ದಾರೆ.

ಅನೂಪ್ ಸೀಳನ್ ಅವರ ಸಂಗೀತ, ನಂಜೇಶ್‌ಬಾಬು ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಎರಡನೇ ಮದುವೆ, ಗೋವಿಂದಾಯ ನಮಃ, ಶ್ರಾವಣಿ ಸುಬ್ರಮಣ್ಯ, ಶಿವಲಿಂಗ ಮತ್ತು ರಾಜು ಕನ್ನಡ ಮೀಡಿಯಂನಂಥ ಸೂಪರ್‌ಹಿಟ್ ಚಿತ್ರಗಳ ನಂತರ ನಿರ್ಮಾಪಕ ಸುರೇಶ್ ಈಗ ತೋತಾಪುರಿಯಂಥ ಬಿಗ್ ಪ್ರಾಜೆಕ್ಟ್‌ ಮಾಡುತ್ತಿದ್ದಾರೆ.