“ತಲ್ವಾರ್ ಪೇಟೆ” ಗೆ ಬಂದಿಳಿದ “ಸೀರಿಯಲ್ ಸೆಟ್ ಚಂದ್ರಪ್ಪ”!!

ವಸಿಷ್ಠ ಸಿಂಹ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಬಹುದೊಡ್ಡ ತಾರಾಬಳಗವಿದೆ. ಈಗ ಕಲಾವಿದರ ಬಳಗಕ್ಕೆ ಭರ್ಜರಿ ಎಂಟ್ರಿ ಕೊಡ್ತಾ ಇರೋದು ನಟ ರವಿ ಶಂಕರ್ ಉರುಫ್ ಸೀರಿಯಲ್ ಸೆಟ್ ಚಂದ್ರಪ್ಪ !

 ಶ್ರೀ ನಾಗಬ್ರಹ್ಮ ಕ್ರಿಯೇಷನ್ಸ್ ನಲ್ಲಿ , ಡಾ. ಶೈಲೇಶ್ ಕುಮಾರ್.ಬಿ.ಎಸ್ ರವರು ನಿರ್ಮಾಣ ಮಾಡುತ್ತಿರುವ ಅದ್ದೂರಿ ಚಿತ್ರ “ತಲ್ವಾರ್ ಪೇಟೆ ” . ಸದ್ದಿಲ್ಲದೆ ಸೆಟ್ ಏರಿದ ಈ ಚಲನಚಿತ್ರದ ಚಿತ್ರೀಕರಣ‌ ಬಿರುಸಿನಿಂದ ಸಾಗಿದೆ. ವಸಿಷ್ಠ ಸಿಂಹ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಬಹುದೊಡ್ಡ ತಾರಾಬಳಗವಿದೆ. ಈಗ ಕಲಾವಿದರ ಬಳಗಕ್ಕೆ ಭರ್ಜರಿ ಎಂಟ್ರಿ ಕೊಡ್ತಾ ಇರೋದು ನಟ ರವಿ ಶಂಕರ್ ಉರುಫ್ ಸೀರಿಯಲ್ ಸೆಟ್ ಚಂದ್ರಪ್ಪ !! ವೃತ್ತಿಯಲ್ಲಿ ನ್ಯೂರೋಸರ್ಜನ್ ಆಗಿರುವ ನಿರ್ಮಾಪಕ ಡಾ.ಶೈಲೇಶ್ ಕುಮಾರ್. ಬಿ.ಎಸ್ ರವರು ಅತ್ಯಂತ ಪ್ರೀತಿಯಿಂದ ಕನ್ನಡಿಗರಿಗಾಗಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನುರಿತ ಕಲಾವಿದರುಬೇಕೆಂಬ ಉದ್ದೇಶದಿಂದ ಉತ್ತಮ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.‌ ಇದಕ್ಕೆ ನಿದರ್ಶನವಾಗಿ ರವಿಶಂಕರ್ ರವರು “ತಲ್ವಾರ್ ಪೇಟೆ”ಗೆ ಬಂದಿಳಿದಿದ್ದಾರೆ.

ನಾಯಕ ನಟನಾಗಿ ವಸಿಷ್ಠ ಸಿಂಹ , ನಾಯಕಿ ಪಾತ್ರದಲ್ಲಿ ಸೋನಾಲ್ ಮಂಟೆರಿಯೊ ಅವರೊಂದಿಗೆ ಈಗಾಗಲೇ ಚತುರ್ಭಾಷಾ ಕಲಾವಿದ ಹರೀಶ್ ಉತ್ತಮನ್, ಯಶ್ವಂತ್ ಶೆಟ್ಟಿ, ಆಶಾಲತಾ, ವೀಣಾ ಪೊನ್ನಪ್ಪ, ಲಿಂಗರಾಜ್ ಬಲವಾಡಿ, ಸುರೇಶ್ ಚಂದ್ರ ಪ್ರದೀಪ್ ಪೂಜಾರಿ, ರಜನಿ ಕಾಂತ್, ಮನು ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ.
ನವೆಂಬರ್ 28 ರವಿಶಂಕರ್ ಅವರ ಹುಟ್ಟುಹಬ್ಬವಿದ್ದು, ಮುಂಚಿತವಾಗಿಯೇ ಚಿತ್ರತಂಡ ಅವರಿಗೆ‌ ಶುಭಕೋರಿದೆ.
ಈ ಚಿತ್ರವನ್ನು ಕೆ.ಲಕ್ಷ್ಮಣ್ ಶ್ರೀ ರಾಮ್ ನಿರ್ದೇಶಿಸುತ್ತಿದ್ದಾರೆ.

ಮಫ್ತಿ, ಉಗ್ರಂ ಚಿತ್ರಗಳಿಗೆ ಕಥೆ, ಸಂಭಾಷಣಾ ಹಾಗೂ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದ ಕೆ.ರಾಮ್  ಶ್ರೀಲಕ್ಷ್ಮಣ್ ಹಾಗೂ ಈ ಚಿತ್ರದ ನಿರ್ದೇಶಕ ಕೆ. ಲಕ್ಷ್ಮಣ್ ಶ್ರೀ ರಾಮ್ ಇಬ್ಬರು ಸಹೋದರರು. ಇವರಿಬ್ಬರು ಜಂಟಿಯಾಗಿ ತಲ್ವಾರ್ ಪೇಟೆಗೂ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಬರೆದಿದ್ದಾರೆ. ಕೆ ಲಕ್ಷ್ಮಣ್ ಶ್ರೀ ರಾಮ್ ಈ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಕೆ.ರಾಮ್ ಶ್ರೀ ಲಕ್ಷ್ಮಣ್ ಸಹಕಾರ ನಿರ್ದೇಶನ ಮಾಡುತ್ತಿದ್ದಾರೆ.
ಎಂ.ಯು.ನಂದಕುಮಾರ್ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ಡಿಫರೆಂಟ್ ಡ್ಯಾನಿ, ರಾಮ್ ಲಕ್ಷ್ಮಣ್ ಸಾಹಸ ನಿರ್ದೇಶನ, ಮುರಳಿ, ಮೋಹನ್, ಧನು, ಗೀತ ನೃತ್ಯ ನಿರ್ದೇಶನ ಹಾಗೂ ಆರ್ಟ್ ರಘು ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಜಯಂತ್ ಕಾಯ್ಕಿಣಿ ಹಾಗೂ ಕೆ.ರಾಮ್ ಶ್ರೀಲಕ್ಷ್ಮಣ್ ಈ ಚಿತ್ರದ ಹಾಡುಗಳನ್ನು ರಚಿಸಿದ್ದು, ಹರ್ಷವರ್ಧನ್ ರಾಜ್* ಸಂಗೀತ ನೀಡುತ್ತಿದ್ದಾರೆ.