ಹಾಡುಗಳಲ್ಲಿ ಸ್ವಚ್ಚ ಕರ್ನಾಟಕದ ಜಪ.

ನಾವು ಇನ್ನೊಬ್ಬರನ್ನು ದೂಷಿಸುವುದಕ್ಕಿಂತ ತನ್ನಿಂದಲೇ ಸ್ವಚ್ಚತಾಕಾರ್ಯ ಆರಂಭಿಸಿದರೆ ನಮ್ಮ ಸುತ್ತಮುತ್ತಲಿನ ಪರಿಸರ ಚೆನ್ನಾಗಿರುತ್ತದೆ, ನಮ್ಮ ಊರು, ರಾಜ್ಯ, ನಮ್ಮ ದೇಶವೂ ಸ್ವಚ್ಚವಾಗಿರುತ್ತದೆ ಎಂಬ ಸಂದೇಶ ಈ ಚಿತ್ರದಲ್ಲಿದೆ. ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡರು ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದಾರೆ.

ಪ್ರಜೆಗಳಲ್ಲಿ ಜಾಗೃತೆ ಮೂಡಿಸುವಂಥ ಸಾಮಾಜಿಕ ಸಂದೇಶ ಹೊಂದಿರೋ ಸ್ವಚ್ಚ ಕರ್ನಾಟಕ ಎಂಬ ಚಿತ್ರವನ್ನು ಎಲ್.ರವಿಕಮಾರ್ ಅವರು ನಿರ್ಮಾಣ ಹಾಗೂ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಸಮಾರಂಭ ಬೆಂಗಳೂರಿನ ಭಾರತ್ ಸ್ಕೌಟ್ಸ್ ಗೈಡ್ಸ್ ಆವರಣದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆಯಿತು. ಬಿಬಿಎಂಪಿ ವಿಷೇಶ ಕಮೀಷನರ್ ರಣದೀಪ್, ಮಾಜಿ ಶಾಸಕ ಹೇಮಚಂದ್ರ ಸಾಗರ್, ಮೋಹನ್ ಕೊಂಡಜ್ಜಿ, ಜೋತಿಷಿ ರಾಘವೇಂದ್ರ ಮೋಕ್ಷಗುಂಡಂ ಗುರೂಜಿ, ರಮೇಶ್ ಕಾಮತ್ ಹಾಗೂ ಇತರ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಿತ್ರತಂಡಕ್ಕೆ ಶುಭ ಹಾರೈಸಿದರು.

ಅರ್ಜುನ್ ಹಾಗೂ ಅಂಜಲಿ ಪ್ರಮುಖ ಪಾತ್ರಗಳಲ್ಲಿರುವ ಈ ಚಿತ್ರದಲ್ಲಿ ನಮ್ಮ ಸುತ್ತಲಿನ ಪರಿಸರವನ್ನು ಹೇಗೆ
ಸ್ವಚ್ಚವಾಗಿಟ್ಟುಕೊಳ್ಳಬೇಕು, ನಾವು ಇನ್ನೊಬ್ಬರನ್ನು ದೂಷಿಸುವುದಕ್ಕಿಂತ ತನ್ನಿಂದಲೇ ಸ್ವಚ್ಚತಾಕಾರ್ಯ ಆರಂಭಿಸಿದರೆ ನಮ್ಮ ಸುತ್ತಮುತ್ತಲಿನ ಪರಿಸರ ಚೆನ್ನಾಗಿರುತ್ತದೆ, ನಮ್ಮ ಊರು, ರಾಜ್ಯ, ನಮ್ಮ ದೇಶವೂ ಸ್ವಚ್ಚವಾಗಿರುತ್ತದೆ ಎಂಬ ಸಂದೇಶ ಈ ಚಿತ್ರದಲ್ಲಿದೆ. ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡರು ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಜೊತೆಗೆ ಹಾಡುಗಳಿಗೆ ಸಾಹಿತ್ಯವನ್ನೂ ರಚಿಸಿದ್ದು, ರಾಜ್ ಭಾಸ್ಕರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಹೇಮಚಂದ್ರಸಾಗರ್ ರವಿಕುಮಾರ್ ನನ್ನ ಬಾಲ್ಯಸ್ನೇಹಿತ. ಒಮ್ಮೆ ಗುಲ್ಬರ್ಗದ ದತ್ತಾತ್ರೇಯ ದೇವಸ್ಥಾನಕ್ಕೆ ಹೋಗಿದ್ದೆವು. ಅಲ್ಲಿಯೇ ರವಿಕುಮಾರ್‌ಗೆ ಈ ಕಾನ್ಸೆಪ್ಟ್ ಹೊಳೆಯಿತು. ಕಳೆದ ವರ್ಷವೇ ಬಿಡುಗಡೆಯಾಗಬೇಕಿದ್ದ ಈ ಚಿತ್ರ ಕರೋನಾದಿಂದ ಲೇಟಾಯಿತು ಎಂದು ಹೇಳಿದರು. ನಂತರ ಮಾತನಾಡಿದ ಕಮೀಷನರ್ ರಣದೀಪ್ ನಾನು ಅಧಿಕಾರ ವಹಿಸಿಕೊಂಡ ನಂತರ ಮೊದಲಬಾರಿಗೆ ಸಿನಿಮಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ಅದಕ್ಕೆ ಕಾರಣ ಇದು
ನಮ್ಮ ಕರ್ತವ್ಯಕ್ಕೆ ಸಂಬಂದಿಸಿದ ವಿಷಯ ಇರುವ, ಕ್ಲೀನ್‌ಸಿಟಿ ಕಾನ್ಸೆಪ್ಟ್ ಇಟ್ಟುಕೊಂಡು ಮಾಡಿರೋ ಚಿತ್ರ. ಪರಿವರ್ತನೆ ನಮ್ಮಲ್ಲಿ ಮೊದಲು ಬರಬೇಕು, ಸಾರ್ವಜನಿಕರ ಸಹಕಾರವಿಲ್ಲದೆ ನಾವು ಏನನ್ನು ಮಾಡಲೂ ಸಾಧ್ಯವಿಲ್ಲ ಎಂದು ಹೇಳಿದರು.