ಮತ್ತೆ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ಸನ್ನಿ ಲಿಯೋನ್!

ಸೊಂಟ ಬಳಿಕಿಸೋಕೆ ‘ಚಾಂಪಿಯನ್’ ಸಿನಿಮಾಗೆ ಸನ್ನಿ ಎಂಟ್ರಿ! ಯಂಗ್ ಹಿರೋಯಿನ್ ಅದಿತಿ ಪ್ರಭುದೇವ ನಟಿಸ್ತಿರೋ ಚಾಂಪಿಯನ್ ಸಿನಿಮಾದಲ್ಲಿ ಸನ್ನಿಲಿಯೋನ್ ಹೆಜ್ಜೆ ಹಾಕ್ತಿದ್ದಾರೆ

ಮಾದಕ ನಟಿ ಸನ್ನಿ ಲಿಯೋನ್​ಗೆ ತನ್ನದೇ ಆದ ಫ್ಯಾನ್ ಬಳಗ ಇದೆ. ತಮ್ಮ ಒಳ್ಳೆ ಕಾರ್ಯಗಳಿಂದ ಭಾರತದಲ್ಲಿ ಫ್ಯಾನ್ ಫಾಲೋವಿಂಗ್ ಹೊಂದಿರೋ ನಟಿ ಸನ್ನಿ ಲಿಯೋನ್. ಬಿ ಟೌನ್​ನಲ್ಲೇ ಬ್ಯುಸಿಯಾಗಿರ್ತಿದ್ದ ಸನ್ನಿ ಲಿಯೋನ್, ಲವ್ ಯೂ ಆಲಿಯಾ ಹಾಗೂ ಡಿ.ಕೆ ಸಿನಿಮಾಗಳ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಸೊಂಟ ಬಳುಕಿಸಿ ಕನ್ನಡಿಗರಿಗೆ ಕಿಕ್ ಏರಿಸಿದ್ರು. ಈಗ ಮತ್ತೆ ಗಾಂಧಿನಗರದಲ್ಲಿ ಗಮ್ಮತ್ತು ತೋರಿಸೋಕೆ ಬರ್ತಿದ್ದಾರೆ.

ಯಂಗ್ ಹಿರೋಯಿನ್ ಅದಿತಿ ಪ್ರಭುದೇವ ನಟಿಸ್ತಿರೋ ಚಾಂಪಿಯನ್ ಸಿನಿಮಾದಲ್ಲಿ ಸನ್ನಿಲಿಯೋನ್ ಹೆಜ್ಜೆ ಹಾಕ್ತಿದ್ದಾರೆ ಅನ್ನೋ ಮಾಹಿತಿ ಹೊರ ಬಿದ್ದಿದೆ. ಸಿನಿಮಾದಲ್ಲಿನ ಐಟಂ ಸಾಂಗ್​ವೊಂದಕ್ಕೆ ಸನ್ನಿಲಿಯೋನ್ ಸೊಂಟ ಬಳುಕಿಸಲಿದ್ದಾರಂತೆ. ಸ್ಪೋರ್ಟ್ಸ್​ ಕಥೆ ಹೊಂದಿರೋ ಚಾಂಪಿಯನ್ ಸಿನಿಮಾದ ಶೂಟಿಂಗ್ ಈಗಾಗಲೇ ಆಲ್ಮೋಸ್ಟ್ ಕಂಪ್ಲೀಟ್ ಆಗಿದ್ದು, ಸಿನಿಮಾದ ಹಾಡುಗಳ ಚಿತ್ರೀಕರಣ ನಡೀತಿದೆ. ಕಳೆದ ನಾಲ್ಕೈದು ದಿನಗಳಿಂದ ನಡೆಯುತ್ತಿರೋ ಹಾಡೊಂದರ ಚಿತ್ರೀಕರಣದಲ್ಲಿ ಸನ್ನಿ ಲಿಯೋನ್ ಭಾಗಿಯಾಗಿದ್ದಾರೆ ಅಂತಾ ಮಾಹಿತಿ ಸಿಕ್ಕಿದೆ.