ಸುದೀಪ್ ಅವರ ಬಯೋಗ್ರಫಿ ಬಿಡುಗಡೆ

ಅಭಿನಯ ಚಕ್ರವರ್ತಿ, ಅಭಿಮಾನಿಗಳ ಪ್ರೀತಿಯ ಕಿಚ್ಚ, ನಟ ಸುದೀಪ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ವರ್ಷದ ಹುಟ್ಟುಹಬ್ಬದ ಆಚರಣೆ ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಿಚ್ಚ ಸುದೀಪ್ ಅವರ ಬಯೋಗ್ರಫಿ ಬಿಡುಗಡೆ ಮಾಡುವ ಮೂಲಕ ಹುಟ್ಟುಹಬ್ಬಕ್ಕೆ ಶುಭಕೋರಿದರು.
ಪತ್ರಕರ್ತ ಶರಣು ಹುಲ್ಲೂರು ಬರೆದ ಈ ಪುಸ್ತಕದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಪುನೀತ್ ರಾಜ್ ಕುಮಾರ್ ಸಮಗ್ರ ಮಾಹಿತಿ, ಸಿನಿಮಾ ರಂಗದ ಅನೇಕ ಘಟನೆಗಳು, ಅಪರೂಪದ ಫೋಟೊ ಒಳಗೊಂಡಿರುವ ಕೃತಿಯು ಓದುಗರನ್ನು ಸೆಳೆಯಲಿದೆ ಎಂದರು. ಅಲ್ಲದೆ ಸುದೀಪ್ ಅವರ ತಂದೆ, ತಾಯಿ, ಅಕ್ಕಂದಿರು, ಪತ್ನಿ ಹೀಗೆ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಕಿಚ್ಚನ ಬದುಕಿನ ಅನೇಕ ಇಂಟ್ರಸ್ಟಿಂಗ್ ಸಂಗತಿಗಳನ್ನು ಒಳಗೊಂಡಿರುವ ಪುಸ್ತಕ ಇದಾಗಿದೆ.
ಪುಸ್ತಕ ಬಿಡುಗಡೆ ಸಂಧರ್ಭದಲ್ಲಿ ವಿಷ್ಣುಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ನಿರ್ಮಾಪಕ ಜಾಕ್ ಮಂಜು ಉಪಸ್ಥಿತರಿದ್ದರು. ಸುದೀಪ್ ಅವರ ಕುರಿತಾಗಿ ಬರುತ್ತಿರುವ ಮೊದಲ ಪುಸ್ತಕ ಇದಾಗಿದೆ.