“ಸ್ತೀ” ಮನಸೇ ಮಸಣವಾಗಿದೆ. ಈ ಹಾಡನ್ನು ನೋಡಿದವರ ಮನಸು ಕರಾಗುವುದಂತೂ ಸಹಜ.

ಈ ಒಂದು ಹಾಡನ್ನು ನೋಡಿದವರ ಮನಸು ಕರಾಗುವುದಂತೂ ಸಹಜ ತಂದೆ ತಾಯಿಯರು ಮಕ್ಕಳನ್ನು ಬೆಳೆಸಲು ಪಡುವ ಕಷ್ಟ , ಶ್ರಮ , ಎಲ್ಲವೂ ಕಣ್ಣಲ್ಲಿ ನೀರು ತರಿಸುತ್ತದೆ.

ಇದೆ ಫೆಬ್ರವರಿ 18 ರಂದು ಆನಂದ್ ಆಡಿಯೋ ಯೌಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾದ ಸ್ತ್ರೀ ಎಂಬ ಆಲ್ಬಮ್ ಸಾಂಗ್ ಜನ ಮನ ಸೆಳೆದಿದೆ ಇದು ಸಾಮಾಜಿಕ ಕಳಕಳಿಯನ್ನು ಸೂಚಿಸುವ ಗೀತೆಯಾಗಿದ್ದು , ಇತ್ತೀಚಿನ ದಿನಗಳಲ್ಲಿ ಹೆಣ್ಣಿನ ಮೇಲೆ ನಡೆಯುವ ಹತ್ಯಾ ಚಾರ ಶೋಷಣೆಯನ್ನು ಹಾಡಿನಲ್ಲಿ ಅದ್ಭುತವಾಗಿ , ನಿರ್ದೇಶಕರಾದ ಜೀವ ಎಸ್ ಮಹೇಂದ್ರನ್ ಅವರು ಅದ್ಬುತ ವಾಗಿ ಸಮಾಜಕ್ಕೆ ಈ ಹಾಡಿನ ಮೂಲಕ ಒಳ್ಳೆಯ ಸಂದೇಶ ವನ್ನ ಕೊಡುಗೆಯಾಗಿ ನೀಡಿದ್ದಾರೆ ಎನ್ನಬಹುದು , ಬಹುಶ ಈ ಒಂದು ಹಾಡನ್ನು ನೋಡಿದವರ ಮನಸು ಕರಾಗುವುದಂತೂ ಸಹಜ ತಂದೆ ತಾಯಿಯರು ಮಕ್ಕಳನ್ನು ಬೆಳೆಸಲು ಪಡುವ ಕಷ್ಟ , ಶ್ರಮ , ಎಲ್ಲವೂ ಕಣ್ಣಲ್ಲಿ ನೀರು ತರಿಸುತ್ತದೆ.

ಕೆಟ್ಟ ಆಲೋಚನೆ ಮಾಡುವ ಮೃಗ ಮನಸಿನ ವ್ಯಕ್ತಿಗಳು ಒಮ್ಮೆ ಅವರ ತಂದೆ ತಾಯಿ ಪ್ರೀತಿಯನ್ನು ನೆನೆದರೆ ಖಂಡಿತಾ ಇಂತಹ ಕೃತ್ಯಗಳು ನಡೆಯುವುದಿಲ್ಲ ಎಲ್ಲರನ್ನೂ ಪೂಜ್ಯ ಭಾವನೆಯಿಂದ ಗೌರವಿಸೋಣ ಎನ್ನುವ ಸಂದೇಶ ವಾಗಿದೆ , ಹಾಗೆ ಈ ಒಂದು ದುರಂತಗಳಿಗೆ ಕಾರಣ ಯಾರು ?
1) ನಮ್ಮ ಸುತ್ತಲಿನ ಸಮಾಜವೂ
2) ನಮ್ಮ ಕಾನೂನು ವ್ಯವಸ್ಥೆವೂ
3) ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸದ ಪೋಷಕರೊ
4) ಸರಿಯಾದ ಶಿಕ್ಷಣದ ಕೊರತೆಯೋ
5) ನಾವು ನೋಡುವಾ ದೃಷ್ಟಿಯೋ ಅಥವಾ ನಮ್ಮ ಸಂಸ್ಕರಿಸದ ಬಟ್ಟೆಗಳೋ
ಎಂಬ ಪ್ರಶ್ನೆ ಉಳಿದಿದೆ, ಎಂದು ಎಲ್ಲವನ್ನು ಕೇಳುಗರ ಗಮನಕ್ಕೆ ಬಿಟ್ಟಿದ್ದಾರೆ.

ಇಂತಹ ಒಂದು ಒಳ್ಳೆಯ ಸಾಮಾಜಿಕ ಹಾಡಿಗೆ Dhurthi creation, ಕವಿತಾ ಗೌಡ ಅವರು ಬಂಡವಾಳ ಹೂಡಿಕೆ ಮಾಡುವುದರ ಜೊತೆಗೆ ಅಭಿನಯ ಕೂಡ ಬಹಳ ಅಚ್ಚುಕಟ್ಟಾಗಿ ನಟಿಸಿ ಜನರ ಮನವನ್ನು ಗೆದ್ದಿದ್ದಾರೆ ನ್ಯಾಚುರಲ್ ಆಕ್ಟಿಂಗ್ ಎಂದು ಹೇಳಬಹುದು , ಈ ಆಲ್ಬಮ್ ಸಾಂಗ್ ನೋಡಿದಾಗ ಒಂದು ಸಿನಿಮಾ ನಮ್ಮ ಕಣ್ಣ ಮುಂದೆ ಬರುತ್ತದೆ , ಸಿನಿಮಾ ನೋಡಿದ ಹಾಗೆ ಭಾಸವಾಗುತ್ತದೆ ಎಂದರೆ ಅದು ಸಂಕಲನ ತುಂಬಾ ಮುಖ್ಯ ವಾಗುತ್ತೆ ಹೌದು ಈ ಹಾಡಿಗೆ ಸಂಕಲನ , (ಪುನರ್ವ್ ಸ್ಟುಡಿಯೋ) ವೆಂಕಿ UDV ಅವರು ಬಹಳ ಚೆನ್ನಗಿ ಸಂಕಲನ ಮಾಡಿದ್ದಾರೆ ,

ಹಾಗೆ , Avatar Media ಅವರು DI , COLOUR, DUBBING , ಎಲ್ಲವನ್ನು ತುಂಬಾ ಚೆನ್ನಾಗಿ ಕಾರ್ಯ ನಿರ್ವಹಿಸಿದ್ದಾರೆ ನೋಡುಗರ ಮನಸಿಗೆ ಸೊಗಸಾಗಿ ಕಾಣುತ್ತದೆ, ಈ ಒಂದು ಹಾಡು ಮೆಹಬೂಬ್ ಸಾಬ್ ಅವರ ಕಂಠ ಸಿರಿಯಲ್ಲಿ ಅದ್ಬುತ ಮೂಡಿ ಬಂದಿದೆ, ಕೇಳುಗರಿಗೆ ಇಂಪಾಗುವ ರಿತಿಯಲ್ಲಿ ಸಂಗೀತ ವನ್ನು ವಿಜಯ್ ಕೃಷ್ಣಾ ಡಿ ಅವರು ನೀಡಿದ್ದಾರೆ , ಸುನಿಲ್ ಹರ್ದುರ್ ಸಾಹಿತ್ಯ ಬರೆದರೆ , ಇನ್ನು ಕ್ಯಾಮೆರಾ ಸೆರೆಯನ್ನು ರಾಜು ಹಾಗು ಅಶೋಕ್ ಅಣಗಿ ನಿಭಾಯಿಸಿದ್ದಾರೆ, ಪೋಸ್ಟರ್ ಕೈಚಳಕ ವನ್ನು ಅವಿಸ್ ಅವರು ಮಾಡಿದ್ದಾರೆ.

ಒಟ್ಟಾಗಿ ಇಡೀ ಒಂದು ತಂಡ ಬಹಳ ಚೆನ್ನಾಗಿ ಒಂದು ಆಲ್ಬಮ್ ಸಾಂಗ್ ನ ಮೂಲಕ ಸಿನಿಮಾ ರೂಪದಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ಗೀತೆಯನ್ನು ಆನಂದ್ ಆಡಿಯೋ ದಲ್ಲಿ ಬಿಡುಗಡೆ ಮಾಡಿದೆ , ಸಿನಿಮಾ ಹಾಗು ಕಿರುತೆರೆಯ ಹಲವಾರು ನಟ ನಟಿಯರು ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ , ನೀವು ಒಮ್ಮೆ ನೋಡಿ , ಸಮಾಜದ ಒಳಿತಿನ ಕಡೆಗೆ ನಮ್ಮ ನಡೆ,