ಇಷ್ಟು ಖಾರವಾಗಿ ಹೇಳಿದ್ಯಾಕೆ ಅಂದರೆ, ನಾವು ಟ್ರೋಲ್ ಪೇಜ್ಗಳನ್ನ ನೋಡಿದ್ರೆ, ಈ ಸ್ಥಾನದಲ್ಲಿದ್ದೇವೆ, ಆ ಸ್ಥಾನದಲ್ಲಿದ್ದೇವೆ ಅಂತ ಗೊತ್ತಾಗುತ್ತೆ,
ಸಾಮಾಜಿಕ ಜಾಲತಾಣಗಳು ಎಷ್ಟು ಉಪಯುಕ್ತವೋ.. ಅಷ್ಟೇ ವಿಷಕಾರಿಯೂ ಹೌದು.. ಸೋಶಿಯಲ್ ಮಿಡಿಯಾ ಬಳಸುವವರನ್ನ ಟ್ರೋಲ್ ಮಾಡುವುದನ್ನ ಕಂಡರೆ ನಿಜಕ್ಕೂ ಸಾಮಾಜಿಕ ಜಾಲತಾಣವೇ ಬೇಡವಪ್ಪಾ ಎಂಬಂತಾಗಿದೆ ಎಂಬ ಮಾತುಗಳು ಸಿನಿಗಲ್ಲಿಯಲ್ಲಿ ಕೇಳಿಬರುತ್ತಿರುವ ಮಾತು.. ಕೆಲ ದಿನಗಳ ಹಿಂದೆ ಬಾಲಿವುಡ್ ಸ್ಟಾರ್ ಅಮೀರ್ ಖಾನ್ ಸೋಷಿಯಲ್ ಮಿಡಿಯಾದಿಂದ ಹೊರಗುಳಿಯುತ್ತೇನೆ ಅಂತ ಹೇಳಿದ್ದರು. ಒಳ್ಳೆಯ ಬದಲಾವಣೆಗಾಗಿ ಸಾಮಾಜಿಕ ಜಾಲತಾಣದಿಂದ ದೂರು ಇರುವುದಾಗಿ ಅನೌನ್ಸ್ ಮಾಡಿದ್ದರು. ಇದಕ್ಕೆ ನಟ ಜಾನ್ ಅಬ್ರಹಾಂ ಕೂಡ ಥಮ್ಸ್ ಅಪ್ ಮಾಡಿದ್ದರು. ನಾನು ಕೂಡ ಸೋಷಿಯಲ್ ಪ್ಲಾಟ್ ಫಾರ್ಮ್ನಿಂದ ಹೊರಗೆ ಹೋಗಬೇಕು ಅಂತ ಸುಮಾರು ವರ್ಷಗಳ ಹಿಂದಿನಿಂದಲೂ ಅಂದುಕೊಳ್ಳುತ್ತಿದೆ ಎಂಬ ಮಾತನ್ನ ಹಂಚಿಕೊಂಡಿದ್ದರು.
ಯಾಕೆಂದರೆ, ಸಿನಿಮಾ ನಿರ್ಮಾಣ ಮಾಡುವವರು ಮತ್ತು ನಿರ್ದೇಶಕರು ನಟರಿಗೆ ಕೆಲ ಟಿಪ್ಸ್ಗಳನ್ನ ನೀಡುತ್ತಾರೆ. ಅದರಂತೆ ಆ್ಯಕ್ಟರ್ಸ್ನ ಒಡನಾಟವೂ ಆಗೆಯೇ ಇರುತ್ತವೆ. ಆದರೆ ಮ್ಯಾನೇಜರ್ ಬಂದು ಒಬ್ಬ ನಟನಿಗೆ, ನೀವು ಎರಡನೇ ಸ್ಥಾನದಲ್ಲಿದ್ದೀರಾ ಅಂತ ಹೇಳ್ತಾರೆ. ಇದಕ್ಕೆ ಆ್ಯಕ್ಟರ್ ಮೇಲೇರಿ ಕುಳಿತರೇ ಆವನ ಕಥೆ ಮುಗಿಯುತು ಅಂತ, ಎರಡನೇ ಸ್ಥಾನದಲ್ಲಿರೋದು ತುಂಬಾ ಡೇಂಜರ್ ಪ್ಲೇಸ್ ಅಂತ ಮನವರಿಕೆ ಮಾಡಿಕೊಂಡರೆ ಅಷ್ಟೇ ಸಾಕು ಅಂತ ತಮ್ಮ ಅನಿಸಿಕೆ ಹಂಚಿಕೊಂಡರು.
ಇಷ್ಟು ಖಾರವಾಗಿ ಹೇಳಿದ್ಯಾಕೆ ಅಂದರೆ, ನಾವು ಟ್ರೋಲ್ ಪೇಜ್ಗಳನ್ನ ನೋಡಿದ್ರೆ, ಈ ಸ್ಥಾನದಲ್ಲಿದ್ದೇವೆ, ಆ ಸ್ಥಾನದಲ್ಲಿದ್ದೇವೆ ಅಂತ ಗೊತ್ತಾಗುತ್ತೆ, ಜೊತೆಗೆ ನಮ್ಮ ತಲೆಗೂ ಹುಳ ಬಿಟ್ಟುಕೊಂಡಂತೆ ಆಗುತ್ತದೆ ಅಂದರು. ಒಂದು ವೇಳೆ ನಾವು ಟ್ರೋಲ್ಸ್ಗಳನ್ನ ನೋಡದೇ ಇದ್ದರೇ, ಆರಾಮಾಗಿ ಇರಬಹುದು, ಯಾವ ಚಿಂತೆಯೂ ಇರುವುದಿಲ್ಲ ಅಂತ ಅಭಿಪ್ರಾಯ ತಿಳಿಸಿದರು. ಒಟ್ಟಾರೆ, ಸೋಷಿಯಲ್ ಮೀಡಿಯಾ ಬಾಲಿವುಡ್ ನಟರಿಗಷ್ಟೇ ಕಾಡುತ್ತಿದ್ಯಾ.. ಅಥವಾ ಸಿನಿದಿಗ್ಗಜರಿಗೆ ಈ ಕಿರಿಕಿರಿ ಇದ್ಯಾ ಅನ್ನೋದು ಅವರು ಸೋಷಿಯಲ್ ಮೀಡಿಯಾದಿಂದ ದೂರ ಇಳಿದಾಗಲೇ ತಿಳಿಯುತ್ತಿದೆ..