ಸಿಲ್ಕ್ ಸ್ಮಿತಾ ಅವರ ನಿಜವಾದ ಹೆಸರು ಏನು? ನೇಣಿಗೆ ಕೊರಳೊಡ್ಡಿದ್ದು ಯಾಕೆ?

ಸಿಲ್ಕ್ ಸ್ಮಿತಾ ಅವರ ನಿಜವಾದ ಹೆಸರು ಏನು?

ವಿಜಯಲಕ್ಷ್ಮಿ ಎಂಬ ಹೆಸರಿನ ಇವರು ಆಂದ್ರ ಪ್ರದೇಶದ ಎಲೂರು ಪ್ರದೇಶದಲ್ಲಿ ಒಂದು ಬಡ ಕುಟುಂಬದಲ್ಲಿ ಜನಿಸಿದರು, ನಾಲ್ಕನೇ ತರಗತಿಗೆ ತನ್ನ ವಿದ್ಯಾಬ್ಯಾಸವನ್ನು ನಿಲ್ಲಿಸಿ ಚಲನಚಿತ್ರ ತಾರೆಯಾಗಲು ನಿರ್ಧರಿಸಿದರು. ಆಕೆಯ ಚಿಕ್ಕಮ್ಮನ ಜೊತೆಯಲ್ಲಿ ಮದ್ರಾಸ್‌ಗೆ ತೆರಳಿದರು ತಕ್ಷಣವೇ ಆಕೆಗೆ ಒಬ್ಬ ಪ್ರಾಯೋಜಕರು ದೊರೆತು ಸ್ಮಿತಾ ಎಂಬ ಹೆಸರನ್ನು ಸೂಚಿಸಿದರು. ಆಕೆಯ ಮೊದಲ ಪ್ರಮುಖ ತಮಿಳು ಚಿತ್ರ 1979ರ ವಂದಿ ಚಕ್ರಂ ನಿಂದ ಹೆಚ್ಚು ಗುರುತಿಸಲ್ಪಟ್ಟ ನಂತರ ಆ ಚಿತ್ರದಲ್ಲಿನ ಪಾತ್ರದ ಹೆಸರಾದ “ಸಿಲ್ಕ್” ಎಂಬ ಹೆಸರನ್ನು ಪಡೆದಳು.

ಸಿಲ್ಕ್ ಸ್ಮಿತಾ ಜೀವನ ಕತೆ

ದಕ್ಷಿಣ ಭಾರತದ ಮೋಹಕ ನಟಿ ಸಿಲ್ಕ್ ಸ್ಮಿತಾ ಜೀವನ ಕತೆಯನ್ನಾಧರಿಸಿ ಹಿಂದಿಯಲ್ಲಿ ಡರ್ಟಿ ಪಿಕ್ಚರ್ ಹೆಸರಿನ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾ ಬಿಡುಗಡೆಯಾಗಿ ಒಂದು ವಾರಕ್ಕೇ ಆ ಕಾಲಕ್ಕೆ ಮೂವತ್ತು ಕೋಟಿ ಲಾಭ ಮಾಡಿತ್ತು.  ಸಿಲ್ಕ್ ಪಾತ್ರದಲ್ಲಿ ನಟಿಸಿದ್ದ ವಿದ್ಯಾಬಾಲನ್ ಗೆ ನ್ಯಾಷನಲ್ ಅವಾರ್ಡೂ ಸಿಕ್ಕಿತ್ತು. ಈಗ ಇದೇ ಸಿಲ್ಕ್ ಸ್ಟೋರಿ ಆಧರಿಸಿ ಮತ್ತೊಂದು ಸಿನಿಮಾ ತಯಾರಾಗಲಿದೆ. ಅದು ತಮಿಳಿನಲ್ಲಿ. ಈ ಹಿಂದೆ ಕಾಮಿಡಿ ಹೀರೋ ಸಂತಾನಂ ನಟಿಸಿದ್ದ ಕಣ್ಣಾ ಲಡ್ಡು ತಿನ್ನ ಆಸೆಯಾ ಎನ್ನುವ ಹಿಟ್ ಸಿನಿಮಾ ನೀಡಿದ್ದವರು ಕೆ.ಎಸ್. ಮಣಿಕಂಠನ್. ಕಾಮಿಡಿ ಹಿಟ್ ನೀಡಿದ್ದ ಮಣಿಕಂಠನ್ ಈ ಸಲ ಸ್ಮಿತಾ ಬದುಕಿನತ್ತ ಕ್ಯಾಮೆರಾ ತಿರುಗಿಸಿದ್ದಾರೆ. 

ತನ್ನ ಮಾದಕ ನೃತ್ಯ – ನೋಟದಿಂದ ನೋಡುಗರೆದೆಗೆ ಕಿಚ್ಚು ಹಚ್ಚುತ್ತಿದ್ದ ಸಿಲ್ಕ್ ಸ್ಮಿತಾ ಎಂಬ ನಟಿ ಅಕ್ಷರಶಃ ರಸಿಕರ ರಾಣಿಯಾಗಿದ್ದವಳು. ದಕ್ಷಿಣ ಭಾರತದ ಖ್ಯಾತನಾಮರ ಜೊತೆಯಲ್ಲೆಲ್ಲಾ ಹೆಜ್ಜೆಹಾಕಿದ್ದ ಸ್ಮಿತಾ ಹಣ, ಜನಪ್ರಿಯತೆ ಎರಡನ್ನೂ ಯಥೇಚ್ಚವಾಗಿ ಸಂಪಾದಿಸಿದ್ದ ಕಲಾವಿದೆ. ಹಾಗಾಗಿ ಬಿಚ್ಚಮ್ಮಂದಿರ ಪರ್ವವೇ ಚಿತ್ರರಂಗವನ್ನಾಳುತ್ತಿದ್ದರೂ ಒಂದು ಕಾಲದ ಏಜ್ ಓಲ್ಡ್ ನಟಿಯಾಗಿದ್ದ ಸ್ಮಿತಾಳ ಜೀವನ ಕತೆಯನ್ನಾಧರಿಸಿದ ಮತ್ತೊಂದು ಸಿನಿಮಾ ಬರಲಿದೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ. ಸಿಲ್ಕ್ ಸ್ಮಿತಾ ಓದಿದ್ದು ಕೇವಲ 4ನೆಯ ತರಗತಿಯವರೆಗೆ ಮಾತ್ರ. ತೆಲುಗು ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ. ಹಣವನ್ನಾಗಲೀ, ಯಶಸ್ಸನ್ನಾಗಲೀ ಹೇಗೆ ಕಾಪಾಡಬೇಕೆಂದು ಆಕೆಗೆ ತಿಳಿಯುತ್ತಿರಲಿಲ್ಲ. ಹಣ ಕೊಟ್ಟರೇ ಕೊಟ್ಟರು, ಇಲ್ಲವಾದರೆ ಇಲ್ಲ. ಅದ್ಯಾವ ಪುಣ್ಯಾತ್ಮ ಅವಳಿಗೆ ಸಿಲ್ಕ್ ಎಂದು ನಾಮಕರಣ ಮಾಡಿದನೋ! ರೇಶ್ಮೆಗೂಡಿನಂತಹ ಸಿಲ್ಕ್ ಸುಮಾರು ಹದಿನೈದು ವರ್ಷಗಳ ಚಿತ್ರಜೀವನದುದ್ದಕ್ಕೂ ಸಿಲ್ಕಿನ ಎಳೆಎಳೆಯಾಗಿ ಬಿಡಿಸಿಕೊಂಡೇ ಬೆಳೆದಳು. ಗೂಡಿನೊಳಗಿನ ಹುಳು ಸತ್ತಿರುವಂತೆ ಅವಳ ಆದರ್ಶಗಳು ಎಂದೋ ಸತ್ತು ಹೋಗಿತ್ತು. ಆದರೆ ಆಸೆಗಳು ದಿನದಿನಕ್ಕೂ ಜೀವಂತವಾಗುತ್ತಿದ್ದವು.

ತೆರೆಯ ಮೇಲೆ ತನ್ನ ಸೆಕ್ಸಿ ಗ್ಲಾಮರ್ ಇಮೇಜಿನಿಂದ ಕಂಗೊಳಿಸುತ್ತಿದ್ದ ಸ್ಮಿತಾಳ ವೈಯಕ್ತಿಕ ಬದುಕು ಹೇಗಿತ್ತು? ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ಆಕೆ ನೇಣಿಗೆ ಕೊರಳೊಡ್ಡಬೇಕಾದ ಸ್ಥಿತಿ ಏಕೆ ನಿರ್ಮಾಣವಾಯಿತು? ಕಲಾವಿದೆಯಾಗಿ ಚಿತ್ರರಂಗದಲ್ಲಿ ಆಕೆಗಿದ್ದ ಸ್ಥಾನಮಾನವೇನು? ಎಂಬಿತ್ಯಾದಿ ವಿವರಗಳು ಈ ಸಿನಿಮಾದಲ್ಲಿರಲಿವೆಯಂತೆ. ಈ ಬಾರಿ ಸ್ಮಿತಾಳ ಪಾತ್ರವನ್ನು ಯಾರು ನಿಭಾಯಿಸುತ್ತಾರೆ ಅನ್ನೋ ವಿಚಾರವಿನ್ನೂ ಜಾಹೀರಾಗಿಲ್ಲ. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.