ಈ ವಾರ ‘ಶಿವಾರ್ಜುನ’ ಮರು ಬಿಡುಗಡೆ

‘ಶಿವಾರ್ಜುನ’ ಚಿತ್ರ ಕಳೆದ ಮಾರ್ಚ್ ನಲ್ಲಿ ತೆರಕಂಡಿತ್ತು. ಬಿಡುಗಡೆ ದಿನವೇ ನೋಡುಗರಿಂದ ಚಿತ್ರಕ್ಕೆ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಚಿತ್ರ ತೆರೆ ಕಂಡ ಕೆಲವೆ ದಿನಗಳಲ್ಲಿ ಕೊರೋನ ಹಾವಳಿಯಿಂದ ಚಿತ್ರಮಂದಿರಗಳನ್ನು ಮುಚ್ಚಲಾಯಿತು. ಆ ನಂತರ ನಾಯಕ ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣ ಹೊಂದಿದ್ದು, ಬೇಸರದ ಸಂಗತಿ.
ಆರು ತಿಂಗಳ ನಂತರ ಈಗ ಕೇಂದ್ರ ಸರ್ಕಾರದಿಂದ ಚಿತ್ರ ಮಂದಿರ ತೆರೆಯಲು ಒಪ್ಪಿಗೆ ನೀಡಿದೆ. ಅಕ್ಟೋಬರ್ 16 ರಂದು ಶಿವಾರ್ಜುನ ಚಿತ್ರ ಮರು ಬಿಡುಗಡೆಯಾಗುತ್ತಿದೆ. ಕೇಂದ್ರ ಸರ್ಕಾರ ನೀಡಿರುವ ಮಾರ್ಗಸೂಚಿಯಂತೆ ಚಿತ್ರವನ್ನು ಬಿಡುಗಡೆಗೊಳಿಸಲು ಚಿತ್ರತಂಡ ನಿಶ್ಚಯಿಸಿದೆ. ನಿಶ್ಚಿತ ಕಂಬೈನ್ಸ್ ಲಾಂಛನದಲ್ಲಿ‌ ಮಂಜುಳಾ ಶಿವಾರ್ಜುನ್ ನಿರ್ಮಿಸಿರುವ ಈ ಚಿತ್ರವನ್ನು ಶಿವತೇಜಸ್ ನಿರ್ದೇಶಿಸಿದ್ದಾರೆ. ಹೆಚ್ ಸಿ ವೇಣು ಛಾಯಾಗ್ರಹಣ, ಸುರಾಗ್ ಸಂಗೀತ ನಿರ್ದೇಶನ ಮತ್ತು ಕೆ.ಎಂ.ಪ್ರಕಾಶ್ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಚಿರಂಜೀವಿ ಸರ್ಜಾ, ಅಮೃತ ಅಯ್ಯಂಗಾರ್, ಅಕ್ಷತ ಶ್ರೀನಿವಾಸ್, ಕಿಶೋರ್, ತಾರಾ, ಅವಿನಾಶ್, ಕುರಿ ಪ್ರತಾಪ್, ಶಿವರಾಜ್ ಕೆ.ಆರ್ ಪೇಟೆ ಹಾಗೂ ನಟಿ ತಾರಾ ಅವರ ಪುತ್ರ ಕೃಷ್ಣ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.