ಮದುವೆಯಾಗದ ಶಕೀಲಾಳಿಗೂ ಇದ್ದಾಳೆ ಒಬ್ಬಳು ಮಗಳು..?

ಶಕೀಲಾ ಮದುವೆಯೇ ಆಗಿಲ್ಲಾ..? ಇದರ ನಡುವೆ ತಮ್ಮ ಮಗಳ ಪರಿಚಯ ಹೇಗಪ್ಪಾ ಮಾಡುತ್ತಾಳೆ ಅಂತ ಒಮ್ಮೆಲ್ಲೆ ಎಲ್ಲರ ಕಣ್ಣುಬ್ಬು ಮೇಲೇರೋದಂತೂ ಸತ್ಯ.

ಶಕೀಲಾ.. ಮಾದಕ ನಟಿ ಅಂತಲೇ ಫುಲ್‌ ಫಮೇಸ್ ಆಗಿರೋ ನಟಿ… ಸ್ಯಾಂಡಲ್‌ವುಡ್‌, ಟಾಲಿವುಡ್‌, ಕಾಲಿವುಡ್‌, ಮಾಲಿವುಡ್‌ನಲ್ಲೂ ನಟನೆ ಮಾಡಿರೋ ಬ್ಯುಟಿಪುಲ್‌ ನಟಿ ಈ ಶಕೀಲಾ.. ಸಿನಿಮಾಗೆ ಕಾಲಿಟ್ಟ ಶಕೀಲ ಹಲವು ಏಳು-ಬೀಳುಗಳನ್ನ ಕಂಡಿದ್ದಾರೆ. ಎಷ್ಟೇ ಸಾವಲುಗಳು ಬಂದ್ರೂ ಎದೆಗುಂದದೇ ಯಶಸ್ವಿ ಜೀವನ ನಡೆಸುತ್ತಿದ್ದಾರೆ. ಇದೀಗ ನಟಿ ಶಕೀಲ ತಮ್ಮ ಮಗಳನ್ನ ಸಿನಿಮಾ ಕ್ಷೇತ್ರಕ್ಕೆ ಪರಿಚಯ ಮಾಡಲು ಮುಂದಾಗಿದ್ದಾರೆ.

ಶಕೀಲಾ ಮದುವೆಯೇ ಆಗಿಲ್ಲಾ..? ಇದರ ನಡುವೆ ತಮ್ಮ ಮಗಳ ಪರಿಚಯ ಹೇಗಪ್ಪಾ ಮಾಡುತ್ತಾಳೆ ಅಂತ ಒಮ್ಮೆಲ್ಲೆ ಎಲ್ಲರ ಕಣ್ಣುಬ್ಬು ಮೇಲೇರೋದಂತೂ ಸತ್ಯ. ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನ ಅನುಭವಿಸಿದ ಶಕೀಲಾ, ಮದುವೆಯಾಗಲೇಬಾರದು ಅಂತ ನಿರ್ಧರಿಸಿಕೊಂಡಿದ್ದರು. ಅದರಂತೆಯೇ, ಮದುವೆಯಾಗದೇ ತಮಗಿರುವ ಟ್ಯಾಲೆಂಟ್‌ ಅನ್ನ ಬಳಸಿ ಜೀವನ ಸಾಗಿಸುತ್ತಿದ್ದಾರೆ. ಇನ್ನು ಶಕೀಲಾ ಮದುವೆಯಾಗದಿದ್ದ ಮಾತ್ರಕ್ಕೆ ಮಕ್ಕಳು ಮೇಲೆ ಪ್ರೀತಿಯಿಲ್ಲ ಅಂತ ಏನಿಲ್ಲ. ತಮ್ಮೊಟ್ಟಿಗೆ ಜೀವನ ನಡೆಸಲು, ಮಕ್ಕಳಾದ್ರೂ ಬೇಕು ಅಂತ ಒಂದು ಹೆಣ್ಣು ಮಗಳನ್ನ ದತ್ತು ತೆಗೆದುಕೊಂಡಿದ್ದಾರೆ. ಅದು ಕೂಡ ತೃತೀಯ ಲಿಂಗೀಯ ಹೆಣ್ಣು ಮಗಳನ್ನ ಶಕೀಲಾ ತನ್ನ ಮಗಳಾಗಿ ಸಾಕುತ್ತಿದ್ದಾಳೆ. ಬಹಳ ವರ್ಷಗಳಿಂದ ಆಕೆಗೆ ಮಗಳಿದ್ದಾಳೆ ಎಂಬ ಮಾಹಿತಿಯೇ ಸಿಕ್ಕಿರಲಿಲ್ಲ, ಇತ್ತೀಚೆಗೆ ತಮಿಳು ಟಾಕ್‌ ಶೋ ಒಂದರಲ್ಲಿ ಮಾಹಿತಿ ಶೇರ್‌ ಮಾಡಿದ್ದು, ತೃತೀಯ ಲಿಂಗಿ ಮಿಲ್ಲಾ ಎಂಬಾಕೆ ತಮ್ಮ ಮಗಳು, ಆಕೆಯನ್ನ ದತ್ತು ಪಡೆದು ಬೆಳೆಸಿದ್ದೇನೆ ಅಂತ ಹೇಳಿದ್ರು.

ತನ್ನ ಮಗಳ ನೆನೆದ ಶಕೀಲ ಸ್ವಲ್ಪ ಎಮೋಶನ್‌ ಕೂಡ ಆದ್ರು..”ಕಠಿಣ ಸಮಯದಲ್ಲಿದ್ದ ನನಗೆ, ಮಿಲ್ಲಾಳೇ ಶಕ್ತಿಯಾಗಿದ್ದಳು, ಅವಳಿಲ್ಲದಿದ್ರೆ ನಾನು ಇವತ್ತಿಗೆ ಏನು ಸಾಧನೆ ಮಾಡೋಕೆ ಅಗುತ್ತಿರಲಿಲ್ಲ. ನನ್ನ ಮಗಳೇ ನನಗೆ ಜೀವ” ಅಂತ ತಮ್ಮ ಮನದಾಳದ ಮಾತನ್ನ ಹಂಚಿಕೊಂಡ್ರು.. ಕಾಸ್ಟ್ಯೂಮ್‌ ಡಿಸೈನರ್‌ ಆಗಿರುವ ಮಿಲ್ಲಾ ತಮ್ಮ ವೃತ್ತಿ ಬದುಕಿನಲ್ಲಿ ಫುಲ್‌ ಬ್ಯುಸಿಯಾಗಿದ್ದಾರೆ. ಹೆತ್ತ ಮಗಳಂತೆ ಸಾಕುವ ತಾಯಿಯ ಪ್ರೀತಿಯೇ ಸಾಕ್‌ ಏನಗೆ ಅಂತ ಅಮ್ಮನನ್ನೂ ಅಷ್ಟೇ ಹೆಚ್ಚಾಗಿ ಪ್ರೀತಿಸುತ್ತಿದ್ದಾಳೆ.