‘ಸಾವಿತ್ರಿ’ ಚಿತ್ರದ ನಾಯಕರಾಗಿ ವಿಜಯ ರಾಘವೇಂದ್ರ ನಟನೆ.

ಎಸ್ ದಿನೇಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ‌ ಮಾಡುತ್ತಿದ್ದಾರೆ. ‘ಉಯ್ಯಾಲೆ’ ನಂತರ ಇದು ನಿರ್ದೇಶಕರಿಗೆ ಎರಡನೇ ಚಿತ್ರ.

ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿ ತಾರಾ. ಈಗ ಅವರು ಪ್ರಧಾನ ಪಾತ್ರದಲ್ಲಿ ಅಭಿನಯಿಸುತ್ತಿರುವ ಸಾವಿತ್ರಿ ಚಿತ್ರದ ನಾಯಕರಾಗಿ ವಿಜಯ ರಾಘವೇಂದ್ರ ಆಯ್ಕೆಯಾಗಿದ್ದಾರೆ.ಈ ಚಿತ್ರದ ಚಿತ್ರೀಕರಣ ನವೆಂಬರ್‌ 19 ರಿಂದ ಆರಂಭವಾಗಲಿದೆ. ಬೆಂಗಳೂರು ಸುತ್ತಮುತ್ತ 45 ದಿನಗಳ ಚಿತ್ರೀಕರಣ ನಡೆಯಲಿದೆ. ಪಿ.ಎನ್.ಪಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರಶಾಂತ್ ಕುಮಾರ್ (ಹೀಲಲ್ಲಿಗೆ) ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪ್ರಶಾಂತ್ ಕುಮಾರ್ ಮೂಲತಃ ಸಾಫ್ಟ್ ವೇರ್ ಉದ್ಯೋಗಿ.

ಎಸ್ ದಿನೇಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ‌ ಮಾಡುತ್ತಿದ್ದಾರೆ. ‘ಉಯ್ಯಾಲೆ’ ನಂತರ ಇದು ನಿರ್ದೇಶಕರಿಗೆ ಎರಡನೇ ಚಿತ್ರ. ಖ್ಯಾತ ಸಾಹಿತಿ ಹೃದಯ ಶಿವ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಗೀತರಚನೆ ಹಾಗೂ ಸಂಭಾಷಣೆ ಕೂಡ ಹೃದಯ ಶಿವ ಅವರದೆ. ಇಷ್ಟು ದಿನ ಗೀತರಚನೆಕಾರರಾಗಿದ್ದ ಹೃದಯ ಶಿವ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ತಾರಾ, ವಿಜಯ ರಾಘವೇಂದ್ರ, ಪ್ರಕಾಶ್ ಬೆಳವಾಡಿ, ಸಂಜು ಬಸಯ್ಯ(ಕಾಮಿಡಿ ಕಿಲಾಡಿಗಳು) ,‌ಬೇಬಿ ಲೈಲಾ, ಪ್ರಮೋದ್** ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.