_ _ _ತೀಟೆಗೆ ಇಡೀ ಚಂದನವನಕ್ಕೇ ಕಾಡ್ಗಿಚ್ಚು ಹಚ್ಚಬೇಡಿ

ಸಿನಿಮಾ ಅನ್ನೋದು ಯಾರೊಬ್ಬರಿಂದನೊ ರೂಪುಗೊಂಡ ವಸ್ತುವಲ್ಲ. ಸಾವಿರ ಸಾವಿರ ಕನಸುಗಳಿಂದ ರೂಪುಗೊಂಡ ಬೃಹತ್ ಶಿಖರ. ದಯವಿಟ್ಟು ಅದನ್ನ ಕೆಡವಲು ಮುಂದಾಗಬೇಡಿ.

ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಹಂಬಲಿಸಿ ಎಷ್ಟೋ ಕಷ್ಟ ನಷ್ಟ ಅವಮಾನಗಳ ಸಹಿಸಿಕೊಂಡು ಕೆಲಸ ಮಾಡುವ ತಂತ್ರಜ್ಞರು, ನಿರ್ದೇಶಕರು, ನಟರು, ಕೇವಲ ಕಲ್ಪನೆಗಳಿಗೆ ಕೋಟಿ ಕೋಟಿ ಬಂಡವಾಳ ಹೂಡುವ ನಿರ್ಮಾಪಕರು. ಒಂದೊಂತ್ತಿನ ಊಟಕ್ಕಾಗಿ ಲೈಟ್ ಹಿಡಿಯುವ ಲೈಟ್ ಮ್ಯಾನ್ ಗಳು, ತನ್ನೊಳಗಿನ ಕಷ್ಟಗಳೆಷ್ಟೇ ಇದ್ದರೂ ನಟರ ಮುಖಕ್ಕೆ ಬಣ್ಣ ಹಚ್ಚಿ ನಗಿಸುವ ಮೆಕಪ್ ಮ್ಯಾನ್ ಗಳು, ತನ್ನ ಮಕ್ಕಳಿಗೆ ಹಬ್ಬಕ್ಕೆ ಹೊಸಾ ಬಟ್ಟೆತರಲು ತಿಂಗಳು ಪೂರ್ತಿ ದುಡಿದು ತೆರೆಮೇಲೆ ಅದ್ಬುತ ವಸ್ತ್ರಾಲಂಕಾರ ಮಾಡುವ ಕಾಸ್ಟ್ಯೂಮರ್ಸಗಳು, ಮನೇಲಿ ಅಪ್ಪ-ಅಮ್ಮನಿಗೆ ಹುಷಾರಿಲ್ಲ ಅಂದ್ರೂ,     ಬಂದು-ಬಳಗದವರ ಹತ್ರ ಬೈಸ್ಕೋಂಡ್ರೂ, ಮದುವೆ ಆಗೋಕೆ ಹೆಣ್ಣು ಕೊಡಲ್ಲ ಅಂದ್ರೂ, ಒಮ್ಮೊಮ್ಮೆ ತಿನ್ನೋಕೆ ಅನ್ನ ಇಲ್ಲದಿದ್ದರೂ, ಪ್ರೀತ್ಸಿದ್ ಹುಡ್ಗಿ ನೀನೇನು ಇನ್ನೂ ಸಾಧನೆ ಮಾಡಿಲ್ಲ ಅಂತ ಬಿಟ್ಟ್ ಹೋದ್ರೂ, ಸಿನಿಮಾನೇ ನಮ್ಮ ಜೀವ, ಸಿನಿಮಾನೇ ನಮ್ ಉಸಿರು ಅಂತ ಕೆಲಸ ಮಾಡೋ ನಿರ್ದೇಶಕರು, ಗೊತ್ತೋ ಗೊತ್ತಿಲ್ಲದೆ ಹೇಗೆಂದರೆ ಹಾಗೆ ಚಿತ್ರೀಕರಿಸಿ ತಂದ ಫೂಟೇಜನ್ನು ನಾ ಹಗಲೂ ರಾತ್ರಿ ಕಣ್ಣಿಗೆ ಎಣ್ಣೆ ಹಾಕ್ಕೊಂಡು ಅರ್ಧ ವಯಸ್ಸಿಗೇ ಕಣ್ ದೃಷ್ಟಿ ಕಳಕೊಂಡ್ರೂ ಜನರ ಮನೋರಂಜನೆಗೆ ಯಾವುದೇ ಅಡ್ಡಿಯಾಗದ ರೀತಿ ಸಂಕಲನ ಮಾಡುವ ಎಡಿಟರ್ಸ್, ದೇಹ ಸಪೋರ್ಟ್ ಮಾಡದಿದ್ದರೂ ಟ್ರ್ಯಾಕ್ & ಟ್ರ್ಯಾಲಿ ಹಾಕಿ 40ಅಡಿ ಕ್ರೇನ್ ಮೇಲೆ ಕೂತು ತಲೆ ಸುತ್ತು ಬಂದು ಬಿದ್ದು 20kg ಗಿಂಬಲ್ ಹಿಡ್ಕೊಂಡು ಬೆನ್ಮೂಳೆ ಮುರ್ಕೋಂಡ್ ಕೆಲಸ ಮಾಡೋ ಕ್ಯಾಮೆರಾ ಮ್ಯಾನ್ ಗಳ ಕಷ್ಟ, ಇದು ಸರ್ಕಾರ ಮಾಡಿರುವ 8ಘಂಟೆ ಕೆಲಸ ಮಾಡಿ ಬಾಗಿಲು ಮುಚ್ಚಿ ಮನೆಗೆ ಹೋಗುವ ಕೆಲಸವಲ್ಲ ಸಿನಿಮಾ.

24ಘಂಟೆ ಅವಿಶ್ರಾಂತವಾಗಿ ಯೋಚನೆ ಮಾಡುತ್ತಾ ಮೆದುಳಿಗೆ ಕೆಲಸ ಕೊಟ್ಟು ಮಾಡುವ ಕಾಯಕ ಕಣ್ರೀ. ಕ್ಯಾಮರಾ ಮುಂದೆ ಕುಳಿತು ನಮಗೆ ಎಲ್ಲಾ ಹಕ್ಕುಗಳಿವೆ, ನಾವೇ ಎಲ್ಲಾ ಬಲ್ಲೆವು, ಎಂದು ಸತ್ಯಾ ಸತ್ಯತೆಗಳು ತಿಳಿಯುವ ಮುನ್ನ, ಮಾದ್ಯಮಲೋಕದಲ್ಲಿ ಹರಡುವ ಮುನ್ನ, ಒಮ್ಮೆ ಯೋಚಿಸಿ. ಚಿತ್ರರಂಗದಲ್ಲಿ ಕೆಲಸ ಮಾಡುವವರೆಲ್ಲಾ ಸಿರಿವಂತಿಕೆಯ ಸುಪ್ಪತ್ತಿಗೆಯಲ್ಲಿ ಬಂದವರಲ್ಲ. ಇಂದಿಗೂ ಅಂತ್ಯ ಕಾಲದಲ್ಲಿ ಸಹಾಯಕ್ಕಾಗಿ ಕಾದು ಕುಳಿತಿರುವ ಎಷ್ಟೋ ಕಲಾವಿದರು ಮತ್ತು ತಂತ್ರಜ್ಞರುಗಳ ಜೀವನ ಕಣ್ಮುಂದೆ ಇದೆ. ಸಿನಿಮಾ ರಂಗ ಹೊರತುಪಡಿಸಿ ಇತರೆ ಕೆಲಸ ಮಾಡುವವರ ಜೀವನ ಬೇರೆ. ಸಿನಿಮಾನೇ ಜೀವನ ಸಿನಿಮಾನೇ ಉಸಿರು ಅಂತ ಕಲ್ಪನಾ ಲೋಕಕ್ಕೆ ರೆಕ್ಕೆ ಕಟ್ಟಿ, ನಾನು ಗಳಿಸಬೇಕಾದದ್ದು  ಹಣ ಅಲ್ಲ ಅದಕ್ಕೂ ಮೀರಿದ ಹೆಸರು, ಸಾಧನೆ, ಎಂದು ಸಾವಿರಾರು ಮೈಲಿಗಳು ಸಾವಿರಾರು ಕಷ್ಟ ನಷ್ಟ ಗಳನ್ನು ದಾಟಿ ಸಾಧನೆಯ ಹಾದಿ ಯಲ್ಲಿ ಚಿತ್ರರಂಗದ ಬಾಗಿಲಲ್ಲಿ ನಿಂತಿರುವ ಎಷ್ಟೋ ಪ್ರತಿಭೆಯಗಳನ್ನು ಮೀಟೂ – ಡ್ರಗ್ಸ್  ಹೆಸರಿನಲ್ಲಿ ಚಿವುಟಿ ಹಾಕಬೇಡಿ.

ಕೋವಿಡ್19 ಬಂದಂತಃ ಸಂದರ್ಭದಲ್ಲಿ ಚಿತ್ರರಂಗದಲ್ಲಿ ಕೆಲಸ ಮಾಡುವ ಎಲ್ಲಾ ವರ್ಗದ ಜನರೂ ಸಾಮಾನ್ಯ ಜನರಂತೆ ಸಾಲುಗಟ್ಟಿನಿಂತು ಸಹಾಯಕ್ಕಾಗಿ ಬೇಡಿದ ಕ್ಷಣ ನಿಮ್ಮದೇ ಮಾದ್ಯಮಗಳಲ್ಲಿ ಬಿತ್ತರ ಮಾಡಿದ್ದೀರಲ್ಲವೇ? ಈಗ ಹೇಳಿ ಚಿತ್ರಿಕರಣ ನಿಂತು ಸುಮಾರು 6 ತಿಂಗಳೇ ಕಳೆದಿವೆ ಜೀವನ ಸಾಗಿಸಲು ಕಷ್ಟ ಇರುವಾಗ ವಿನಾಕಾರಣ “ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ” ಅಂತ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗಬೇಡಿ. ಇದರಲ್ಲಿ ಕೆಲವು ಕಾಣದ ಕೈಗಳು ಈ ಡ್ರಗ್ಸ್ ದಂಧೆಯ ಹೆಸರಲ್ಲಿ ಚಂಧನವನಕ್ಕೆ ಕಾಡ್ಗಿಚ್ಚು ಹಚ್ಚಿ ನಾಶಮಾಡಲು ಹೊರಟಿದ್ದಾರೆ ಎನ್ನುವುದು ಅನುಮಾನಕ್ಕೆ ಕಾರಣವಾಗಿದೆ.

ಎಲ್ಲೊ ಯಾವನೊ ಒಬ್ಬ ಮಾಡೋ ತಗಡು ಕೆಲಸಕ್ಕೆ ಇಡೀ ಚಿತ್ರರಂಗದ ಬಣ್ಣ ಬಣ್ಣದ ಕನಸುಗಳಿಗೆ ಕಪ್ಪು ಮಸಿ ಬಳಿಯುವ ಪ್ರಯತ್ನ. ಈ ಡ್ರಗ್ಸ್, ಮೀಟೂ ನಂತಹ ಆರೋಪಗಳಿಗೆ ವಿನಾಕಾರಣ ಪದೇ ಪದೇ ಅವಮಾನಕ್ಕೆ ಸಿಕ್ಕಿ ಹಾಕಿಕೊಳ್ಳುವ ಅಥವಾ ಸಿಕ್ಕಿ ಹಾಕಿಸಿ ವಿಕೃತಾನಂದ ಅನುಭವಿಸುವ ಕೆಲವರು, ಒಮ್ಮೆ ಯೋಚಿಸಿ ನೀವು ಬೆಳಕಿಗೆ ಬಂದ್ದಿದ್ದೇ ಸಿನಿಮಾ ಮತ್ತು ಮನೋರಂಜನೆ ಯಿಂದ. ಪ್ರಾಮಾಣಿಕ ಪತ್ರಕರ್ತರು ಮೀಡಿಯಾಗಳು ಯಾರೂ ಒಂದಿಷ್ಟು ಇಂಡಸ್ಟ್ರಿಯ ಕೆಟ್ಟ ಹುಳುಗಳನ್ನು ಹುಡುಕಿ ಅವರಿಗೆ ಶಿಕ್ಷೆ ಆಗುವ ಹಾಗೆ ಮಾಡಿ. ಆದರೆ ಅದೇ ಹೆಸರಲ್ಲಿ ಇಡೀ ಚಿತ್ರರಂಗವೇ ಡ್ರಗ್ಸ್ ನಶೆಯ ದಂದೆಯಲ್ಲಿದೆ ಎಂದು ಬಿಂಬಿಸಬೇಡಿ. ಪ್ರಾಮಾಣಿಕರ ಕನಸುಗಳ ಸಮಾಧಿ ಮಾಡಬೇಡಿ. ಇದು ಗಂಧದ ಗುಡಿ, ಯಾರದೋ ತಪ್ಪಿಗೆ ಇಡೀ ಚಂಧನವನಕ್ಕೇ ಕಾಡ್ಗಿಚ್ಚು ಹಚ್ಚಬೇಡಿ, ಕನಸುಗಳ ಸುಡಬೇಡಿ, ಒಮ್ಮೆ ಯೋಚಿಸಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

❤️ ನಿಮ್ಮ ಪ್ರೀತಿಯ ಮಂಜುಚರಣ್ (ಸಹನಿರ್ದೇಶಕ)