ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ತೀರಾ ಗಂಭೀರ

ಕೋವಿಡ್ 19 ಸೊಂಕಿಗೆ ತುತ್ತಾಗಿ ಕಳೆದ ಒಂದು ತಿಂಗಳಿನಿಂದ ಚೆನ್ನೈನ ಎಂಜಿಆರ್ ಹೆಲ್ತ್ ಕೇರ್ ಆಸ್ಪತ್ರೆಯಲ್ಲಿರುವ ಬಹುಭಾಷಾ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಇಂದು ರಾತ್ರಿ ಸಂಪೂರ್ಣ ಹದಗೆಟ್ಟಿದೆ.ಈ ಮಾಹಿತಿಯನ್ನು ಆಸ್ಪತ್ರೆಯ ವೈದ್ಯಕೀಯ ಸೇವೆಗಳ ಸಹಾಯಕ ನಿರ್ದೇಶಕಿ ಡಾ. ಅನುರಾಧಾ ಭಾಸ್ಕರನ್ ಅವರು ಹೆಲ್ತ್ ಬುಲೆಟಿನ್ ಮೂಲಕ ತಿಳಿಸಿದ್ದಾರೆ. ಆಗಸ್ಟ್ 5ರಿಂದ ಆಸ್ಪತ್ರೆಯಲ್ಲಿ ದಾಖಲಾಗಿರುವ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ದೇಹಾರೋಗ್ಯ ಸ್ಥಿತಿ ಕಳೆದ 24 ಗಂಟೆಗಳಲ್ಲಿ ತೀರಾ ಹದಗೆಟ್ಟಿದೆ. ಅವರನ್ನು ಇನ್ನಷ್ಟು ಜೀವನಾಧಾರ ವ್ಯವಸ್ಥೆಯಲ್ಲಿ ಇರಿಸಲಾಗಿದೆ, ಆದರೆ ಅವರ ಸ್ಥಿತಿ ತೀರಾ ಗಂಭೀರವಾಗಿದೆ. ಎಂಜಿಎಂ ಹೆಲ್ತ್ ಕೇರ್ ನ ಪರಿಣತ ವೈದ್ಯರ ತಂಡ ಅವರ ದೇಹಸ್ಥಿತಿಯನ್ನು ನಿಕಟವಾಗಿ ನಿಗಾ ವಹಿಸುತ್ತಿದೆ ಎಂದು ಆಸ್ಪತ್ರೆಯ ಬುಲೆಟಿನ್ ತಿಳಿಸಿದೆ.

ಈ ನಡುವೆ ನಟ ಕಮಲ್ ಹಾಸನ್ ಅವರು ಇಂದು ಸಂಜೆ ಎಂಜಿಆರ್ ಆಸ್ಪತ್ರೆಗೆ ಭೇಟಿ ನೀಡಿ ಎಸ್.ಪಿ.ಬಿ. ಅವರ ಆರೋಗ್ಯ ಸ್ಥಿತಿಯ ಕುರಿತಾಗಿ ಮಾಹಿತಿ ಪಡೆದುಕೊಂಡಿದ್ದಾರೆ.

ತಮ್ಮ ತಂದೆಯವರ ಆರೋಗ್ಯ ಸ್ಥಿತಿ ಇದೀಗ ಸುಧಾರಿಸುತ್ತಿದ್ದು ಅವರು ಶೀಘ್ರವೇ ಮನೆಗೆ ಮರಳಲು ಕಾತರದಿಂದ್ದಾರೆ ಎಂದು ಬಾಲು ಅವರ ಪುತ್ರ ಎಸ್.ಪಿ. ಚರಣ್ ಅವರು ಬುಧವಾರವಷ್ಟೇ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.