ಆರ್ ಜೆ ರೋಹಿತ್ “ರೌಡಿ ಫೆಲೋ’ ಎಂಬ ಸಿನಿಮಾವನ್ನು ನಿರ್ದೇಶಿಸಿ, ನಟಿಸುತ್ತಿದ್ದಾರೆ. ಈಗ ಆ ಚಿತ್ರಕ್ಕೆ ಹೊಸ ಸೇರ್ಪಡೆಯಾಗಿದೆ. ಅದು “ನೆನಪಿರಲಿ’ ಪ್ರೇಮ್ “ ರೌಡಿ ಫೆಲೋ’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅವರು ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದು,ಕಥೆಗೆ ಟ್ವಿಸ್ಟ್ ಕೊಡುವ ಪಾತ್ರವಂತೆ.
ಅಂದಹಾಗೆ, ರೋಹಿತ್ ನಿರ್ದೇಶನದ ಈ ಚಿತ್ರದ ಹಿಂದೆ “ಕೆಜಿಎಫ್’ ಖ್ಯಾತಿಯ ಪ್ರಶಾಂತ್ ನೀಲ್ ಇದ್ದಾರೆ. ಇಡೀ ಸಿನಿಮಾದ ಸ್ಕ್ರಿಪ್ಟ್ ಕೆಲಸ ಪ್ರಶಾಂತ್ ನೀಲ್ ಅವರ ಸಮ್ಮುಖದಲ್ಲೇ ಆಗಿದೆ. ಇದೀಗ “ರೌಡಿ ಫೆಲೋ’ ಮೂಲಕ ನಿರ್ದೇಶನದಲ್ಲೂ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ ರೋಹಿತ್.
ಈ ಹಿಂದೆ “ಕರ್ವ” ಸಿನಿಮಾ ಮೂಲಕ ಸುದ್ದಿಯಾಗಿದ್ದ ರೋಹಿತ್ ಆ ಬಳಿಕ ಅವರು”ಬಕಾಸುರ’ ಚಿತ್ರದಲ್ಲಿ ನಟಿಸಿದ್ದರು. ರವಿಚಂದ್ರನ್ ಜೊತೆ ಮಾಡಿದ ಎರಡನೇ ಸಿನಿಮಾ ಅದಾಗಿತ್ತು. ರೋಹಿತ್ಗೆ ಈ ಚಿತ್ರದಲ್ಲಿ ವಿದ್ಯಾ ಪ್ರದೀಪ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು, ಈ ಚಿತ್ರ ಪದ್ಮಾವತಿ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿದೆ. ಲವಿತ್ ಕುಮಾರ್ ಛಾಯಾಗ್ರಹಣವಿದೆ. ನಕುಲ್ ಅಭಯಂಕರ್ ಅವರ ಸಂಗೀತ, ವೆಂಕಿ ಯುಡಿವಿ ಅವರ ಸಂಕಲನ, ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತವಿದ್ದು ಚಿತ್ರದಲ್ಲಿ ರೋಹಿತ್ ಅವರು ಆ್ಯಂಗ್ರಿ ಯಂಗ್ ಮ್ಯಾನ್ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.