ಕನ್ನಡದ ಖ್ಯಾತ ಹಾಸ್ಯನಟರುಗಳಲ್ಲಿ ಒಬ್ಬರಾದ ರಾಕ್ಲೈನ್ ಸುಧಾಕರ್ ನಿಧನರಾಗಿದ್ದಾರೆ. 2012ರಲ್ಲಿ ಡಕೋಟಾ ಅನ್ನೋ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸುಧಾಕರ್, ದಿಗಂತ್ ಅಭಿನಯದ ಪಂಚರಂಗಿ ಸಿನಿಮಾ ಮೂಲಕ ಖ್ಯಾತಿ ಪಡೆದಿದ್ರು. ಬಳಿಕ ಪರಮಾತ್ಮ, ಟೋಪಿವಾಲಾ, ಝೂಮ್, ವಾಸ್ತು ಪ್ರಕಾರ, ಲವ್ ಇನ್ ಮಂಡ್ಯ, ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ, ಮುಕುಂದ ಮುರಾರಿ, ಪ್ರೇಮಗೀಮಾ ಜಾನೇ ದೋ, ಕೆಮಿಸ್ಟ್ರಿ of ಕರಿಯಪ್ಪ, ಉಡುಂಬ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಇಂದು ಸಿಂಪಲ್ ಸುನಿ ನಿರ್ದೇಶಿಸುತ್ತಿರುವ ಸಿನಿಮಾ ಶೂಟಿಂಗ್ ವೇಳೆ ಚಿತ್ರೀಕರಣದ ಸ್ಪಾಟ್ನಲ್ಲೇ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಸ್ಯಾಂಡಲ್ವುಡ್ನ ಖ್ಯಾತ ಪೋಷಕ ನಟ ರಾಕ್ಲೈನ್ ಸುಧಾಕರ್ ವಿಧಿವಶರಾಗಿದ್ದಾರೆ ಅವರ ಆತ್ಮಕೆ ಶಾಂತಿ ಸಿಗಲಿ …..
WhatsApp us