ರಾಘವನ ಅವತಾರದಲ್ಲಿ ಗೆದ್ದ ರಾಬರ್ಟ್ ರಾವಣ..!

ವಿಭಿನ್ನ ಕ್ಯಾರೆಕ್ಟರ್, ಒಬ್ಬ ಬಿಗ್ ಸ್ಟಾರ್ ಆಗಿರೋ ದರ್ಶನ್ ಈ ಸಿನಿಮಾದಲ್ಲಿ ಇಂಥಹದ್ದೊಂದು ಕ್ಯಾರೆಕ್ಟರ್ ಮಾಡಿರೋದು ಅವರ ಸಿನಿ‌ಜರ್ನಿಗೆ ಪ್ಲಸ್ ಪಾಯಿಂಟ್ಸ್.

ರಾಬರ್ಟ್ ರಿಲೀಸ್ ಡೇಟ್ ಆಗಿದ್ದಾಗಿನಿಂದ ರಿಲೀಸ್ ಆದ ಕ್ಷಣದವರೆಗೂ ಮೋಸ್ಟ್ ಎಕ್ಸ್ಪೆಕ್ಟೇಷನ್ ಹುಟ್ಟು ಹಾಕಿರೋ ಹೈ ವೋಲ್ಟೇಜ್ ಸಿನಿಮಾ. ಇಂದು ದೇಶಾದ್ಯಂತ ರಾಬರ್ಟ್ ಸಿನಿಮಾ ರಿಲೀಸ್ ಆಗಿ ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಪಡೀತಿದೆ. ಸಿನಿಮಾ ನೋಡಿದೋರಿಗೆಲ್ಲಾ ಅನ್ಸೋದು ರಾಘವನವತಾರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆದ್ರು ಅಂತಾ. ಡಿ‌ಬಾಸ್ ಸಿನಿಮಾಗಂದ್ರೆ ಬಾಕ್ಸ್ ಆಫೀಸ್ ಗಲ್ಲಾ ಪೆಟ್ಟಿಗೆ ಶೇಕ್ ಆಗೋದು ಕಾಮನ್. ಈ‌ ಬಾರಿ ಬಾಕ್ಸ್ ಆಫೀಸ್ ಜೊತೆ ಕಮರ್ಷಿಯಲ್ ಸಿನಿಮಾವನ್ನ ದರ್ಶನ್ ಶೇಕ್ ಮಾಡಿಸಿದ್ದಾರೆ. ಎಲ್ಲಾ ಕಡೆ ಅವರೇ ಹೇಳಿದ ಹಾಗೆ ಕಮರ್ಷಿಯಲ್ ಸಿನಿಮಾದಲ್ಲಿ ದರ್ಶನ್ ಆ್ಯಕ್ಟಿಂಗ್ ಮಾಡಿದ್ದಾರೆ.

ವಿಭಿನ್ನ ಕ್ಯಾರೆಕ್ಟರ್, ಒಬ್ಬ ಬಿಗ್ ಸ್ಟಾರ್ ಆಗಿರೋ ದರ್ಶನ್ ಈ ಸಿನಿಮಾದಲ್ಲಿ ಇಂಥಹದ್ದೊಂದು ಕ್ಯಾರೆಕ್ಟರ್ ಮಾಡಿರೋದು ಅವರ ಸಿನಿ‌ಜರ್ನಿಗೆ ಪ್ಲಸ್ ಪಾಯಿಂಟ್ಸ್. ದರ್ಶನ್ ಅನ್ನೋ ನೇಮ್ ಗೆ ಹಳೆ ವರ್ಚಸ್ಸು ತಂದು ಕೊಟ್ಟ ಸಿನಿಮಾ ರಾಬರ್ಟ್ ಅಂದ್ರೆ ತಪ್ಪಾಗದು. ಕಲಾಸಿಪಾಳ್ಯ, ಅಯ್ಯ,‌ಸುಂಟರಗಾಳಿಯಲ್ಲಿ ಕಂಡಂತಹ ದರ್ಶನಗ ಮತ್ತೆ ರಾಬರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸಿನಿಮಾಗಳಲ್ಲಿ ಓವರ್ ಜಾಸ್ತಿ, ಡೈಲಾಗ್ಸ್ ಜಾಸ್ತಿ ಅನ್ನೋರೊಗೆ ರಾಬರ್ಟ್ ಉತ್ತರ ಕೊಟ್ಟಿದ್ದಾನೆ‌.

ರಾಮ್ ಭಟ್ ನಂತೆ ರಾಘವ ರಾಬರ್ಟ್ ಆಗಿ ರಾರಾಜಿಸಿದ್ದಾರೆ. ಫಸ್ಟ್ ಆಫ್ ನೋಡಿದೋರಿಗೆಲ್ಲಾ ಒಂದೇ ಅನ್ಸೋದು ನಟನೆಯಲ್ಲಿ ದರ್ಶನ್ ದಶಕಂಠ ರಾವಣನ ದರ್ಶನ ಮಾಡಿಸಿದ್ದಾರೆ ಅಂತಾ. ಸ್ಟೋರಿ, ಆ್ಯಕ್ಷನ್, ಫೈಟ್ಸ್, ಸೆಂಟಿಮೆಂಟ್, ರೌದ್ರಾವತಾರ ಎಲ್ಲವೂ ರಾಬರ್ಟ್ ಚಿತ್ರದಲ್ಲಿದೆ. ನಿರ್ದೇಶಕ ತರುಣ್ ಸುಧೀರ್ ವರ್ಕ್ ಏನು ಅಂತಾ ಸಿನಿಮಾ ಮೂಲಕ ಗೊತ್ತಾಗುತ್ತೆ. ಓವರ್ ಇಲ್ಲದ ದರ್ಶನ್​ರ ಫೈಟ್ ಸೀನ್​ಗಳು, ಡೈಲಾಗ್​ಗಳು ಅಭಿಮಾನಿಗಳಿಗೆ ಸಖತ್ ಕಿಕ್ ಕೊಡುತ್ವೆ. ಆಶಾಭಟ್, ವಿನೋದ್ ಪ್ರಭಾಕರ್, ಜಗಪತಿ ಬಾಬು, ದೇವರಾಜ್, ರವಿಶಂಕರ್, ಚಿಕ್ಕಣ್ಣ, ಶಿವರಾಜ್ ಕೆ.ಆರ್ ಪೇಟೆ ಎಲ್ಲಾ ನಟರು ಸಿನಿಮಾದಲ್ಲಿ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್​ರ ಶ್ರಮ ಸಿನಿಮಾದ ರಿಚ್​ನೆಸ್​ನಲ್ಲಿ ಕಾಣಿಸುತ್ತೆ. ಒಟ್ಟಾರೆ ಬಹು ದಿನಗಳನಂತರ ಚಾಲೆಂಜಿಂಗ್ ಸ್ಟಾರ್​ಗೆ ಹೇಳಿ ಮಾಡಿಸಿದಂತ ಸಿನಿಮಾ ರಾಬರ್ಟ್. ಒಂದೇ ಮಾತಲ್ಲಿ ಹೇಳೋದಾದ್ರೆ ರಾಬರ್ಟ್ ಪಕ್ಕಾ ಪೈಸಾ ವಸೂಲ್ ಸಿನಿಮಾ.