ಕನ್ನಡದ ಖ್ಯಾತ ನಟಿ ರಿಷಿಕಾ ಸಿಂಗ್ ಸ್ಥಿತಿ ನೋಡಿ ಕಣ್ಣೀರಿಟ್ಟ ನಟ.

ಕೆಲವೊಮ್ಮೆ ನಮಗೆ ಗೊತ್ತಿಲ್ಲದೇ ನಡೆಯುವ ಘಟನೆಗಳು ನಮ್ಮ ಜೀವನವನ್ನು ಎಂಥ ದುಸ್ಥಿತಿಗೆ ತಲುಪಿಸಿ ಬಿಡಬಹುದು ಎಂಬುದಕ್ಕೆ ಸ್ಯಾಂಡಲ್ ವುಡ್ ನಟಿ ರಿಷಿಕಾ ಸಿಂಗ್ ಅವರ ಸ್ಥಿತಿಯೇ ಸಾಕ್ಷಿ. ಕಳೆದ ಎರಡುವರೆ ತಿಂಗಳಿನಿಂದ ರಿಷಿಕಾ ಸಿಂಗ್ ಹಾಸಿಗೆ ಹಿಡಿದಿದ್ದಾರೆ.

ರಿಷಿಕಾ ಸಿಂಗ್ ಕನ್ನಡದ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಪುತ್ರಿ ನಟ ಆದಿತ್ಯ ಅವರ ತಂಗಿ. ಕಳೆದ ಜುಲೈ 31ರಂದು ರಿಷಿಕಾ ಸಿಂಗ್ ತಮ್ಮ ಕುಟುಂಬದ ಸಮೇತ ಯಲಹಂಕಾ ಹತ್ತಿರದ ರೆಸಾರ್ಟ್ ಒಂದಕ್ಕೆ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಹೋಗಿದ್ದರು. ಕಾರ್ಯಕ್ರಮ ಮುಗಿಸಿ ಬೆಳಗಿನ ಜಾವ 6 ಗಂಟೆ ಹೊತ್ತಿಗೆ ಕಾರಿನಲ್ಲಿ ಬರುವಾಗ ಯಲಹಂಕಾ ಬಳಿ ಮಾವಳ್ಳಿ ಎಂಬಲ್ಲಿ ರಿಷಿಕಾ ಸಿಂಗ್ ಅವರಿಗೆ ಅಪಘಾತವಾಗಿದೆ‌‌.

ರಿಷಿಕಾ ಅವರ ಕುಟುಂಬ ಸ್ನೇಹಿತರೊಬ್ಬರು ಕಾರನ್ನು ಓಡಿಸುತ್ತಿದ್ದು ಬೆಳಗಿನ ಜಾವ ಈ ಘಟನೆ ನಡೆದಿದೆ. ಕಾರಿನಲ್ಲಿ ಇರುವವರಿಗೆ ಹೆಚ್ಚೇನೂ ಆಗದಿದ್ದರೂ ರಿಷಿಕಾ ಅವರಿಗೆ ಹೆಚ್ಚು ಗಾಯವಾಗಿತ್ತು. ಕೂಡಲೆ ಅಷ್ಟು ಅರಿವಿಗೆ ಬರಲಿಲ್ಲ, ಆದರೆ ಆಸ್ಪತ್ರೆಗೆ ದಾಖಲಿಸುವಾಗ ರಿಷಿಕಾ ಸಿಂಗ್ ಸ್ಪೈನಲ್ ಕಾರ್ಡ್ ಹಾನಿಯಾಗಿರುವುದು ತಿಳಿದುಬಂದಿದೆ. ಈಗಾಗಲೇ ಕೆಲವು ಸರ್ಜರಿಗಳನ್ನು ಮಾಡಿಸಲಾಗಿದ್ದು, ಎಲ್ಲವೂ ಯಶಸ್ವಿಯಾಗಿದೆ.

ಕಳೆದ ಎರಡೂವರೆ ತಿಂಗಳಿನಿಂದ ಹಾಸಿಗೆಯಲ್ಲೇ ಇರುವ ರಿಷಿಕಾ ಇವಾಗ ತುಸು ಚೇತರಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರಿಷಿಕಾ ಅವರ ಚಿಕಿತ್ಸೆಗೆ ಇದುವರೆಗೆ ಲಕ್ಷಾಂತರ ಹಣ ಖರ್ಚು ಮಾಡಲಾಗಿದೆ. ರಾಜೇಂದ್ರ ಸಿಂಗ್ ಬಾಬು ಹಾಗೂ ಮನೆಯವರು ರಿಷಿಕಾ ಸಿಂಗ್ ಅವರ ಈ ಸ್ಥಿತಿ ನೋಡಿ ಕಣ್ಣೀರಿಟ್ಟಿದ್ದಾರೆ. ರಿಷಿಕಾ ಸಿಂಗ್ ಸ್ಯಾಂಡಲ್ ವುಡ್ ನಲ್ಲಿ ಮಾಣಿಕ್ಯ. ಕಳ್ಳ ಮಳ್ಳ ಸುಳ್ಳ. ಕಠಾರಿ ವೀರ ಸುರಸುಂದರಾಂಗಿ. ಮೊದಲಾದ ಚಿತ್ರಗಳಲ್ಲಿ ನಟಿಸಿದ್ದು ಬಿಗ್ ಬಾಸ್ ನಲ್ಲಿಯೂ ಕೂಡ ಕಾಣಿಸಿಕೊಂಡಿದ್ದರು. ಆದರೆ ಇದೀಗ ಕುಳಿತುಕೊಳ್ಳಲೂ ಆಗದಂತ ಸ್ಥಿತಿಯಲ್ಲಿರುವ ರಿಷಿಕಾ ತಾವು ಒಪ್ಪಿಕೊಂಡ ಸಾಕಷ್ಟು ಪ್ರಾಜೆಕ್ಟ್ ಗಳನ್ನು ಕೈಬಿಡಬೇಕಾಗಿದೆ.

ರಿಷಿಕಾ ಸಿಂಗ್ ಅಪಘಾತವಾದ ನಂತರ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆನ್ನಬಹುದು‌‌. ಅವರ ಕಾರು ಮರವೊಂದಕ್ಕೆ ಡಿಕ್ಕಿ ಹೊಡೆದ ಸಂದರ್ಭದಲ್ಲಿ ರಿಷಿಕಾ ಅವರು ಸೀಟ್ ಬೆಲ್ಟ್ ಹಾಕಿದ್ದರೆ ಇಷ್ಟರ ಮಟ್ಟಿಗೆ ತೊಂದರೆ ಯಾಗುತ್ತಿರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಸಾರ್ಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆದಿತ್ಯ ಅವರಿಗೂ ಈ ಘಟನೆ ತುಂಬಾ ನೋವುಂಟು ಮಾಡಿದೆ ಸ್ಪರ್ಶ ಆಸ್ವತ್ರೆಯ ಪ್ರಖ್ಯಾತ ವೈದ್ಯ ಶರಣ್ ಪಾಟೀಲ್ ಅವರ ಬಳಿ ಹೆಚ್ಚಿನ ಚಿಕಿತ್ಸೆಗಾಗಿ ರಿಷಿಕಾ ಕುಟುಂಬದ ಸದಸ್ಯರು ಮಾತನಾಡಿದ್ದಾರೆ ಎನ್ನಲಾಗಿದೆ.