ರಾಣಿ ಜೇನು ರೊಮ್ಯಾಂಟಿಕ್ ಮ್ಯೂಸಿಕ್ ಆಲ್ಬಂ ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆ.

ಸೋನಿ‌‌ ಆಚಾರ್ಯ ಮತ್ತು ಪೂಜಾ ನಾಣಯ್ಯ ನಟಿಸಿರುವ ಈ ಸುಂದರ ಆಲ್ಬಂನ ಚಿತ್ರೀಕರಣ ಶ್ರೀರಂಗಪಟ್ಟಣ, ಕರಿಫಟ್ಟ ಸುತ್ತಮುತ್ತಲಿನ ಸುಂದರ ಪರಿಸರದಲ್ಲಿ ಚಿತ್ರೀಕರಣವಾಗಿದೆ.

ಸಂಗೀತ ಕ್ಷೇತ್ರದಲ್ಲಿ ತನ್ನದೇ ಹೆಸರು ಮಾಡಿರುವ ಜಂಕಾರ್ ಮ್ಯೂಸಿಕ್ ಸಂಸ್ಥೆ ಈವರೆಗೂ ಸಾಕಷ್ಟು ವಿಡಿಯೋ ಆಲ್ಬಂ ಬಿಡುಗಡೆ ಮಾಡಿದೆ. ಈ ಬಾರಿ ಸೋನಿ ಆಚಾರ್ಯ ಅವರ ಸಾರಥ್ಯದಲ್ಲಿ ರಾಣಿ ಜೇನು ಎಂಬ ರೊಮ್ಯಾಂಟಿಕ್ ವಿಡಿಯೋ
ಜಂಕಾರ್ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ.

ಸೋನಿ‌‌ ಆಚಾರ್ಯ ಮತ್ತು ಪೂಜಾ ನಾಣಯ್ಯ ನಟಿಸಿರುವ ಈ ಸುಂದರ ಆಲ್ಬಂನ ಚಿತ್ರೀಕರಣ ಶ್ರೀರಂಗಪಟ್ಟಣ, ಕರಿಫಟ್ಟ ಸುತ್ತಮುತ್ತಲಿನ ಸುಂದರ ಪರಿಸರದಲ್ಲಿ ಚಿತ್ರೀಕರಣವಾಗಿದೆ.

ಸೋನಿ ಆಚಾರ್ಯ ಸಾಹಿತ್ಯ ಬರೆದು, ಸಂಗೀತ ನೀಡಿ, ನಟಿಸಿರುವ ಈ ಆಲ್ಬಂ ಗೆ ರಾಮ್ ಸಂತೋಷ್ ಛಾಯಾಗ್ರಹಣ, ಶಶಾಂಕ್ ಮುರಳೀಧರನ್ ಸಂಕಲನ ಹಾಗೂ ಶ್ರೀಧರ್ ಶ್ರೀ ನೃತ್ಯ ನಿರ್ದೇಶನವಿದೆ.