‘ರಾಜಮಾರ್ತಾಂಡ’ ಸಿನಿಮಾದ ಟ್ರೈಲರ್ ಪೊಗರು ಸಿನಿಮಾದ ಜೊತೆಗೆ ಬಿಡುಗಡೆಯಾಗಲಿದೆ
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ‘ಪೊಗರು’ ಸಿನಿಮಾ ಇದೇ ಫೆಬ್ರವರಿ 19ರಂದು ಬಿಡುಗಡೆಯಾಗ್ತಿದೆ. ನಿರ್ದೇಶಕ ನಂದ ಕಿಶೋರ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾ ಕನ್ನಡ ಮಾತ್ರವಲ್ಲದೇ ತೆಲುಗು ಹಾಗೂ ತಮಿಳು ಭಾಷೆಗಳಲ್ಲೂ ತೆರೆ ಕಾಣಲಿದೆ. ಇದೀಗ ಬಂದಿರೋ ಹೊಸ ಅಪ್ಡೇಟ್ ಏನಪ್ಪ ಅಂದ್ರೆ, ‘ಪೊಗರು’ ಸಿನಿಮಾದ ಇಂಟರ್ವಲ್ನಲ್ಲಿ ಧ್ರುವ ಸಹೋದರ ಚಿರು ದರ್ಶನವಾಗಲಿದೆ ಅನ್ನೋದು.ಹೌದು.. ‘ಪೊಗರು’ ಸಿನಿಮಾದ ಇಂಟರ್ವಲ್ನಲ್ಲಿ ಚಿರಂಜೀವಿ ಸರ್ಜಾ ನಟನೆಯ ‘ರಾಜಮಾರ್ತಾಂಡ’ ಸಿನಿಮಾದ ಟ್ರೈಲರ್ ಪ್ರಸಾರವಾಗಲಿದೆ. ಚಿರಂಜೀವಿ ಸರ್ಜಾ ಕೊನೆಯದಾಗಿ ಶೂಟ್ ಮಾಡಿದ ಸಿನಿಮಾ ಇದಾಗಿದ್ದು, ಈ ಚಿತ್ರದಲ್ಲಿ ಧ್ರುವ ಸರ್ಜಾ ಅಣ್ಣನಿಗೆ ಧ್ವನಿಯಾಗಿದ್ದಾರೆ. ‘ರಾಜಮಾರ್ತಾಂಡ’ ಸಿನಿಮಾದ ಟ್ರೈಲರ್ ಪೊಗರು ಸಿನಿಮಾದ ಜೊತೆಗೆ ಬಿಡುಗಡೆಯಾಗಲಿದೆ ಅನ್ನೋದೇ ವಿಶೇಷ ಹಾಗೂ ಭಾವನಾತ್ಮಕವಾಗಿದೆ.ಈ ಚಿತ್ರಕ್ಕೆ ರಾಮ್ ನಾರಾಯಣ್ ನಿರ್ದೇಶನ ಮಾಡುತ್ತಿದ್ದು, ಶಿವಕುಮಾರ್ ಬಂಡವಾಳ ಹೂಡಿದ್ದಾರೆ.