ನಮ್ಮ ಭರವಸೆಯ ನಟ ರಾಘವ್ ನಾಗ್

“ಹಫ್ತಾ” ಎನ್ನುವ ಚಲನಚಿತ್ರದ ನಂತರ “ಕಡಲ ತೀರದ ಭಾರ್ಗವ” ಎನ್ನುವ ಚಿತ್ರದಲ್ಲಿ ಪೋಲೀಸ್ ಆಫೀಸರ್ ಮತ್ತು ಕಾಲೇಜ್ ಸ್ಟೂಡೆಂಟ್ ಆಗಿ ಎರಡು ಶೇಡ್ ಇರುವ ಪಾತ್ರಗಳನ್ನು ನಿರ್ವಹಿಸಿದ್ದಾರೆ… ಈ ಚಿತ್ರವನ್ನು ಪನ್ನಗಸೋಮಶೇಖರ್ ನಿರ್ದೇಶಿಸಿದ್ದಾರೆ ಮತ್ತು ಭರತ್ ಗೌಡ ಹಾಗೂ ವರುಣ್ ಪಟೇಲ್ ನಿರ್ಮಿಸಿದ್ದಾರೆ… ಈ ಆಕ್ಷನ್ ಥ್ರಿಲ್ಲರ್ ಮೂವಿಯ ಕ್ಯಾಮರಾಮನ್ ಕೀರ್ತನ್ ಪೂಜಾರಿ…ರಾಘವ್ ನಾಗ್ ಇನ್ನೂ ಹೆಸರಿಡದ ಚಿತ್ರವೊಂದರ ಮೆಯ್ನ್ ಲೀಡ್ ಆಗಿರುವ ಪೋಲೀಸ್ ಆಫೀಸರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ…ಇದೊಂದು ಕ್ರೈಂ ಥ್ರಿಲ್ಲರ್ ಆಗಿರಲಿದ್ದು ಇಡೀ ಚಿತ್ರಕಥೆ ಪೋಲೀಸ್ ಇನ್ವೆಸ್ಟಿಗೇಷನ್ ಮೇಲೆ ಸಾಗುತ್ತದೆ… ಈ ಥ್ರಿಲ್ಲಿಂಗ್ ಕಥೆಗೆ ಪ್ರಕಾಶ್ ದಂತಲೂರಿ ಆಕ್ಷನ್ ಕಟ್ ಹೇಳಲಿದ್ದು ಮನೋಹರ್ ಕೊಲ್ಲಿ ಛಾಯಾಗ್ರಹಣ ಮಾಡಲಿದ್ದಾರೆ ಈ ಸಿನೆಮಾವನ್ನು ಶ್ರೀನು ವಿ ನಾಯಕ್ ತಮ್ಮ ಹೈದ್ರಾಬಾದ್ ಚಿತ್ರ ತಂಡದ ಮೂಲಕ ಕನ್ನಡ ಚಿತ್ರರಸಿಕರ ಮುಂದೆ ತರುತ್ತಿದ್ದಾರೆ…ಹಫ್ತಾ ಚಿತ್ರದಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿದ್ದ ಬಸವರಾಜ್ ಈಗ ಸ್ವತಂತ್ರವಾಗಿ ನಿರ್ದೇಶಿಸುತ್ತಿರುವ ಇನ್ನೂ ಹೆಸರಿಡದ ಮತ್ತೊಂದು ಮಾಸ್ ಕ್ರೈಂ ಥ್ರಿಲ್ಲರ್ ಸಿನಿಮಾದಲ್ಲಿ ನಮ್ಮ ಭರವಸೆಯ ನಟ ರಾಘವ್ ನಾಗ್ ಮೇಜರ್ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ…ಈ ಚಿತ್ರದ ಕಥೆ ಅನೇಕ ಟ್ವಿಸ್ಟ್ ಗಳಿಂದ ಕೂಡಿದ್ದು ಈ ಚಿತ್ರಕ್ಕೆ ಸಿದ್ದೇಗೌಡರ ಕ್ಯಾಮರಾ ಕೈಚಳಕವಿರಲಿದೆ…