ಈ ವಾರ ತೆರೆಗೆ ಪುರಸೋತ್ ರಾಮ

ಪ್ರಭುದೇವ್ ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರವನ್ನು ಸರು ನಿರ್ದೇಶಿಸಿದ್ದಾರೆ.

ಮಾನಸದೇವಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮಾನಸ ಅವರು ನಿರ್ಮಿಸಿರುವ ಪುರಸೋತ್ ರಾಮ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪ್ರಭುದೇವ್ ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರವನ್ನು ಸರು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ‌ನಾಲ್ಕು ಹಾಡುಗಳನ್ನು ಪ್ರಭುದೇವ ಹಾಗೂ ಧ್ರುವ ಬರೆದಿದ್ದಾರೆ. ಸುದ್ದೋರಾಯ್ ಸಂಗೀತ ನೀಡಿದ್ದಾರೆ. ಕಿರಣ್ ಕುಮಾರ್ ಛಾಯಾಗ್ರಹಣ, ಚಂದನ್ ಸಂಕಲನ, ಈಶ್ವರಿ ಕುಮಾರ್ ಕಲಾ ನಿರ್ದೇಶನ ಹಾಗೂ ರಾಜಕಿಶೋರ್, ಮದನ್ – ಹರಿಣಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಕಾಮಿಡಿ ಕಥಾ ಹಂದರ ಹೊಂದಿರುವ ಈ ಚಿತ್ರದ ತಾರಾಬಳಗದಲ್ಲಿ ರವಿಶಂಕರ್ ಗೌಡ, ಶಿವರಾಜ್ ಕೆ.ಆರ್ ಪೇಟೆ, ರಿತಿಕ್ ಸರು, ಸಹನ, ಮಾನಸ, ಅನುಷ ಪಕಾಲಿ, ಕುರಿ ಪ್ರತಾಪ, ಬ್ಯಾಂಕ್ ಜನಾರ್ದನ್, ಆರ್.ಟಿ.ರಮ ಮುಂತಾದವರಿದ್ದಾರೆ.