“ಪ್ರಿಯಾಮಣಿ” ಈಗ ಕಿಲ್ಲರ್

ಕನ್ನಡದಲ್ಲಿ ಪ್ರಿಯಾಮಣಿ ನಟಿಸಿದ ಕೊನೆಯ ಚಿತ್ರ ‘ನನ್ನ ಪ್ರಕಾರ’. ಈಗ ಆಕೆ ‘ಕ್ವಿಟೇಷನ್ ಗ್ಯಾಂಗ್’ ಎಂಬ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ. ಇದೊಂದು ಪಕ್ಕಾ ಗ್ಯಾಂಗ್‌ಸ್ಪರ್ ಚಿತ್ರ, ಇದಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ವಿವೇಕ್. ಈ ಚಿತ್ರದ ಮೂಲಕ ಅರುಣ್ ವಿಜಯ್ ಬೆಳ್ಳಿತೆರೆಯಲ್ಲಿ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಈ ಚಿತ್ರ ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳದಲ್ಲಿ ನಿರ್ಮಾಣವಾಗಲಿದೆ. ಕಾಲಿವುಡ್ ನಿರ್ದೇಶಕ ಲೋಕೇಶ್ ಇದರ ಟೈಟಲ್ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ಆಕ್ಷನ್, ರೊಮ್ಯಾಂಟಿಕ್ ಸೇರಿದಂತೆ ಹಲವು ಪಾತ್ರಗಳಿಗೆ ಪ್ರಿಯಾಮಣಿ ಬಣ್ಣ ಹಚ್ಚಿದ್ದಾರೆ. ‘ಕ್ವಿಟೇಷನ್ ಗ್ಯಾಂಗ್’ ಚಿತ್ರದಲ್ಲಿ ಅವರದ್ದು ಕಾಂಟ್ರಾಕ್ಟ್ ಕಿಲ್ಲರ್ ಪಾತ್ರ. ಗಾಯತ್ರಿ ಸುರೇಶ್ ಇದಕ್ಕೆ ಬಂಡವಾಳ ಹೂಡಿದ್ದಾರೆ. ಅಂದಹಾಗೆ ‘ಕ್ವಿಟೇಷನ್ ಗ್ಯಾಂಗ್’ ಎಂಬುದು ದರೋಡೆಕೋರರು ಮತ್ತು ಕೊಲೆಗಡುಕರ ಗುಂಪು. ಕೇರಳದಲ್ಲಿ ಸಕ್ರಿಯವಾಗಿರುವ ಈ ತಂಡದ ಕಾರ್ಯ ಚಟುವಟಿಕೆಯು ಹೊರರಾಜ್ಯಗಳಿಗೂ ವಿಸ್ತರಿಸಿದೆ. ತನ್ನ ಭೀಕರ ಕೃತ್ಯಗಳಿಂದಲೇ ಇದು ಕುಖ್ಯಾತಿ ಪಡೆದಿದೆ. ಸಂಘಟಿತ ಅಪರಾಧ ಚಟುವಟಿಕೆ ನಡೆಸುವುದರಲ್ಲಿ ಗುಂಪಿನವರು ಸಿದ್ಧಹಸ್ತರು. ಮಹಿಳೆಯರೂ ಈ ಗುಂಪಿನಲ್ಲಿದ್ದಾರಂತೆ. ಈ ಗ್ಯಾಂಗ
ರಕ್ತಪಾತದ ಸುತ್ತವೇ ಇದರ ಚಿತ್ರಕಥೆ ಹೆಣೆಯಲಾಗಿದೆ. ಪ್ರಿಯಾಮಣಿ ಪಾಲಿಗೆ ಈ ಸಿನಿಮಾ ವಿಶೇಷತೆಯಿಂದ ಕೂಡಿದೆ. ಅವರು ಈ ಮೂಲಕ ಮತ್ತೆ ತಮಿಳು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅವರು ಕೊನೆಯದಾಗಿ ನಟಿಸಿದ ತಮಿಳು ಚಿತ್ರ ‘ಚಾರುಲತಾ’. ಇದು ತೆರೆಕಂಡಿದ್ದು 2012ರಲ್ಲಿ. ‘ಕ್ವಿಟೇಷನ್ ಗ್ಯಾಂಗ್’ ಮುಂದಿನ ವರ್ಷ ತೆರೆ ಕಾಣುವ ನಿರೀಕ್ಷೆಯಿದೆ.