ಗುರು ದೇಶ್​ಪಾಂಡೆಯ ‘ಪೆಂಟಗನ್’​ ಪ್ರಮುಖ ಪಾತ್ರದಲ್ಲಿ ಪ್ರಕಾಶ್ ಬೆಳವಾಡಿ.

‘ಜಂಟಲ್​ಮನ್’​ ಸಿನಿಮಾ ಮೂಲಕ ನಿರ್ಮಾಪಕರಾದ, ನಿರ್ದೇಶಕ ಗುರು ದೇಶ್​ಪಾಂಡೆ ಮತ್ತೊಂದು ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಐದು ಕಥೆಗಳನ್ನ ಒಳಗೊಂಡ ‘ಪೆಂಟಗನ್’ ಚಿತ್ರವನ್ನು ದೇಶಪಾಂಡೆ ನಿರ್ಮಾಣ ಮಾಡುತ್ತಿದ್ದು, ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ರಘು ಶಿವಮೊಗ್ಗ, ಆಕಾಶ್ ಶ್ರೀವಾತ್ಸವ, ಶಚಂದ್ರ ಮೋಹನ್, ಕಿರಣ್ ಕುಮಾರ್ ಹಾಗೂ ಗುರು ದೇಶಪಾಂಡೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಐದು ಕಥೆಗಳನ್ನು ಚಿತ್ರ ಒಳಗೊಂಡಿದೆ. ಹೆಸರಿನ ಮೂಲಕವೇ ಚಿತ್ರ ಈಗಾಗಲೇ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

 
ಚಿತ್ರದಲ್ಲಿ ಪ್ರಕಾಶ್ ಬೆಳವಾಡಿಯವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಮಾಹಿತಿ ತಿಳಿದುಬಂದಿದ್ದು, ಇಂದು ಪ್ರಕಾಶ್ ಬೆಳವಾಡಿಯವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಈ ಕುರಿತು ಮತ್ತಷ್ಟು ಮಾಹಿತಿಗಳನ್ನು ಬಹಿರಂಗಪಡಿಸುವುದಾಗಿ ಚಿತ್ರದ ತಂಡ ಮಾಹಿತಿ ನೀಡಿದೆ.