ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ “ಅಬ್ಬರ” ಚಿತ್ರದ ಚಿತ್ರೀಕರಣ ಅದ್ದೂರಿಯಾಗಿ ನಡೆಯುತ್ತಿದೆ.

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಕೆ.ರಾಮನಾರಾಯಣ್ ನಿರ್ದೇಶನದಲ್ಲಿ ಬಸವರಾಜ್ ಮಂಚಯ್ಯ ನಿರ್ಮಾಣದ ಅಬ್ಬರ ಸಿನಿಮಾದ ಚಿತ್ರೀಕರಣ ಅಬ್ಬರದಿಂದ ಸಾಗಿದೆ.

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಅಬ್ಬರ ಚಿತ್ರದ ಚಿತ್ರೀಕರಣ ಅದ್ದೂರಿ ಯಾಗಿ ನಡೆಯುತ್ತಿದೆ ಕೆ. ರಾಮನಾರಾಯಣ್ ಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶಿಸುತ್ತಿರುವ ಫ್ಯಾಮಿಲಿ ಎಂಟರ್ಟೈನಿಂಗ್ ಆಕ್ಷನ್ ಚಿತ್ರ. ಪ್ರಜ್ವಲ್ ದೇವರಾಜ್ ಅವರು ಮೊದಲ ಬಾರಿಗೆ ಮೂರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಚಿತ್ರದಲ್ಲಿ ನಾಯಕಿಯಾರಾಗಿ ರಾಶಿಪೊನ್ನಪ್ಪ, ನಿಮಿಕರತ್ನಾಕರ್, ಲೇಖಚಂದ್ರ ಅವರು ಪ್ರಜ್ವಲ್ ದೇವರಾಜ್ ಗೆ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಖಳನಾಯಕನ ಪಾತ್ರದಲ್ಲಿ ರವಿಶಂಕರ್ ಮಿಂಚಲಿದ್ದಾರೆ, ಪೋಷಕಪಾತ್ರದಲ್ಲಿ ಶೋಭರಾಜ್, ಕೋಟೆಪ್ರಭಾಕರ್, ಶಂಕರ್ ಅಶ್ವಥ್, ವಿಕ್ಟರಿ ವಾಸು,ಪ್ರಶಾಂತ್ ನಟನ, ಅರಸು ಮಹಾರಾಜ್, ಮೋಹನ್ ಜುನೇಜ,ಉಮೇಶ್, ಗೋವಿಂದೆ ಗೌಡ, ವಿಜಯ್ ಚೆಂಡೂರ್, ಮೂಗು ಸುರೇಶ್,ಸಲ್ಮಾನ್, ಮಮತಾ ರಾವೂತ್,ಖುಷಿ ಇನ್ನು ಮುಂತಾದವರು ನಟಿಸುತ್ತಿದ್ದಾರೆ.

ರವಿ ಬಸರೂರ್ ಸಂಗೀತ ನಿರ್ದೇಶನದಲ್ಲಿ ಸುಮಧುರ ವಾದ ಹಾಡುಗಳು ಮೂಡಿ ಬರುತ್ತಿವೆ. ಯೋಗರಾಜ್ ಭಟ್ ಅವರು ಎಣ್ಣೆ ಪ್ರಿಯರಿಗೆ ಅದ್ಭುತ ವಾದ ಸಾಹಿತ್ಯ ನೀಡಿದ್ದು ಅದನ್ನು ವಿಜಯ್ ಪ್ರಕಾಶ್ ಹಾಡುತ್ತಿದ್ದಾರೆ. ಇನ್ನು ತಂತ್ರಿಕ ವರ್ಗ ದಲ್ಲಿ ಛಾಯಾಗ್ರಾಹನ ಜೆ . ಕೆ ಗಣೇಶ್, ಸಂಕಲನ ವೆಂಕಟೇಶ್ ಯುಡಿವಿ, ಸಾಹಸ ವಿನೋದ್, ಪಳನಿ ರಾಜ್, ಮಾಸ್ ಮಾದ. ನೃತ್ಯ ರಾಮು, ಮೋಹನ್, ಕಲೈ, ಭೂಶಣ್. C & M ಪ್ರೊಡಕ್ಷನ್ಸ್ ಲ್ಲಿ ಬಸವರಾಜ್ ಮಂಚಯ್ಯ ನವರ ನಿರ್ಮಾಣದಲ್ಲಿ ಅಬ್ಬರ ಚಿತ್ರದ ಚಿತ್ರೀಕರಣ ಅದ್ದೂರಿ ಯಾಗಿ ನಡೆಯುತ್ತಿದೆ