ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಂದ ಕಸ್ತೂರಿ ಮಹಲ್ ಟೀಸರ್ ಬಿಡುಗಡೆ.

ಕನ್ನಡದಲ್ಲಿ ಹಲವು ಯಶಸ್ವಿ ಚಿತ್ರಗಳನ್ನು ನೀಡಿರುವ  ದಿನೇಶ್ ಬಾಬು ಅವರ ನಿರ್ದೇಶನದ  50ನೇ ಚಿತ್ರ ಕಸ್ತೂರಿ ಮಹಲ್.

ಈ ಚಿತ್ರದ ಟೀಸರ್ ಇತ್ತೀಚೆಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದಾರೆ. 

ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ, ಪುನೀತ್ ರಾಜ್‍ಕುಮಾರ್ ಅವರು ‘ನಮ್ಮ ಕುಟುಂಬಕ್ಕೆ ದಿನೇಶ್ ಬಾಬು ಅವರು ಬಹಳ ಆತ್ಮೀಯರು. ಶಿವಣ್ಣ‌ ಅವರ ಇನ್ಸ್‌ಪೆಕ್ಟರ್ ವಿಕ್ರಂ ಹಾಗೂ ನನ್ನ ಅಭಿನಯದ ಅಭಿ ಚಿತ್ರವನ್ನು ದಿನೇಶ್ ಬಾಬು ಅವರೆ ನಿರ್ದೇಶಿಸಿದ್ದಾರೆ. ಇದು ಅವರ ನಿರ್ದೇಶನದ 50ನೇ ಚಿತ್ರ ಎಂದು ತಿಳಿದು ಸಂತೋಷವಾಯಿತು.‌ ಕನ್ನಡದಲ್ಲಿ ಉತ್ತಮ ಚಿತ್ರಗಳನ್ನು ನಿರ್ದೇಶಿಸಿರುವ ದಿನೇಶ್ ಬಾಬು  ಅವರು 100 ಚಿತ್ರಗಳ ನಿರ್ದೇಶನ ಮಾಡಲಿ ಎಂದು ಶುಭ ಕೋರಿದರು’

ಸದ್ಯದಲ್ಲೇ ಪ್ರಥಮಪ್ರತಿ ಸಿದ್ದವಾಗಲಿದ್ದು, ಫೆಬ್ರವರಿಯಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

ಪ್ರಾಕೃತಿಕ ಸೌಂದರ್ಯದ  ಕೊಟ್ಟಿಗೆ ಹಾರ, ಬಾಲೂರು ಸುತ್ತಮುತ್ತಲಿನ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆದಿದೆ ಬಹುಭಾಷ ನಟಿ ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ  ಸ್ಕಂಧ ಅಶೋಕ್, ರಂಗಾಯಣ ರಘು, ಶೃತಿ ಪ್ರಕಾಶ್, ಕಾಶಿಮ ರಫಿ, ನೀನಾಸಂ ಅಶ್ವಥ್ , ಅಕ್ಷರ್ ಮುಂತಾದವರಿದ್ದಾರೆ. ಹಾರಾರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕ ದಿನೇಶ್ ಬಾಬು ಅವರೆ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಶ್ರೀಭವಾನಿ‌ ಆರ್ಟ್ಸ್ ಲಾಂಛನದಲ್ಲಿ ರವೀಶ್ ಆರ್ ಸಿ  ನಿರ್ಮಿಸಿರುವ ಈ ಚಿತ್ರಕ್ಕೆ  ನವೀನ್ ಆರ್ ಸಿ ಹಾಗೂ ಅಕ್ಷಯ್ ಸಿ.ಎಸ್ ಅವರ ಸಹ ನಿರ್ಮಾಣವಿದೆ .ಪಿ.ಕೆ.ಹೆಚ್ ದಾಸ್* ಛಾಯಾಗ್ರಹಣ ಹಾಗೂ *ಹರೀಶ್ ಕೃಷ್ಣ ಅವರ ಸಂಕಲನ ಕಸ್ತೂರಿ ಮಹಲ್ ಗಿದೆ.