ಜೂನಿಯರ್ ಒಡೆಯರ್ ನ ನಾಮಕರಣ ವಿಶೇಷ ರೀತಿಯಲ್ಲಿ ಪುತ್ರನ ಹೆಸರು ರಿವೀಲ್ ಮಾಡಿದ ಪವನ್ ಒಡೆಯರ್ ಹಾಗೂ ಅಪೇಕ್ಷಾ.

ಹೆಸರಲ್ಲೇ ಗತ್ತು ಇರುವ ಅವರ ಸುಪುತ್ರ ಮುಂದೆ ತಾಯಿತರ ನಟನೆ ಮಾಡುತ್ತಾನೊ ಅಥವಾ ತಂದೆ ತರ Passionate Director ಆಗುತ್ತಾನೊ ಅನ್ನೋದು ಕುತೂಹಲ.

ಗೋವಿಂದಾಯ ನಮಃ , ಗೂಗ್ಲಿ ಯಿಂದ ನಟಸಾರ್ವಭೌಮದ ವರೆಗೂ ಸದಭಿರುಚಿ ಚಿತ್ರಗಳನ್ನು ನಿರ್ದೇಶನ ಮಾಡಿ ಕನ್ನಡದ ಎಲ್ಲಾ ಪ್ರೇಕ್ಷಕರನ್ನು ರಂಜಿಸುತ್ತಿರುವ ಖ್ಯಾತ ನಿರ್ದೇಶಕ ಈಗಾಗಲೇ ಹಲವು ಸುದ್ದಿಗಳು ಯಲ್ಲಿರುವ ನಿರ್ದೇಶಕ “ಪವನ್ ಒಡೆಯರ್” ರವರು ಮೊನ್ನೆಯಷ್ಟೇ ಅವರ ಮೊದಲ ಪುತ್ರ ಹುಟ್ಟಿದ ಸಂಭ್ರಮಾಚರಣೆ ಹಂಚಿಕೊಂಡಿರುವ ಸುದ್ದಿ ಎಲ್ಲರಿಗೂ ಗೊತ್ತಿದೆ. ಈಗ ಅವರ ಮಗನ ನಾಮಕರಣದ ಶುಭ ಸಮಾಚಾರದ ಸುದ್ದಿ ಇಲ್ಲಿದೆ.

ಒಡೆಯರ್ ‘Pro Active’ Social Media ದಲ್ಲಿ ಪ್ರತಿನಿತ್ಯ ಹೊಸ ಸಮಾಚಾರಗಳನ್ನು ನೀಡೋದು ನಿಮಗೆಲ್ಲಾ ಗೊತ್ತಿದೆ. ಈಗಾಗಲೇ ರೆಮೋ ಶೂಟಿಂಗ್ ಪೋಸ್ಟ್ ಪ್ರೊಡಕ್ಷನ್ ಮತ್ತು ಹೊಸ ಚಿತ್ರದ ನಿರ್ಮಾಣದಲ್ಲಿರುವ ಅವರು ಇದರ ಮಧ್ಯೆ ಅವರ ಮಗನ ನಾಮಕರಣ ಪತ್ನಿ ಅಪೇಕ್ಷಾ ಪುರೋಹಿತ ಜೊತೆ ಇರುವ ಫೋಟೋ ಬಿಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಪತ್ನಿ ಅಪೇಕ್ಷಾ ಕೂಡ ಕನ್ನಡದ ಖ್ಯಾತ ನಟಿಯೂ ಹೌದು, ಸೀರಿಯಲ್ ನಿಂದ ಶುರುಮಾಡಿ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟು “SIIMA Award” (Best Negative Role) ತೆಗೆದುಕೊಂಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಹಾಗೂ News ಗಳಲ್ಲಿ ಬಂದಿದ್ದು ಗೊತ್ತೇ ಇದೆ. ಹಾಗೆ ಮೊನ್ನೆ ಡಿಸೆಂಬರ್ 31 ತಾರೀಕು ಗುರುವಾರ ಅವರ ಮಗನ ನಾಮಕರಣ ಮಾಡಿದ್ದು ವಿಶೇಷ.

ಹೌದು ಅವರ ಸ್ವಗೃಹದಲ್ಲಿ ಚಂದಮಾಮ ತೊಟ್ಟಿಲಲ್ಲಿ ವಿಶೇಷವಾಗಿ ಅಲಂಕರಿಸಿದ ಸಮಾರಂಭದಲ್ಲಿ ರೆಮೋ ತಂಡ ಹಾಗೂ ನಾಯಕ ಇಶಾನ್ ಮತ್ತು ಆಶಿಕಾ ಕೂಡ ಕುಟುಂಬ ಸಮೇತರಾಗಿ ಹಾಜರಿದ್ದದು ತುಂಬಾ ವಿಶೇಷ. ವಿಶೇಷವಾದ ವಿಡಿಯೋ ತುಣುಕಿನ Presentation ದೊoದಿಗೆ ಎಲ್ಲರನ್ನೂ ಉದ್ದೇಶಿಸಿ ಮಾತನಾಡಿದ ಪತ್ನಿ ಅವರ Love Journey ಯೊಂದಿಗೆ ಶುರುವಾದ ವಿಡಿಯೋ ಮಗನ ಹೆಸರು ರಿವಿಲ್ ನೊಂದಿಗೆ ಚಪ್ಪಾಳೆ ಮೂಲಕ ಸ್ವಾಗತಿಸಿ ಎಲ್ಲರೂ ಖುಷಿ ಪಟ್ಟರು.

ಇವೆಲ್ಲವೂ ಆದ ಮೇಲೆ ಇನ್ನು ನಾವು ಅವನ ಹೆಸರು ಹೇಳದಿದ್ದರೆ ತಪ್ಪಾಗುತ್ತದೆ, ವೀಡಿಯೋ ಪ್ರೆಸೆಂಟೇಶನ್ ಮೂಲಕ ಖುಷಿಯೊಂದಿಗೆ ಬರೆದ ಆ ಲೈನುಗಳು “ನಮಗೆ ಒಬ್ಬ ರಾಜಕುಮಾರ ಹುಟ್ಟಿದಾನೆ, ಅವನನ್ನು ನಾವು ಈ ರೀತಿ ಕರೆಯುತ್ತೇವೆ”

                 

“ಶೌರ್ಯ”

ಹೆಸರಲ್ಲೇ ಗತ್ತು ಇರುವ ಅವರ ಸುಪುತ್ರ ಮುಂದೆ ತಾಯಿತರ ನಟನೆ ಮಾಡುತ್ತಾನೊ ಅಥವಾ ತಂದೆ ತರ Passionate Director ಆಗುತ್ತಾನೊ ಅನ್ನೋದು ಕುತೂಹಲ. ನಮ್ಮ ಟೀಮ್ ಜೊತೆ ಈ ಖುಷಿಯನ್ನು ಹಂಚಿಕೊಂಡಿರುವ ಒಡೆಯರ್ ದಂಪತಿಗೆ ಶುಭಾಶಯಗಳು ಅವರ ಮುಂದಿನ “ರೇಮೊ” ಹಾಗೂ “ಡೊಳ್ಳು” ಚಿತ್ರಗಳಿಗೆ ಶುಭಾಶಯ.