ಶ್ರೀಲಕ್ಷ್ಮೀನರಸಿಂಹಸ್ವಾಮಿ‌‌ ಸನ್ನಿಧಿಯಲ್ಲಿ ಬಂತು ‘ಪರಿಹಾರ’

ಪ್ರವಾಹ ಬಂದು ಸುಮಾರು ಹಳ್ಳಿಗಳು ಕೊಚ್ಚಿ ಹೋಗಿರುತ್ತದೆ. ಒಂದು ಹಳ್ಳಿಯಲ್ಲಿ ಸ್ಕೂಲ್ ಮಾಸ್ಟರ್ ಮತ್ತು ಇಬ್ಬರು ಮಕ್ಕಳು ಬದುಕಿರುತ್ತಾರೆ. ಅವರ ಹೋರಾಟದ ಬಗ್ಗೆಗಿನ ಕಥಾಹಂದರ ಈ ಚಿತ್ರದಲ್ಲಿದೆ.

ಲಕ್ಷ್ಮೀ ಕಲಾಮಂದಿರ ಫಿಲಂಸ್ ಲಾಂಛನದಲ್ಲಿ ‌ಕೆ.ಸಿ.ಗೋವಿಂದಪ್ಪ ಅಂಡ್ ಸನ್ಸ್ ಹಾಗೂ ಜಾಹಿದ್ ಖಾನ್ ಅವರು ನಿರ್ಮಿಸುತ್ತಿರುವ ‘ಬಂತು ಪರಿಹಾರ’ ಚಿತ್ರದ ಮುಹೂರ್ತ ಸಮಾರಂಭ ವಿಜಯನಗರದ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ‌ದೃಶ್ಯಕ್ಕೆ ಮಹಾವೀರ್‌ ಜೈನ್ ಆರಂಭ ಫಲಕ ತೋರಿದರು. ದೇವಸ್ಥಾನದ ಧರ್ಮದರ್ಶಿಗಳಾದ ವೆಂಕಟೇಶ್ ಅವರು ಕ್ಯಾಮೆರಾ ಚಾಲನೆ ಮಾಡಿದರು.ವೇಮಗಲ್ ಜಗನ್ನಾಥ್ ರಾವ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮೂವತ್ತು ದಿನಗಳ ಚಿತ್ರೀಕರಣ ನಡೆಯಲಿದೆ.

ಪ್ರವಾಹ ಬಂದು ಸುಮಾರು ಹಳ್ಳಿಗಳು ಕೊಚ್ಚಿ ಹೋಗಿರುತ್ತದೆ. ಒಂದು ಹಳ್ಳಿಯಲ್ಲಿ ಸ್ಕೂಲ್ ಮಾಸ್ಟರ್ ಮತ್ತು ಇಬ್ಬರು ಮಕ್ಕಳು ಬದುಕಿರುತ್ತಾರೆ. ಅವರ ಹೋರಾಟದ ಬಗ್ಗೆಗಿನ ಕಥಾಹಂದರ ಈ ಚಿತ್ರದಲ್ಲಿದೆ. ಸಾಮಾಜಿಕ‌ ಕಳಕಳಿಯಿರುವ ಈ ಚಿತ್ರದ ತಾರಾಬಳಗದಲ್ಲಿ ನಕುಲ್ ಗೋವಿಂದ್, ಬೇಬಿ ಮನಸ್ವಿನಿ ಗೋವಿಂದ್, ಕೆ.ಹೆಚ್.ಮೀಸೆಮೂರ್ತಿ, ಬ್ಯಾಂಕ್ ಜನಾರ್ದನ್ ಮುಂತಾದವರಿದ್ದಾರೆ. ನಕುಲ್ ಗೋವಿಂದ್ ಈ ಹಿಂದೆ ಸಾಕ್ಷಿ, ಭೀಷ್ಮ, ರಸಪುರಿ, ಕಿಲಾಡಿ ಪೊಲೀಸ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಮೂರು ಹಾಡುಗಳಿರುವ ಈ ಚಿತ್ರಕ್ಕೆ ಅಕ್ಷಯ್ ಜೈನ್ ಸಂಗೀತ ನೀಡುತ್ತಿದ್ದಾರೆ.
ಸೂರಿ ಸಂಶಯ್ ಛಾಯಾಗ್ರಹಣ, ಶಿವಪ್ರಾಸಾದ್ ಯಾದಾವ್ ಸಂಕಲನ ಹಾಗೂ ಕೆ.ಹೆಚ್ ಮೀಸೆ ಮೂರ್ತಿ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.