ಪೇಪರ್ ಬೋಟ್ ನ ಪಯಣ ಶುರುವಾಗಿದೆ

ಪುಟ್ಟರಾಜು ಲವರ್ ಆಫ್ ಶಶಿಕಲಾ ಚಿತ್ರದ ಮೂಲಕ ಬರವಸೆ ಮೂಡಿಸಿದ ಅಪ್ಪಟ ದೇಸಿ ಪ್ರತಿಭೆ ನಿರ್ದೇಶಕ ಸಹದೇವ ಎಚ್ ರವರು ಮುಖವಾಡ ಸಿನಿಮಾ ಚಿತ್ರಿಕರಣದ ಹಂತದಲ್ಲಿರುವಾಗಲೆ ಮತ್ತೊಂದು ಚಿತ್ರವನ್ನು ಕಥೆ ಚಿತ್ರಕಥೆ ಸಂಭಾಷಣೆಯನ್ನು ಬರೆದು ನಿರ್ದೇಶನ ಮಾಡುತ್ತಿದ್ದಾರೆ ಚಿತ್ರದ ಹೆಸರೆ ಪೇಪರ್ ಬೋಟ್ ಈ ಚಿತ್ರವನ್ನು ಸಂಜು ಪಿಕ್ಚರ್ಸ್ ಬ್ಯಾನರ್ ನ ಸಹಯೋಗ ದೊಂದಿಗೆ ಯದುನಂದನ ಸಿನಿಮಾಸ್ ಬ್ಯಾನರ್ ನಲ್ಲಿ ಮೈಸೂರಿನವರಾದ ಸೋಮಶೇಖರ್ ಎನ್ ಹಾಗೂ ಸಹದೇವ ಎಚ್ ಅವರು ನಿರ್ಮಾಣ ಮಾಡುತ್ತಿದ್ದಾರೆ…

ವಾಸ್ತವಕ್ಕೆ ತುಂಬಾ ಹತ್ತಿರವಾದ ಸಿನಿಮಾವಾದ್ದರಿಂದ ಎಲ್ಲಾ ಹೊಸ ಮುಖಗಳನ್ನೇ ಪರಿಚಯಿಸಲಾಗುತ್ತಿದ್ದು ಮುಖ್ಯಭೂಮಿಕೆಯಲ್ಲಿ ಸುರೇಖಾ, ಭೂಮಿಕಾ, ನವೀನ ಶಶಿಕುಮಾರ್ ಅಭಿನಯಿಸುತ್ತಿದ್ದಾರೆ. ಈಗಾಗಲೆ
ಮೊದಲನೇ ಹಂತದ ಚಿತ್ರೀಕರಣವನ್ನು ಹದಿನೈದು ದಿನಗಳ ಕಾಲ ಚಿಕ್ಕಮಗಳೂರು, ಮೂಡಿಗೆರೆ, ಕಳಸ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದ್ದು,ಎರಡನೇ ಹಂತದ ಚಿತ್ರೀಕರಣವನ್ನು ನವೆಂಬರ್ ತಿಂಗಳಿನಲ್ಲಿ ಹೊಸ ನಗರ, ಆಗುಂಬೆ ಸುತ್ತಮುತ್ತ ಚಿತ್ರೀಕರಣ ಮಾಡಬೇಕೆಂದು ಎಲ್ಲಾ ತಯಾರಿಗಳನ್ನು ಚಿತ್ರತಂಡ ಮಾಡಿಕೊಳ್ಳುತ್ತಿದೆ ಎಂದು ನಿರ್ದೇಶಕರಾದ ಸಹದೇವ ಎಚ್ ರವರು ತಿಳಿಸಿದ್ದಾರೆ. ಸಂಗೀತ ಹಾಗು ಹಿನ್ನೆಲೆ ಸಂಗೀತ : ಮಂಜು ಮಹದೇವ್  ಛಾಯಾಗ್ರಾಹಣ : ಆನಂದ್ ಗುಬ್ಬಿ, ಸಂಕಲನ : ವೆಂಕಿ UDV ಸಾಹಿತ್ಯ : ವಿನಯ್ ಪಾಂಡವಪುರ