#NK 04 ನಿಖಿಲ್ ಕುಮಾರಸ್ವಾಮಿ ಅಭಿನಯಿಸುತ್ತಿರುವ ನಾಲ್ಕನೇ ಸಿನಿಮಾ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಿಖಿಲ್​ ಕುಮಾರಸ್ವಾಮಿ ಲಾಕ್​ಡೌನ್​ ಆರಂಭವಾದಾಗಿನಿಂದ ಇಲ್ಲಿಯವರೆಗೆ ತಮ್ಮ ಸಿನಿಮಾಗಳ ಕುರಿತಾಗಿ ಯಾವುದೇ ಮಾಹಿತಿ ನೀಡಿರಲಿಲ್ಲ. ಆದರೆ ಈಗ ನಾಲ್ಕನೇ ಚಿತ್ರದ ಕುರಿತಾಗಿ ಅಪ್ಡೇಟ್ ಕೊಟ್ಟಿದ್ದಾರೆ.

ನಿಖಿಲ್​ ಕುಮಾರಸ್ವಾಮಿ ಕಡೆಗೂ ತಮ್ಮ ಅಭಿಮಾನಿಗಳಿಗೆ ಹೊಸ ಸಿನಿಮಾ ಕುರಿತಾದ ಗುಡ್​ ನ್ಯೂಸ್ ಕೊಟ್ಟಿದ್ದಾರೆ. ಲಾಕ್​ಡೌನ್​ ಆರಂಭವಾದಾಗಿನಿಂದಲೂ ಇಲ್ಲಿಯವರೆಗೆ ಕೇವಲ ರಾಜಕೀಯ ಹಾಗೂ ತಮ್ಮ ವೈಯಕ್ತಿಕ ಜೀವನದ ಕುರಿತಾಗಿ ಪೋಸ್ಟ್ ಮಾಡುತ್ತಿದ್ದ ನಿಖಿಲ್​ ಈಗ, ತಮ್ಮ ನಾಲ್ಕನೇ ಚಿತ್ರದ ಕುರಿತು ಮಾಹಿತಿ ನೀಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅಭಿನಯಿಸುತ್ತಿರುವ ನಾಲ್ಕನೇ ಸಿನಿಮಾಗೆ ಇನ್ನೂ ಟೈಟಲ್​ ಇಟ್ಟಿಲ್ಲ. ಅದಕ್ಕೆ ಅದನ್ನು ಎನ್​ಕೆ 04 ಎಂದು ಕರೆಯಲಾಗುತ್ತಿದೆ.

ಈ ಸಿನಿಮಾದ ಟೈಟಲ್​ ಹಾಗೂ ಮೋಷನ್​ ಪೋಸ್ಟರ್​ ಇದೇ ತಿಂಗಳ 11ಕ್ಕೆ ರಿಲೀಸ್​ ಆಗಲಿದೆ. ನಿಖಿಲ್​ ಅವರ ಈ ಸಿನಿಮಾವನ್ನು ಟಾಲಿವುಡ್​ನ ಖ್ಯಾತ ನಿರ್ದೇಶಕ ನಿರ್ದೇಶನ ಮಾಡುತ್ತಿದ್ದಾರೆ. ತೆಲುಗಿನಲ್ಲಿ ಹಲವಾರು ಲವ್​ ಸ್ಟೋರೀಸ್​ ಕೊಟ್ಟಿರುವ ನಿರ್ದೇಶಕ ಪ್ರೇಮ್​ ಕುಮಾರ್​ ಕೊಂಡ ಈ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ನಿಖಿಲ್​ ಅವರ ನಾಲ್ಕನೇ ಸಿನಿಮಾ ಆ್ಯಕ್ಷನ್​ ಓರಿಯಂಟೆಡ್​ ಆಗಿರಲಿದೆಯಂತೆ. ಲಾಕ್​ಡೌನ್​ನಲ್ಲಿ ಕೃಷಿಯಲ್ಲಿ ತೊಡಗಿಕೊಂಡಿದ್ದು, ಜೊತೆಗೆ ತೋಟದಲ್ಲೇ ಹೆಂಡತಿಗಾಗಿ ಮನೆ ಸಹ ನಿರ್ಮಿಸಲು ಮುಂದಾಗಿದ್ದಾರೆ.ನಿಖಿಲ್​ ಇತ್ತೀಚೆಗೆ, ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ಸ್ಥಾಪಿಸುವ ಹಾಗೂ ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಗೆ ತರುವ ಕುರಿತು ದನಿ ಎತ್ತಿದ್ದಾರೆ.