“ಮುಂದುವರೆದ ಅಧ್ಯಾಯ” ಚಿತ್ರದ ಡೈಲಾಗ್ ಟೀಸರ್ .

ರಿಲೀಸ್ ಆದ ಕೇಲವೆ ಘಂಟೆಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಆರ್ಗ್ಯಾನಿಕ್ ವೀವ್ಸ್ ಇಂದಿನ ಸಮಾಜಕ್ಕೆ ಹಿಡದ ಕನ್ನಡಿಯಂತಿದೆ ಟೀಸರ್ನಲ್ಲಿರುವ ಡೈಲಾಗ್ಸ್ .

ಬಾಲು ಚಂದ್ರಶೇಖರ್ ಚೊಚ್ಚಲ ನಿರ್ದೇಶನದ ,‌ಕಣಜ‌ ಎಂಟರ್ಪ್ರೈಸಸ್ ನಿರ್ಮಾಣದ ಆದಿತ್ಯ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ, ಅನೂಪ್ ಸೀಳಿನ್ ಹಿನ್ನಲೆ‌ ಸಂಗೀತವಿರುವ, ಜಾನಿ ನಿತಿನ್ ಸಂಗೀತ ಸಂಯೋಜಿಸಿದ್ದು . ದಿಲೀಪ್ ಛಾಯಾಗ್ರಹಣದ. ಉಗ್ರಂ ಶ್ರೀಕಾಂತ್ ಸಂಕಲನದ ಮುಂಖ್ಯಮಂತ್ರಿ ಚಂದ್ರು, ಜೈ ಜಗದೀಶ್ ಸಂದೀಪ್ ಕುಮಾರ್, ಅಜಯ್ ರಾಜ್,ಚಂದನ ಗೌಡ, ಆಶೀಕಾ ಸೋಮಶೇಖರ್, ವಿನಯ್ ಕೃಷ್ಣಸ್ವಾಮಿ, ವಿನೋದ್,ಶೋಭನ್ ಮುಖ್ಯಪಾತ್ರದಲ್ಲಿ‌ನಟಿಸಿದ್ದಾರೆ

ಮಾರ್ಚ್ 18 ಸಿನಿಮಾ ರಿಲೀಸ್

ಡೈಲಾಗ್ ಟೀಸರ್ಗೆ ಎಲ್ಲೆಡೆಯಿಂದ ಮೆಚ್ವುಗೆ ವ್ಯಕ್ತವಾಗುತ್ತಿದೆ. ಕಾರಣ ಅದರಲ್ಲಿರುವ ಡೈಲಾಗ್ಸ್ ಹಾಗೂ ಹಿನ್ನಲೆ‌ ಸಂಗೀತ

ನಾವೇ ಗೆಲ್ಲಿಸಿದ ರಾಜಕಾರಣಿಗಳನ್ನ ಬೈತೀವಿ,
ನಮ್ಮನ್ನ ಕಾಯೋ ಪೊಲೀಸ್ ರನ್ನ ಬೈತೀವಿ,
ಸುದ್ದಿ ಮುಟ್ಟಿಸೋ ವಾಹಿನಿಗಳನ್ನ ಬೈತೀವಿ,
ಕಷ್ಟ ನಿವಾರಿಸೋ ಡಾಕ್ಟರ್ಗಳನ್ನ ಬೈತೀವಿ,
ಅನ್ನ ಹಾಕೋ ರೈತ,ಪಾಠ ಮಾಡೋ ಮೇಷ್ಟ್ರು ,
ಊಟ ಕೊಡೊ ಹೋಟ್ಲು,
ಮನೆ ತಲುಪಿಸೋ ಡ್ರೈವರ್ ,
ನಮ್ಮನ್ನ ತಿದ್ದೋ ಕಲಾವಿದ ಹೀಗೆ …
ಎಲ್ಲರನ್ನೂ ಬೈತಿವಿ !
ಆದ್ರೆ ನಾವೂ ಇವ್ರಲ್ಲೇ ಒಬ್ಬರಾಗಿದಿವಿ ಅನ್ನೋದೇ ಮರೀತಿವಿ.
ಬದಲಾವಣೆ ಬಯಸುವುದಲ್ಲ .
ನಾವು ಬದಲಾಗೋದು.

ಎಷ್ಟೋ ಕ್ರೈಂ ಕಥೆಗಳ ನಡುವೆ ಒಂದು ಕ್ರಾಂತಿಯ ಕಥೆ
ಈ ನನ್ನ ಮುಂದುವರೆದ ಅಧ್ಯಾಯ.

We scold the politicians whom we have elected,
we scold the police department who protect us,
we scold the news channels which provides us the news,
we criticize the doctors who try to help us, farmers who provide food,
teachers who educate us,
food providing hotels,
drivers who drop us home safe and the list goes on.
But we tend to forget we are one among them.
” Change is something which should happen within us, not expecting from others “..
This is one revolutionary story, among many crime stories..
It’s my
” mundhuvaredha adhyaya “