ಮುಖವಾಡ

“ಮುಖವಾಡ” ಧರಿಸಿದಿದ ಸಹದೇವ್

ಪುಟ್ಟರಾಜು ಲವರ್ ಆಫ್ ಶಶಿಕಲಾ ಸಿನಿಮಾದ ಮೂಲಕ ಭರವಸೆ ಮುಡಿಸಿರುವ ನಿರ್ದೇಶಕ ಸಹದೇವ H ರವರು ಇದೀಗ “SK BROTHERS COMBINES” ಬ್ಯಾನರ್ ನಲ್ಲಿ “ಮುಖವಾಡ” ಎಂಬ ಚಿತ್ರವನ್ನು ಪ್ರಾರಂಭಿಸಿದ್ದು, ಇದಾಗಲೆ ಮೊದಲನೆ ಹಂತದ ಚಿತ್ರೀಕರಣವನ್ನು ಬೆಂಗಳೂರು ಸುತ್ತಮುತ್ತ ಸುಮಾರು 12 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದ್ದು, 2ನೇ ಹಂತದ ಚಿತ್ರೀಕರಣವನ್ನು ಎಪ್ರಿಲ್ ತಿಂಗಳಲ್ಲಿ ಮಾಡಬೇಕೆಂದು, ಎಲ್ಲಾ ಸಿದ್ದತೆ ಮಾಡಿಕೊಂಡಾಗ,ಕೊರೊನಾ ತೊಂದರೆ ಇಂದ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಯಿತು ….. ಸರ್ಕಾರದ ಆದೇಶದಂತೆ ಲಾಕ್ ಡೌನ್ ಮುಗಿದ ನಂತರದಲ್ಲಿ ಚಿಕ್ಕಮಗಳೂರು ,ಕೇರಳ ,ಬಾಗಲಕೋಟೆ ಹಾಗೂ ಬೆಂಗಳೂರಿನ ಸುತ್ತಮುತ್ತ ಇನ್ನು 2 ಹಂತದಲ್ಲಿ ಚಿತ್ರೀಕರಣ ಮಾಡಿ ಮುಗಿಸಬೇಕೆಂದುಕೊಂಡಿದಿಯಂತೆ ಚಿತ್ರತಂಡ.

ಮುಖವಾಡ ಇದೊಂದು suspense , Triller , Horror Content Blend ಆಗಿರುವ ಸಿನಿಮಾವಾಗಿದ್ದು ನೋಡುಗರಿಗೆ ಮನರಂಜನೆ ಜೊತೆಗೆ ಹೊಸ ಅನುಭವ ಕೊಟ್ಟು, ತಲೆಗೆ ಹುಳ ಬಿಡುವಂತ Expectation ಮಾಡಲಾಗದ ಕ್ಯೂರಿಯಾಸಿಟಿ Build ಮಾಡುವಂತ ಚಿತ್ರಕಥೆ ಇದ್ದು… ಪ್ರತಿಯೊಂದು ಪಾತ್ರಗಳು ನಂಬಿಕೆ ಎನ್ನುವ ಮುಖವಾಡಗಳಾಗಿರುತ್ತವೆ. ಇಲ್ಲಿ ಯಾರು ಯಾರಿಗೆ ಮುಖವಾಡ ಧರಿಸುತ್ತಾರೆ ಎನ್ನುವುದನ್ನ ಕಾದುನೋಡಬೇಕಿದೆ, ವಿಶೇಷ ಪಾತ್ರವೊಂದರಲ್ಲಿ ಖ್ಯಾತ ವಿನೋದ್ ರಾಜ್ ರವರು ಅಭಿನಯಿಸುವ ಸಾದ್ಯತೆಯಿದೆ ಹಾಗೂ ಕುರಿ ಪ್ರತಾಪ್‌ , ಶಂಕರ್ ಅಶ್ವಥ್ , ಕಡ್ಡಿಪುಡಿ ಚಂದ್ರು, ಗಿರಿ , ಇನ್ನು ಅನೇಕ ಕಲಾವಿದರ ದಂಡೆ ಮುಖವಾಡ ಚಿತ್ರದಲ್ಲಿದೆ ಎಂದು ನಿರ್ದೇಶಕರಾದ ಸಹದೇವ H ರವರು ತಿಳಿಸಿದ್ದಾರೆ

ನಾಯಕ : ಪವನ್ ತೇಜ್ ನಾಯಕಿ :ಶಿಲ್ಪ ಮಂಜುನಾಥ್                   ರಚನೆ-ನಿರ್ದೇಶನ :ಸಹದೇವ H
ನಿರ್ಮಾಪಕರು :ಮಲ್ಲೇಶ್ cm ಮೋಟಗಾನಹಳ್ಳಿ                ಕ್ಯಾಮೆರಾಮನ್ : ಆನಂದ್ ಗುಬ್ಬಿ ಸಂಗೀತ : ಮಂಜು ಮಹದೇವ್
ಸಂಕಲನ : ವೆಂಕಿ UDV ಕಾರ್ಯಕಾರಿ ನಿರ್ಮಾಪಕರು : ಲಕ್ಷ್ಮಿ ನಾರಾಯಣ್ ಮತ್ತು ವಿಜಯ್ ಬಾಬು ಸಾಹಿತ್ಯ : ವಿನಯ್ ಪಾಂಡವಪುರ ಮತ್ತು ಸೂರಿ ಅಣಚುಕ್ಕಿ ನೃತ್ಯ ನಿರ್ದೇಶನ :ಮೋಹನ್ ಸಾಹಸ ನಿರ್ದೇಶನ : ಮಾಸ್ ಮಾದ ಮತ್ತು ವಿಕ್ರಮ್ ಮೋರ್ ನಿರ್ದೇಶನ ತಂಡ : ಚಂದ್ರು ಮಳವಳ್ಳಿ , ರಾಜ್ ಕುಮಾರ್ , ಮದನ್ ಕುಲಕರ್ಣಿ ವರ್ಣಾಲಂಕಾರ : ನಾಗೇಶ ವಸ್ತ್ರವಿನ್ಯಾಸ : ಕುಮಾರ್ ಸ್ಥಿರ ಚಿತ್ರಣ : ಸಂತೋಷ ಪೋಸ್ಟರ್ ಡಿಸೈನರ್ : ಅಭಿಷೇಕ್ ಪತ್ರಿಕಾ ಸಂಪರ್ಕ : ನಾಗೇಂದ್ರ