ಈ ವಾರ ತೆರೆಗೆ ‘ಮುಖವಾಡ ಇಲ್ಲದವನು 84’

ವಿಭಿನ್ನ ಶೀರ್ಷಿಕೆಯ ‘ಮುಖವಾಡ ಇಲ್ಲದವನು 84’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಓಂ ನಮಃ ಶಿವಾಯ ಮೂವೀಸ್ ಲಾಂಛನದಲ್ಲಿ ಗಣಪತಿ ಪಾಟೀಲ್ ಬೆಳಗಾವಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಶಿವಕುಮಾರ್(ಕಡೂರ್) ನಿರ್ದೇಶನವನ್ನೂ ಮಾಡಿದ್ದಾರೆ.  ಮದು ಆರ್ಯ, ವಿನಯ್ ಗೌಡ, ಗಿರೀಶ್ ಛಾಯಾಗ್ರಹಣ, ದುರ್ಗ ಪ್ರಸಾದ್ ಸಂಗೀತ ನಿರ್ದೇಶನ ಹಾಗೂ ರುದ್ರೇಶ್ ಲಕ್ಯ ಅವರ ಸಂಕಲನ ಈ ಚಿತ್ರಕ್ಕಿದೆ. ಮಹಾರಾಜ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಶಿವಕುಮಾರ್ (ಕಡೂರ್), ರಚನ ಅಂಬಲೆ, ಅನುಶ್ರೀ, ಕಾವ್ಯ ಗೌಡ, ಸಿ. ಎಸ್.ಪಾಟೀಲ್, ಹರೀಶ್ ಸಾರಾ,
ಆನಂದ್ ಕೋರಾ, ಜಯಸೂರ್ಯ ಹಾಗೂ ಚಿತ್ರದ ನಿರ್ಮಾಪಕ ಗಣಪತಿ ಪಾಟೀಲ್ ಬೆಳಗಾವಿ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.