ಪ್ಯಾನ್ ಇಂಡಿಯಾ ಚಿತ್ರ “ಮಿಂಚು ಮುರುಳಿ”

minchu murali

ಟೋವಿನೊ ಥಾಮಸ್ ಅಭಿನಯದ ಮುಂದಿನ ಪ್ಯಾನ್ ಇಂಡಿಯಾ ಚಿತ್ರ “ಅಧಮ್ಯನಾಯಕನ ಕಥೆ”, “ಮಿಂಚು ಮುರುಳಿ” ಎನ್ನುವ ಕನ್ನಡ ಸಿನಿಮಾದ ಆವೃತ್ತಿ ಟೀಸರ್ ಅನ್ನು ಯಶ್ ಇಂದು ಸಂಜೆ ಸಮಯ 6:15 ಕ್ಕೆ ಬಿಡುಗಡೆಮಾಡಲಿದ್ದಾರೆ. 

ಟೋವಿನೋ ಥಾಮಸ್ ಅಭಿನಯದ “ಮಿಂಚು ಮುರುಳಿ” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆಯಾಗಿದೆ. ಈ ಚಿತ್ರವನ್ನು ಮಲಯಾಳಂ, ತಮಿಳು, ಹಿಂದಿ, ತೆಲುಗು ಮತ್ತು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ನಿರ್ಮಿಸಲಾಗುತ್ತಿದೆ. ಮಲಯಾಳಂ ಮತ್ತು ತಮಿಳು ಭಾಷೆಯಲ್ಲಿ ಈ ಚಿತ್ರಕ್ಕೆ ‘ಮಿನ್ನಲ್ ಮುರಳಿ’  ಹಿಂದಿಯಲ್ಲಿ ‘ಮಿಸ್ಟರ್ ಮುರಳಿ’ ಮತ್ತು ತೆಲುಗಿನಲ್ಲಿ ‘ಮೆರುಪು ಮುರಳಿ’ ಎಂದು ಹೆಸರಿಸಲಾಗಿದೆ.

ಬೆಸಿಲ್ ಜೋಸೆಫ್ ನಿರ್ದೇಶನದ ಚಿತ್ರವನ್ನು ಅರುಣ್ ಅನಿರುದ್ಧನ್ ಮತ್ತು ಜಸ್ಟಿನ್ ಮ್ಯಾಥ್ಯೂ ಬರೆದಿದ್ದಾರೆ. ‘ಜಿಗರ್ತಂಡ’ ಮತ್ತು ‘ಜೋಕರ್’ ಖ್ಯಾತಿಯ ತಮಿಳು ನಟ ಗುರು ಸೋಮಸುಂದರಂ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಅಜು ವರ್ಗೀಸ್, ಬೈಜು, ಹರಿಶ್ರೀ ಅಶೋಕನ್, ಫೆಮಿನಾ ಜಾರ್ಜ್ ಮತ್ತು ಸ್ನೇಹ ಬಾಬು ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.