ಕಿಶನ್ ತನ್ನ ಮುಂದಿನ ಚಿತ್ರವನ್ನು 2021 ರಲ್ಲಿ ಘೋಷಿಸಲಿದ್ದಾರೆ

ಇಂದು ಜನವರಿ 6, 2021, ಅವರ 25ನೆ ವರ್ಷದ ಹುಟ್ಟುಹಬ್ಬದಂದು, ಕರ್ನಾಟಕ ರಾಜ್ಯದ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗದ ಅಧ್ಯಕ್ಷರಾದ ಡಾ|| ಫಾದರ್ ಆಂಟನಿ ಸೆಬಾಸ್ಟಿಯನ್ ಅವರು ಕಿಶನ್ ರವರನ್ನು ಸನ್ಮಾನಿಸಿದರು.

ಮಾಸ್ಟರ್ ಕಿಶನ್ ಎಂದು ಪ್ರೀತಿಯಿಂದ ಕರೆಯಲ್ಪಡುವ ನಮ್ಮ ಕಿಶನ್ ಎಸ್ಎಸ್ ಅವರು, ತಮ್ಮ ಜನ್ಮದಿನ ಆಚರಣೆಯನ್ನು ಬೀದಿ ಮಕ್ಕಳು ಮತ್ತು ಅನಾಥಾಶ್ರಮ ಮಕ್ಕಳೊಂದಿಗೆ ಆಚರಿಸಿದರು. ಈ ಪದ್ಧತಿಯನ್ನು ಅವರು ತಮ್ಮ ಮೊದಲ ಚೊಚ್ಚಲ ನಿರ್ದೇಶನದ ಚಿತ್ರ “ಕೇರ್ ಆಫ್ ಫುಟ್‌ಪಾತ್” ಅನ್ನು ಪ್ರಾರಂಭಿಸಿದ ವರ್ಷದಿಂದ ಆಚರಿಸಿಕೊಂಡು ಬಂದಿದ್ದಾರೆ. ಈ ಚಿತ್ರವೂ ಹಲವಾರು ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಗಿಯಾಗಿದೆ. .

ಇಂದು ಜನವರಿ 6, 2021, ಅವರ 25ನೆ ವರ್ಷದ ಹುಟ್ಟುಹಬ್ಬದಂದು, ಕರ್ನಾಟಕ ರಾಜ್ಯದ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗದ ಅಧ್ಯಕ್ಷರಾದ ಡಾ|| ಫಾದರ್ ಆಂಟನಿ ಸೆಬಾಸ್ಟಿಯನ್ ಅವರು ಕಿಶನ್ ರವರನ್ನು ಸನ್ಮಾನಿಸಿದರು. ಇದೆ ಸಂದರ್ಭದಲ್ಲಿ ಕಿಶನ್ ಬಗ್ಗೆ ಮಾತಾಡಿದ ಅವರು ಕಳೆದ ಹದಿನೈದು ವರ್ಷಗಳಿಂದ ಬೀದಿಮಕ್ಕಳು ಹಾಗು ಬಡಮಕ್ಕಳಿಗಾಗಿ ಮಾಡಿರುವ ಶ್ಲಾಘನೀಯ ಕೆಲಸವನ್ನು ಸ್ಮರಿಸಿದರು. ಕಿಶನ್ ರವರ ಈ ಕೆಲಸವನ್ನು ಭಾರತದ್ಲಲಿ ಮಾತ್ರವಲ್ಲದೆ, ಚಿಕಾಗೋ ವಿಶ್ವ ವಿದ್ಯಾಲಯ ಹಾಗು ಆಂಸ್ಟರ್ಡ್ಯಾಮ್ ನ ಹಲವಾರು NGO ಸಂಸ್ಥೆಗಳು ಗುರುತಿಸಿದ್ದನ್ನು, ಈ ಸಂದರ್ಭದಲ್ಲಿ ಸ್ಮರಿಸಿದರು . ಕಿಶನ್ ಅವರ ಜನ್ಮದಿನವನ್ನು ಪ್ರತಿವರ್ಷ ಹಬ್ಬದಂತೆ ಆಚರಿಸುವ “ಇಕೋ” ಸಂಸ್ಥೆಯ ಮಕ್ಕಳು, ಇಂದು ಅವರ ಜನ್ಮದಿನವನ್ನು ಅನೇಕ NGO ಮತ್ತು ಸಂಸ್ಥೆಗಳ ಮಕ್ಕಳು ಸೇರಿಕೊಂಡು ಆಚರಿಸಿದರು

ಇಲ್ಲಿಯವರೆಗೆ ಕಿಶನ್ ತಮ್ಮದೇ ಆದ ಡಿಜಿಟಲ್ ವೈದ್ಯಕೀಯ ಶಿಕ್ಷಣದ ಕಂಪನಿಯಲ್ಲಿ ತೊಡಗಿಕೊಂಡಿದ್ದು ಅದರಲ್ಲಿ ನೂರಾರು ಆನಿಮೇಟರ್‌ಗಳು ಮತ್ತು ಮಲ್ಟಿಮೀಡಿಯಾ ತಜ್ಞರಿಗೆ ಉದ್ಯೋಗ ನೀಡಿರುತ್ತಾರೆ. ಈಗ ಈ ವೈದ್ಯಕೀಯ ಶಿಕ್ಷಣದ ಸಾಫ್ಟ್ ವೀರ ಇಪ್ಪತ್ತಕ್ಕೂ ಹೆಚ್ಚು ದೇಶಗಳಲ್ಲಿ ಬಳಕೆಯಾಗುತ್ತಿದ್ದು ಕಿಶನ್ ಮತ್ತೆ ಚಿತ್ರರಂಗಕ್ಕೆ ಬರುತ್ತಾರಾ ಎನ್ನುವ ಪ್ರಶ್ನೆ ಕಾಡುತ್ತಿರುವುದು ಸಹಜ . ಇಂದಿನ ಅವರದೆಯಾದ ಅನೌನ್ಸಮೆಂಟ್ “2021 ನನ್ನ ಹೊಸ ಚಿತ್ರದ ಘೋಷಣೆ ಮಾಡುತ್ತೇನೆ”.