‘ಮರ್ಫಿ’ಯಲ್ಲಿ ಗ್ಲಾಮರ್ ಬೊಂಬೆ ನಿಶ್ವಿಕಾ ನಾಯ್ಡು

“ಊರ್ವಿ” ನಿರ್ದೇಶಕ ಬಿ ಎಸ್ ಪ್ರದೀಪ್ ವರ್ಮಾ ಮತ್ತು ನಟ ಪ್ರಭು ಮುಂಡ್ಕೂರ್ ಅವರೀಗ ತಮ್ಮ ಚಿತ್ರ “ಮರ್ಫಿ” ಎಂಬ ರೊಮ್ಯಾಂಟಿಕ್ ಡ್ರಾಮಾಗಾಗಿ ನಾಯಕಿಯನ್ನಾಗಿ ನಟಿ ನಿಶ್ಚಿಕಾ ನಾಯ್ಡು ಅವರನ್ನು ಆಯ್ಕೆ ಮಾಡಿದ್ದಾರೆ. ನಿಶ್ಚಿಕಾ ನಾಯ್ಡು ಪ್ರಜ್ವಲ್ ದೇವರಾಜ್ ಅಭಿನಯದ “ಜಂಟಲ್ ಮ್ಯಾನ್” ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. “ಗಾಳಿಪಟ 2” ರಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿಗೆ “ಮರ್ಫಿ” ಕೂಡ ಒಂದು.

“ಮರ್ಫಿ”ಗೆ ಪ್ರದೀಪ್ ವರ್ಮಾ ಚಿತ್ರಕಥೆ ಬರೆದಿದ್ದು ನಟ ಪ್ರಭು ಮುಂಡ್ಕೂರ್ ಸಹ ಚಿತ್ರಕಥೆ ತಯಾರಿಸಿದ್ದಾರೆ. ಇದು ಪ್ರಭು ಮುಂಡ್ಕೂರ್ ಮತ್ತು ನಿಶ್ವಿಕಾ ಅವರು ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ಮೊದಲ ಚಿತ್ರವಾಗಿದೆ, ವಿಕ್ರಮ್ ರವಿಚಂದ್ರನ್ ಅವರ “ತ್ರಿವಿಕ್ರಮ” ಜತೆಗೆ ಸಂಪರ್ಕ ಹೊಂದಿರುವ ಸೋಮಣ್ಣ “ಮರ್ಫಿ” ಚಿತ್ರದ ನಿರ್ಮಾಪಕರಾಗಿದ್ದಾರೆ. ಜನವರಿ 14, 2021 ರಿಂದ ಚಿತ್ರದ ಶೂಟಿಂಗ್ ಪ್ರಾರಂಭಿಸಲು ಯೋಜನೆ ಸಿದ್ದವಾಗಿದೆ.

ಇನ್ನು ನಟ ಮಂಡ್ಕೂರ್ ಹಾಗೂ ನಿರ್ದೇಶಕರ ನಡುವೆ ಇದು ನಾಲ್ಕನೇ ಸಹಯೋಗವಾಗಿದ್ದು ಮೊದಲು “ಊರ್ವಿ”ಗಾಗಿ ಈ ಇಬ್ಬರೂ ಒಟ್ಟಾಗಿದ್ದರು. ಅದು ಅವರ ಚೊಚ್ಚಲ ಚಿತ್ರವಾಗಿತ್ತು. ಸುಮನ್ ನಗರ್ ಕರ್ ಹಾಗೂ ಅನುಷಾ ಶಂಕರ್ ನಟನೆಯ “ಬ್ರಾಹ್ಮಿ” ಸಹ ಇವರ ಸಂಯೋಜನೆಯ ಚಿತ್ರವಾಗಿದ್ದು ಈ ಚಿತ್ರದ ನಂತರ ನೆಟ್ ಫ್ಲಿಕ್ಸ್ ನಲ್ಲಿ ತೆರೆ ಕಾಣುತ್ತಿರುವ “ದಿ ಫಾಲನ್” ನಲ್ಲಿ ಸಹ ಈ ನಿರ್ದೇಶಕ-ನಟರ ಜೋಡಿ ಒಂದಾಗಿತ್ತು. ಇದೀಗ ಈ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. “ಮರ್ಫಿ” ಅವರ ನಾಲ್ಕನೇ ಯೋಜನೆಯಾಗಿದೆ.ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.