ಮರಳಿ ಮನಸಾಗಿದೆ… ಯುವ ನಿರ್ದೇಶಕ ತ್ರಿವಿಕ್ರಮ ರಘು ರಚನೆ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಕಿರುಚಿತ್ರ ಆನ್ಲೈನಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಯಾವುದೇ ಕೃತಕ ಲೈಟ್ ಇಲ್ಲದೆ ಚಿತ್ರೀಕರಣ ಮಾಡಿ ಅತಿ ಕಡಿಮೆ ಅವಧಿಯಲ್ಲಿ ಚಿತ್ರಿಕರಿಸಿ ಸಣ್ಣ ಕಥೆಯ ಎಳೆಯನ್ನು ಹಿಡಿದುಕೊಂಡು ಮೇಕಿಂಗ್ ಮುಖಾಂತರ ಅದ್ಭುತವಾಗಿ ನಿರ್ದೇಶನ ಮಾಡಿ, ಪ್ರತಿ ದೃಶ್ಯವನ್ನು ಅಚ್ಚುಕಟ್ಟಾಗಿ ಸೆರೆಹಿಡಿದಿದ್ದಾರೆ ವೀಣಾ ನಂದಕುಮಾರ್.
ಹಾಗೆ ಇಡೀ ಕಿರುಚಿತ್ರಕ್ಕೆ ಪ್ರಮುಖವಾಗಿ ಹಿನ್ನೆಲೆ ಸಂಗೀತ ಅದ್ಭುತವಾಗಿ ಮಾಡಿದ್ದಾರೆ ತ್ಯಾಗರಾಜು ಎಂಎಸ್. ಕಲಾವಿದರಲ್ಲಿ ನಾಗರಾಜ್ ಜೋಗಿ ಹಾಗೆ ಜೆಸ್ಸಿಕಾ ಅವಿನಾಶ ಜನಕಟ್ಟಿ ಅಭಿನಯಿಸಿದ್ದಾರೆ. ಈ ಕಿರುಚಿತ್ರಕ್ಕೆ ಬೆನ್ನೆಲುಬಾಗಿ ನಿಂತು ಬಂಡವಾಳ ಹಾಕಿದ್ದಾರೆ ನೇಹನಾಗರಾಜ್ ಒಟ್ಟಾರೆಯಾಗಿ ಈ ಕಿರುಚಿತ್ರ ಒಂದು ಬಾರಿ ನೋಡಿದರೆ ಅದರಮೇಲೆ ಮರಳಿ ಮನಸ್ಸಾಗುತ್ತದೆ.
ನೋಡುಗರ ಮನಸ್ಸಲ್ಲಿ ಈಗಾಗಲೇ ಮಾಧ್ಯಮದಲ್ಲಿ ಎಲ್ಲಾ ಕಡೆ ಉತ್ತಮ ಪ್ರತಿಗೆ ಸಿಗುತ್ತಿದೆ.ಮೊದಲ ಕಿರುಚಿತ್ರ ನಿರ್ದೇಶನದಲ್ಲಿ ತ್ರಿವಿಕ್ರಮ ರಘು ಅವರು ಯಶಸ್ಸು ಕಂಡಿದ್ದಾರೆ. ಈ ಕಿರುಚಿತ್ರವನ್ನು ನೋಡಿ ನಿರ್ಮಾಪಕರು ಮುಂದೆ ಬಂದು ಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದಾರೆ ವಿಶೇಷವಾಗಿ.