ಬೆಳ್ಳಿತೆರೆ ಮೇಲೆ ಜಂಬುಸವಾರಿಗೆ ಸಿದ್ಧಗೊಂಡ “ಮಹಿಷಾಸುರ”

ಏಕರೂಪದ ಕಥಾವಸ್ತುವಿನಿಂದ ಬೇಸರಗೊಂಡಿರುವ ಚಿತ್ರ ರಸಿಕರಿಗೆ ವಿಭಿನ್ನ ರೀತಿಯ ಚಿತ್ರಕಥೆ ಹೊಂದಿರುವ “ಮಹಿಷಾಸುರ” ಚಿತ್ರವು ಹಬ್ಬದೂಟ ಬಡಿಸಲಿದೆ ಎನ್ನುವ ನಿರ್ದೇಶಕರು “ಮಹಿಷಾಸುರ” ಚಿತ್ರವು ಭಾರತಿಯ ಚಿತ್ರರಂಗದ ಇತಿಹಾಸದಲ್ಲೆ ಹೊಸ ಮೈಲಿಗಲ್ಲು ಸ್ಥಾಪಿಸುವ ಚಿತ್ರವಾಗಲಿದೆ ಎನ್ನುವುದು ನಿರ್ದೇಶಕ ಉದಯ್ ಪ್ರಸನ್ನಅವರ ನಂಬಿಕೆ ಮತ್ತು ಕಥೆಯ ಮೇಲೆ ಇರುವ ವಿಶ್ವಾಸ.

ಈ ಮಾತಿಗೆ ಸಾಕ್ಷಿ ಎಂಬಂತೆ, ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೆಟ್ ನೀಡಿ, ಚಿತ್ರವನ್ನು ತಮಿಳಿನ “ಅಸುರನ್” ಚಿತ್ರಕ್ಕೆ ಹೊಲಿಸಿರುವುದು ಹಾಗೂ ಸತ್ಯಕಥೆಯನ್ನು ಆಧರಿಸಿ ನೈಜ್ಯವಾಗಿ ಚಿತ್ರಿಸಿರುವುದು, ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್.

 

ಪ್ರಸ್ತುತ ಕೊರೊನದಿಂದಾಗಿ ಸಾರ್ವಜನಿಕ ಪ್ರದರ್ಶನಕ್ಕೆ ವಿಳಂಬವಾಗಿದ್ದು ಆಗಸ್ಟ್ ತಿಂಗಳ 15ರಂದು “ಮೆಳೇಕೋಟೆ ಟೂರಿಂಗ್ ಟಾಕೀಸ್” ಹಾಗೂ “ಮೈತ್ರಿ ಪ್ರೊಡಕ್ಷನ್” ಸಹಯೋಗದಿಂದ ಚಿತ್ರದ ಟ್ರೈಲರ್ ಬಿಡುಗೊಂಡು ಚಿತ್ರದ ಕುರಿತು ಕುತೂಹಲ ಹೆಚ್ಚಿಸಿದೆ. ಹಾಗೂ ಚಿತ್ರವು ದಸರಾ ಹಬ್ಬದ ಪ್ರಯುಕ್ತ ರಾಜ್ಯದ ಎಲ್ಲಾ ಚಿತ್ರಮಂದಿರಗಳ ಬೆಳ್ಳಿತೆರೆ ಪರದೆ ಮೇಲೆ ಮಹಿಷಾಸುರ ಯಶಸ್ಸಿನ ಪಲ್ಲಕ್ಕಿ ಏರಿ ಜಂಬುಸವಾರಿ ಮಾಡಲಿದೆ ಎಂದು ಗುಟ್ಟು ಬಿಟ್ಟುಕೊಟ್ಟಿದ್ದಾರೆ.

ಚಿತ್ರದಲ್ಲಿ ಅರ್ಜುನ್,ಬಿಂದು ಶ್ರೀ ಹಾಗು ಮಂಜು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಹಾಗೂ ಬಾಲ ಕಲಾವಿದರಾಗಿ ಸಚಿನ್,ತುಷಾರ್ ಮತ್ತು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಶ್ರೀನಿವಾಸ ಆಚಾರ್ಯಿ ನಟಿಸಿದ್ದಾರೆ. ಈಗಾಗಲೇ ಬಿಡುಗಡೆಗೊಂಡಿರುವ ಚಿತ್ರದ ಹಾಡುಗಳು ಮತ್ತು ಟೀಸರ್ ಜನರ ಮೆಚ್ಚುಗೆ ಪಡೆದಿರುವುದು ಚಿತ್ರತಂಡದ ಖುಷಿಯನ್ನು ಇಮ್ಮಡಿಗೊಳಿಸಿದೆ.

ಇದೀಗ, ನಿರ್ದೇಶಕ ಉದಯ್ ಪ್ರಸನ್ನ ಅವರ ನಿರ್ದೇಶನದ ಎರಡನೆ ಚಿತ್ರ “ಬೆಣ್ಣೆಗುಲ್ಕನ್” ಪ್ಯಾನ್ ಇಂಡಿಯಾ ಚಿತ್ರವಾಗಿ ಮೂಡಿ ಬರಲಿದೆ. ಹಾಗೂ ಚಿತ್ರದ ಕಥವಸ್ತು ಮತ್ತು ನಿರೂಪಣೆಯು ವಿಭಿನ್ನವಾಗಿದ್ದು, ಎಲ್ಲಾ ವರ್ಗದ ಜನರನ್ನು ಮನೊರಂಜಿಸುವ ಸದಾಭಿರುಚಿಯ ಚಿತ್ರವಾಗಿದೆ. ಈ ಚಿತ್ರವು “ದಿಕ್ಷ ಸಮೂಹ” ಹಾಗು “ಮೆಳೇಕೋಟೆ ಟೂರಿಂಗ್ ಟಾಕೀಸ್” ಬ್ಯಾನರ್ ನಲ್ಲಿ ಮೂಡಿ ಬರಲಿದ್ದು. ಸದ್ಯದಲ್ಲೇ ಚಿತ್ರ ತಂಡವು ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆ ಮಾಡಲಿದೆ.ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.