“ಅಸುರನ್” ಅಲ್ಲ “ಮಹಿಷಾಸುರ”

ಮಹಿಷಾಸುರ

ಉದಯ್ ಪ್ರಸನ್ನ ನಿರ್ದೇಶನದ “ಮಹಿಷಾಸುರ” ಚಿತ್ರವನ್ನು ವಿಕ್ಷೀಸಿದ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೆಟ್ ನೀಡಿ, ಚಿತ್ರವನ್ನು ತಮಿಳಿನ “ಅಸುರನ್” ಚಿತ್ರಕ್ಕೆ ಹೋಲಿಸಿರುವುದು ಚಿತ್ರತಂಡ ಮತ್ತು ನಿರ್ದೇಶಕರ ಶ್ರಮಕ್ಕೆ ಸಿಕ್ಕ ಉತ್ತಮ ಪ್ರತಿಕ್ರಿಯೆಯಾಗಿದೆ. ಕೊರೊನದಿಂದಾಗಿ ಸಾರ್ವಜನಿಕ ಪ್ರದರ್ಶನಕ್ಕೆ ವಿಳಂಬವಾಗಿದ್ದು ಚಿತ್ರಮಂದಿರಗಳು ಚಿತ್ರಪ್ರದರ್ಶನ ಪ್ರಾರಂಭಿಸಿದ ನಂತರ ರಾಜ್ಯದ ಎಲ್ಲಾ ಚಿತ್ರಮಂದಿರದಲ್ಲಿ ಮಹಿಷಾಸುರ ಬಿಡುಗಡೆಗೊಂಡು ಬೆಳ್ಳಿ ಪರದೆ ಮೇಲೆ ಆರ್ಭಟಿಸಲಿದ್ದಾನೆ. ಈ ಚಿತ್ರದಲ್ಲಿ ಅರ್ಜುನ್,ಬಿಂದು ಶ್ರೀ ಹಾಗು ಮಂಜು ನಟಿಸಿದ್ದಾರೆ.

ಇದೀಗ, ನಿರ್ದೇಶಕ ಉದಯ್ ಪ್ರಸನ್ನ ಅವರ ನಿರ್ದೇಶನದ ಎರಡನೆ ಚಿತ್ರ “ಬೆಣ್ಣೆಗುಲ್ಕನ್” ಪ್ಯಾನ್ ಇಂಡಿಯಾ ಚಿತ್ರವಾಗಿ ಮೂಡಿ ಬರಲಿದೆ. ಹಾಗೂ ಚಿತ್ರದ ಕಥವಸ್ತು ಮತ್ತು ನಿರೂಪನೆಯು ವಿಭಿನ್ನವಾಗಿದ್ದು, ಎಲ್ಲಾ ವರ್ಗದ ಜನರನ್ನು ಮನೊರಂಜಿಸುವ ಸದಾಭಿರುಚಿಯ ಚಿತ್ರವಾಗಿದೆ. ಈ ಚಿತ್ರವು “ದೀಕ್ಷಾ ಸಮೂಹ” ಹಾಗು “ಮೆಳೇಕೋಟೆ ಟೂರಿಂಗ್ ಟಾಕೀಸ್” ಬ್ಯಾನರ್ ನಲ್ಲಿ ಮೂಡಿ ಬರಲಿದೆ. ಚಿತ್ರತಂಡವು ಕಲಾವಿದರ ಅನ್ವೇಷಣೆಯಲ್ಲಿ ತೊಡಗಿದೆ.