ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿರುವ “ಮಾರ್ಗ” ಚಿತ್ರಕ್ಕೆ ನವ ನಿರ್ದೇಶಕ ಮೋಹನ್ ಕಥೆ ಚಿತ್ರಕಥೆ ಬರೆದು ಆಕ್ಷನ್-ಕಟ್ ಹೇಳುತ್ತಿದ್ದಾರೆ ಕನ್ನಡ ಚಿತ್ರರಂಗದಲ್ಲಿ ಸುಮಾರು 8 ವರ್ಷಗಳಿಂದ ಸಹ ನಿರ್ದೇಶಕನಾಗಿ ಹಲವು ಚಿತ್ರಗಳಿಗೆ ಕೆಲಸ ಮಾಡಿದ ಅನುಭವವಿರುವ ಮೋಹನ್ “ಮಾರ್ಗ” ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.
ಈ ಚಿತ್ರದಲ್ಲಿ “ಆ ದಿನಗಳು” ಖ್ಯಾತಿಯ ನಟ ಚೇತನ್ ಅಭಿನಯಿಸುತ್ತಿದ್ದ ಚೇತನ್ ಗೆ ಜೋಡಿಯಾಗಿ ದಿಯಾ ಚಿತ್ರದ ಖುಷಿ ರವಿ ಮತ್ತು “ಏಕ್ ಲವ್ ಯಾ” ಚಿತ್ರದ ರೀಷ್ಮನಾಣಯ್ಯ ನಾಯಕಿಯರಾಗಿ ಅಭಿನಯಿಸಿದ್ದಾರೆ. ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿದ್ದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಚಿತ್ರಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ಮಂಗಳ ಮೂರುತಿ ಪ್ರೊಡಕ್ಷನ್ ಬ್ಯಾನರಿನಡಿಯಲ್ಲಿ ಗೌತಂ ಚಿತ್ರವನ್ನು ನಿರ್ಮಿಸುತ್ತಿದ್ದಾರೆ ಚಿತ್ರಕ್ಕೆ ಎಸ್ ಕೆ ರಾವ್ ಛಾಯಾಗ್ರಹಣವಿದೆ ಅಜನೀಶ್ ಲೋಕನಥ್ ರವರ ಸಂಗೀತವಿದೆ.
WhatsApp us