ಲಂಕಾಸುರ ಚಿತ್ರಕ್ಕೆ ವಿನೋದ್ ಪ್ರಭಾಕರ್ ನಾಯಕ.

ಸಂಕ್ರಾಂತಿ ಸಮಯಕ್ಕೆ ಚಿತ್ರೀಕರಣ ಆರಂಭ.

 

ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸುತ್ತಿರುವ ಲಂಕಾಸುರ ಚಿತ್ರದ ಚಿತ್ರೀಕರಣ ಸಂಕ್ರಾಂತಿ ಸಮಯಕ್ಕೆ ಆರಂಭವಾಗಲಿದೆ. ವಿನೋದ್ ಪ್ರಭಾಕರ್ ಅವರಿಗೆ ನಾಯಕಿಯಾಗಿ ಪಾರ್ವತಿ ಅರುಣ್ ಅಭಿನಯಿಸಲಿದ್ದಾರೆ. ಎ.ಎಂ.ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೇಮಾವತಿ ಮುನಿಸ್ವಾಮಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಹಿಂದೆ ಮೂರ್ಕಲ್ ಎಸ್ಟೇಟ್ ಚಿತ್ರವನ್ನು ನಿರ್ದೇಶಿಸಿದ್ದ, ಪ್ರಮೋದ್ ಕುಮಾರ್ ಲಂಕಾಸುರ ಚಿತ್ರದ ನಿರ್ದೇಶಕರು. ‌ಇದು ಅವರಿಗೆ ಎರಡನೇ ನಿರ್ದೇಶನದ ಚಿತ್ರ.

ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರದ ಟೈಟಲ್ ಇತ್ತೀಚೆಗೆ A2 ಮ್ಯೂಸಿಕ್ ಚಾನಲ್ ಮೂಲಕ ಬಿಡುಗಡೆಯಾಯಿತು. ಬಿಡುಗಡೆಯಾದ ಮೂರು ದಿನಗಳಲ್ಲಿ 150 k ವೀಕ್ಷಿಣೆಗೊಂಡಿದೆ. ವಿಜೇತ್ ಕೃಷ್ಣ ಸಂಗೀತ ನೀಡಿರುವ ಈ ಚಿತ್ರಕ್ಕೆ ಸುಜ್ಞಾನ್ ಅವರ ಛಾಯಾಗ್ರಹಣವಿದೆ.