ಹೊಸಬರ ಲಡ್ಡು ಬಿಡುಗಡೆಗೆ ಸಿದ್ದ

ಬಹುತೇಕ ಹೊಸಬರ ಹೊಸ ಪ್ರಯತ್ನವಾಗಿ ಮೂಡಿಬಂದಿರುವ ಈ ಚಿತ್ರವು ಐದು ಜನ ಯುವಕರು ಹಾಗೂ ಒಬ್ಬ
ಯುವತಿಯ ಸುತ್ತ ನಡೆಯುವ ಘಟನೆಗಳನ್ನು ಒಳಗೊಂಡಿದೆ.

ಕನ್ನಡ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ಕೆ. ರಾಮ್‍ನಾರಾಯಣ್, ಮದನ್, ಕಿಶನ್ ಮೊದಲಾದ ನಿರ್ದೇಶಕರ ಜೊತೆ ಕೆಲಸ ಮಾಡಿರುವ ರಮಾನಂದ್ ಆರ್. ಈಗ ಸ್ವತಂತ್ರವಾಗಿ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಕಥಾಹಂದರ ಹೊಂದಿರುವ ಈ ಚಿತ್ರದ ಹೆಸರು ಲಡ್ಡು.

ಬಹುತೇಕ ಹೊಸಬರ ಹೊಸ ಪ್ರಯತ್ನವಾಗಿ ಮೂಡಿಬಂದಿರುವ ಈ ಚಿತ್ರವು ಐದು ಜನ ಯುವಕರು ಹಾಗೂ ಒಬ್ಬ
ಯುವತಿಯ ಸುತ್ತ ನಡೆಯುವ ಘಟನೆಗಳನ್ನು ಒಳಗೊಂಡಿದೆ. ಬಿಡುಗಡೆಗೆ ಸಿದ್ದವಾಗಿರುವ ಲಡ್ಡು ಚಿತ್ರದ  ಟ್ರೈಲರ್ ಕಳೆದ ವಾರವಷ್ಟೇ ಬಿಡುಗಡೆಯಾಗಿದ್ದು, ಈಗಾಗಲೇ ಎರಡು ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗುವ ಮೂಲಕ ವೈರಲ್ ಆಗಿದೆ.

ವಿದ್ಯಾಸಂಸ್ಥೆಗಳನ್ನು ನಡೆಸುತ್ತಿರುವ ಮೇಘನಾ ವಿ. ಅವರು ಮೊದಲಬಾರಿಗೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹರ್ಷಿತ್, ನವೀನ್, ಸಮೀರ್ ನಗರದ್, ಮಧು ಮತ್ತು ವಿಶಾಲ್ ಈ ಚಿತ್ರದ ಐವರು ನಾಯಕರಾಗಿದ್ದು, ಬಿಂದುಶ್ರೀ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಪಾರು ಖ್ಯಾತಿಯ ಪವಿತ್ರಾ ಬಿ. ನಾಯಕ್, ಮಂಜುಳಾ ರೆಡ್ಡಿ, ರಾಕ್‍ಲೈನ್
ಸುಧಾಕರ್ ಬಣ್ಣ ಹಚ್ಚಿದ್ದಾರೆ. ಬೆಂಗಳೂರು, ಶನಿವಾರಸಂತೆ, ಭಟ್ಕಳ ಸುತ್ತಮುತ್ತ ಸುಮಾರು 52 ದಿನಗಳ ಕಾಲ ಈ ಚಿತ್ರದ ಹಾಡು ಹಾಗೂ ಮಾತಿನ ಭಾಗದ ಶೂಟಿಂಗ್ ನಡೆಸಲಾಗಿದೆ.

ಈ ಚಿತ್ರದ 3 ಹಾಡುಗಳಿಗೆ ನಂದು ತಿಪ್ಪು ಸಂಗೀತ ಸಂಯೋಜನೆ ಮಾಡಿದ್ದು, ಪುರುಷೋತ್ತಮ್ ಕ್ಯಾಮೆರಾವರ್ಕ್ ನಿಭಾಯಿಸಿದ್ದಾರೆ. ನಿಖಿಲ್ ಸಂಭಾಷಣೆ ರಚಿಸಿದ್ದಾರೆ. ಚಿತ್ರಕಥೆಯಲ್ಲಿ ನಿರ್ದೇಶಕರ ಜೊತೆ ರುದ್ರೇಶ್ ಸಹಕಾರ ನೀಡಿದ್ದು, ವೆಂಕಿ ಸಂಕಲನ ಮಾಡಿದ್ದಾರೆ.