ಬೇಸ್ ವಾಯ್ಸ್ ಬಾದ್ ಷಾ ಗೆ ಹುಟ್ಟುಹಬ್ಬದ ಶುಭಾಶಯಗಳು

ಕ್ಲಾಸ್ ಗು ಸೈ ಮಾಸ್ ಗು ಸೈ ಸ್ಯಾಂಡಲ್ ವುಡ್ ನ ಈ ಬೇಸ್ ವಾಯ್ಸ್ ಬಾದ್ ಷಾ ಕಿಚ್ಚ ಸುದೀಪ್ ಗೆ ಕನ್ನಡ ಗೋಲ್ಡ್ ಫ್ರೇಮ್ಸ್ ಕಡೆಯಿಂದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಣ್ಣದ ಬದುಕಿಗೆ ಕಾಲಿಟ್ಟು ಇಪ್ಪತ್ತೈದು ವಸಂತಗಳು ಕಳೆದಿವೆ. ಅವರು ನಡೆದು ಬಂದ ಇಪ್ಪತ್ತೈದು ವರ್ಷಗಳು ಸುಲಭವಾಗಿರಲಿಲ್ಲ  ಹಾಗೆ ನಡೆದು ಬಂದ ಹಾದಿಯಲ್ಲಿ ಸಿಕ್ಕ ಹೂವು, ಮುಳು, ಎರಡು ಸಮಾನ ಮನಸ್ಥಿತಿಯಲ್ಲಿ ಸ್ವೀಕರಿಸಿರುವ ಸುದೀಪ್ ಇವತ್ತು ನ್ಯಾಷನಲ್ ಸ್ಟಾರ್. ಸುದೀಪ್ ಅವರು ಕಲಾವಿದನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ಹಾಡುಗಾರನಾಗಿ, ಚಿತ್ರರಂಗದ ಹಲವು ವಿಭಾಗಗಳಲ್ಲಿ ದುಡಿದಿದ್ದಾರೆ. ಸಿನಿಮಾ ಮೇಲೆ ಅವರಿಗೆ ಆರಂಭದಲ್ಲಿ ಯಾವ ಸತ್ಯನಿಷ್ಠೆ ಇತ್ತು ಅದು ಇವತ್ತಿಗೂ ಹಾಗೇ ಇದೆ. ಸುದೀಪ್ ಪರ್ಫೆಕ್ಷನ್ ಬಯಸುವ ನಟ ಮತ್ತು ನಿರ್ದೇಶಕ.

ಬಹುನಿರೀಕ್ಷಿತ ಕಿಚ್ಚ ಸುದೀಪ್ ಅವರ ಬಯೋಗ್ರಫಿ ಪುಸ್ತಕವನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಬಿಡುಗಡೆ ಮಾಡಲಿದ್ದಾರೆ. ಹಾಗೆ ಕೋಟಿಗೊಬ್ಬ 3 ಚಿತ್ರದ ಟೀಸರ್ ಸಹ ಬಿಡುಗಡೆಯಾಗಿದ್ದು ಇದು ಸುದೀಪ್ ಅವರ ಅಭಿಮಾನಿಗಳಿಗೆ ರಸದೌತಣ ನೀಡಿದಂತಾಗಿದೆ. ಕಿಚ್ಚ ಸುದೀಪ್ ಸದ್ಯಕ್ಕೆ ಅನೂಪ್ ಭಂಡಾರಿ ನಿರ್ದೇಶನದ ”ಫ್ಯಾಂಟಮ್ “ ಚಿತ್ರದಲ್ಲಿ ಬಿಝಿಯಾಗಿದ್ದಾರೆ. ಬಹುನಿರೀಕ್ಷಿತ  ಕೋಟಿಗೊಬ್ಬ 3 ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.