ಕೆಜಿಎಫ್ ರಾಕಿಂಗ್ ಸ್ಟಾರ್ ಯಶ್ ಸ್ಟೈಲಿಷ್ ಕ್ಯಾಲೆಂಡರ್!

ಕನ್ನಡ ಚಿತ್ರರಂಗ ಕಂಡು-ಕೇಳರಿಯದ ಮಟ್ಟಿನ, ಬೆಟ್ಟದಷ್ಟು ಬಂಡವಾಳ ಸುರಿದು ನಿರ್ಮಾಣವಾಗಿತ್ತು ಕೆಜಿಎಫ್.

ಬಹುಕೋಟಿ ನಿರ್ಮಾಣದ ಈ ಚಿತ್ರ ಅಷ್ಟೇ ನಿರೀಕ್ಷೆ ಹುಟ್ಟಿಸಿತ್ತು. ಅದರಂತೆ ಮೊದಲ ಚಾಪ್ಟರ್ ಬಿಡುಗಡೆ ಕಂಡು ನಿರೀಕ್ಷೆಗೂ ಮೀರಿ ಯಶಸ್ಸು ಕಂಡು ನಮ್ಮ ಚಿತ್ರರಂಗದ ಮಟ್ಟವನ್ನೇ ಎತ್ತರಕ್ಕೇರಿಸಿತು. ಕನ್ನಡ ಚಿತ್ರಗಳು ಯಾವುದೇ ಭಾಷಾ ಸಿನಿಮಾಗಳಿಗೆ ಸವಾಲೊಡ್ಡಿ ಸೈ ಎನಿಸಿಕೊಳ್ಳಬಹುದು ಎಂಬಂತೆ, ಪ್ರಪಂಚದ ಬಹುಭಾಗದಲ್ಲಿ ಸದ್ದು ಮಾಡಿತು ಕೆಜಿಎಫ್.

ಮೊದಲಿಗೆ ಗಾಂಧಿ ನಗರದಲ್ಲೊಂದು ಬರಿಯ ಕಟೌಟ್ ಕನಸು ಕಂಡಿದ್ದ ಯಶ್ , ಪ್ಯಾನ್ ಇಂಡಿಯಾ ಸ್ಟಾರ್ ಆದರು. ನಿರ್ದೇಶಕರಾಗಿ ಪ್ರಶಾಂತ್ ನೀಲ್, ಸಂಗೀತ ನಿರ್ದೇಶಕರಾಗಿ ರವಿ ಬಸ್ರೂರು ಸೇರಿದಂತೆ ಹಲವಾರು ತಂತ್ರಜ್ಞರು, ಕಲಾವಿದರು ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದರು. ಇದೀಗ ಪ್ರೇಕ್ಷಕರು ಆಸೆಗಣ್ಣಿನಿಂದ ಕಾಯುತ್ತಿರುವ ಚಾಪ್ಟರ್-2 ಬಿಡುಗಡೆಗೆ ಕೌಂಟ್ಡೌನ್ ಶುರುವಾಗಿದೆ.

ಇತ್ತೀಚೆಗೆ ಸಿನಿಮಾದ ಟೀಸರ್ ಬಿಡುಗಡೆ ಕಂಡು ಪ್ರಪಂಚದಾದ್ಯಂತ ಬಹುಪಾಲು ಹಿಂದಿನ ಎಲ್ಲಾ ದಾಖಲೆಗಳನ್ನು ಪುಡಿಗಟ್ಟಿದೆ. ಅಸಲಿಗೆ ಅದು ನಾಯಕನ ಹುಟ್ಟು ಹಬ್ಬಕ್ಕೆ ಚಿತ್ರತಂಡ ಶುಭಕೋರಿದ ಬರ್ತಡೇ ಟೀಸರ್‌ ಅಷ್ಟೇ . ಈಗಾಗಲೇ ಒಂದು ಹವಾ ಕ್ರಿಯೇಟ್ ಆಗಿದೆ. ಇನ್ನೂ ನೋಡೋಕೆ ತುಂಬಾನೇ ಇದೆ.

ಅದಿರಲಿ, ಇದೀಗ ಕೆಜಿಎಫ್ ಚಿತ್ರದ ಬೆಳವಣಿಗೆಯಲ್ಲಿ ಹೆಮ್ಮರವಾಗಿ ಬೆಳೆದು ನಿಂತಿರುವ ನಟ ರಾಕಿಂಗ್ ಸ್ಟಾರ್ ಯಶ್ ಅವರ ಸುಂದರ ಚಿತ್ರಪಟವನ್ನೊಳಗೊಂಡ ಈ ವರ್ಷದ ಕ್ಯಾಲೆಂಡರನ್ನು ನಮ್ಮ “ಕನ್ನಡ ಗೋಲ್ಡ್ ಫ್ರೇಮ್” ಮೂಲಕ ಹೊರ ತರುತ್ತಿದ್ದೇವೆ. ಕನ್ನಡ ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದ ಕೆಜಿಎಫ್ ಚಿತ್ರ ತಂಡಕ್ಕೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಹೊರ ತಂದ ಕಲರ್ಫುಲ್ ಕ್ಯಾಲೆಂಡರ್ ಇದಾಗಿದ್ದು, ಇದನ್ನು ನಟ ಯಶ್ ಕುಟುಂಬ ಸೇರಿದಂತೆ ಅವರ ವಿಶೇಷವಾದ ಫೋಟೋ ಬಳಸಿ ಮಾಡಲಾಗಿದೆ.

ಕನ್ನಡ ಸಿನಿಮಾಗಳ ಯಶಸ್ಸನ್ನು ಸಂಭ್ರಮಿಸುವ ಪ್ರತಿ ಸಿನಿ ರಸಿಕರೂ, ಅಂತರ್ಜಾಲದ ಮೂಲಕ ನಮ್ಮ ಅಧಿಕೃತ ವೆಬ್ಸೈಟ್ನಲ್ಲಿ (ಲಿಂಕ್ ಬಳಸಿ) ಡೌನ್ಲೋಡ್ ಮಾಡಿಕೊಂಡು, ನಮ್ಮ ಕ್ಯಾಲೆಂಡರ್ ಪಡೆದು ಅಭಿಮಾನ ಮೆರೆಯಲಿ ಎಂಬ ಆಶಯ ಹೊತ್ತು ನಿಮ್ಮ ಮುಂದಿಡುತ್ತಿದ್ದೇವೆ. ಕನ್ನಡ ಚಿತ್ರರಂಗದ ಬಗೆಗಿನ ಸುದ್ದಿ ಪ್ರಸಾರದಲ್ಲಿ ಸದಾ ಸಕ್ರೀಯವಾಗಿ ತೊಡಗಿಸಿಕೊಂಡು, ತನ್ನದೇ ಆದ ರೀತಿಯಲ್ಲಿ ವಿಭಿನ್ನವಾಗಿ ಗುರುತಿಸಿಕೊಳ್ಳುತ್ತಿರುವ ನಮ್ಮ “ಕನ್ನಡ ಗೋಲ್ಡ್ ಫ್ರೇಮ್” ಡಿಜಿಟಲ್ ಮಾಧ್ಯಮದ ಮೂಲಕ ಮುಂದಿನ ದಿನಗಳಲ್ಲಿ ಇದೇ ತೆರನಾದ ಹತ್ತು ಹಲವು ವಿಶೇಷಗಳನ್ನು ನಿಮ್ಮ ಮುಂದೆ ತರುವ ಪ್ರಯತ್ನದಲ್ಲಿದ್ದೇವೆ. ಸದಾ ನಿಮ್ಮ ಪ್ರೋತ್ಸಾಹ ಇರಲಿ.

 

https://drive.google.com/drive/folders/1bN6U0D0jdq3pdmIUGF9y7878wGwUs9FW?usp=sharing